೧೮.೩.೨೦೧೪ ರಂದು ಪರಾತ್ಪರ ಗುರು ಡಾ. ಆಠವಲೆಯವರು ಬರೆದ ಲೇಖನ
ಪರಾತ್ಪರ ಗುರು ಡಾ. ಆಠವಲೆಯವರು ೧೯೯೪ ರಲ್ಲಿ ಹೇಳಿದ ‘ಧರ್ಮರಾಜ್ಯದ ಸ್ಥಾಪನೆಯಲ್ಲಿ ಪುರುಷರಿಗಿಂತ ಸ್ತ್ರೀಯರೇ ಹೆಚ್ಚು ಮುಂದಾಳತ್ವವನ್ನು ವಹಿಸುವರು, ಎಂಬ ವಿಚಾರವನ್ನು ಸಿದ್ಧಪಡಿಸುವ ಸ್ತ್ರೀಯರ ೨೦೧೭ ರಿಂದ ೨೦೨೦ ರ ಅವಧಿಯಲ್ಲಿನ ಪುರುಷರಿಗಿಂತ ಹೆಚ್ಚು ಆಧ್ಯಾತ್ಮಿಕ ಪ್ರಗತಿ !
‘ಪುರುಷರು ಕೈಗಳಲ್ಲಿ (ಅಹಂನ) ಬಳೆಗಳನ್ನು ಧರಿಸಿರುವುದರಿಂದ ಸ್ತ್ರೀಯರೇ ಧರ್ಮಕ್ರಾಂತಿಯನ್ನು ಮಾಡುವರು, ಎಂದು ನಾನು ೧೯೯೪ ನೇ ಇಸವಿಯಲ್ಲಿ ಹೇಳಿದ್ದೆನು. ಕಲಿಯುಗದಲ್ಲಿ ಹಿಂದೂ ರಾಷ್ಟ್ರದ, ಅಂದರೆ ರಾಮರಾಜ್ಯದ, ಧರ್ಮರಾಜ್ಯದ ಸ್ಥಾಪನೆಗಾಗಿ ಈಗ ಸ್ತ್ರೀಯರೇ ಮುಂದಾಳತ್ವವನ್ನು ವಹಿಸುತ್ತಿದ್ದಾರೆ. ಇದರ ಪ್ರತ್ಯಕ್ಷ ಅನುಭವವು ಬರುತ್ತಿದೆ. ಧರ್ಮರಾಜ್ಯದ ಸ್ಥಾಪನೆಗಾಗಿ ಆಧ್ಯಾತ್ಮಿಕ ಶಕ್ತಿಯು ಅತ್ಯಾವಶ್ಯಕವಾಗಿದೆ. ಪುರುಷರಿಗಿಂತ ಸ್ತ್ರೀಯರಲ್ಲಿ ಅದು ಹೆಚ್ಚು ಪ್ರಮಾಣದಲ್ಲಿದೆ. ಇದು ಕೆಳಗಿನ ಕೋಷ್ಟಕದಲ್ಲಿನ ಆಧ್ಯಾತ್ಮಿಕ ಪ್ರಗತಿ ಮಾಡಿಕೊಂಡಿರುವ ಸ್ತ್ರೀ ಮತ್ತು ಪುರುಷರ ಆಧ್ಯಾತ್ಮಿಕ ಮಟ್ಟಗಳಿಗನುಸಾರ ಕೊಡಲಾದ ಸಂಖ್ಯೆಗಳಿಂದ ಗಮನಕ್ಕೆ ಬರುತ್ತದೆ.
೨೦೧೭ ರಿಂದ ೨೦೨೦ ರ ತನಕ ವಿವಿಧ ಆಧ್ಯಾತ್ಮಿಕ ಮಟ್ಟವಿರುವ ಸ್ತ್ರೀ ಮತ್ತು ಪುರುಷ ಸಾಧಕರ ಸಂಖ್ಯೆ
‘ಹಿಂದೂ ರಾಷ್ಟ್ರಕ್ಕೆ ಸಂಬಂಧಿಸಿದ ಮುಂದಿನ ಪ್ರಕ್ರಿಯೆಯಲ್ಲಿ ಸ್ತ್ರೀಯರ ಸಹಭಾಗವು ಪುರುಷರಿಗಿಂತ ಹೆಚ್ಚು ಪ್ರಮಾಣದಲ್ಲಿರುವುದು, ಎಂದು ಅತ್ರಿ ನಾಡಿಭವಿಷ್ಯದಲ್ಲಿ ಹೇಳಲಾಗಿದೆ ! – ಅತ್ರಿ ನಾಡಿವಾಚಕರಾದ ಶ್ರೀ. ವಿ. ಮುದಲಿಯಾರ (ಮಾಘ ಕೃಷ್ಣ ೩, ಕಲಿಯುಗ ವರ್ಷ ೫೧೧೪ (೨೮.೨.೨೦೧೩) – (ಪರಾತ್ಪರ ಗುರು) ಡಾ. ಆಠವಲೆ