ಸಾಧನೆಯ ಬಗ್ಗೆ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರ ಮಾರ್ಗದರ್ಶನ

ಸದ್ಗುರು (ಡಾ.) ಚಾರುದತ್ತ ಪಿಂಗಳೆ

೧. ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಹೇಳಿದ ಮಾರ್ಗದರ್ಶಕ ಅಂಶಗಳು

೧ ಅ. ಮನಸ್ಸೆಂದರೆ ಅತ್ಯಂತ ಹೊಲಸು ಒಟ್ಟಾಗಿರುವ ಚರಂಡಿಯಾಗಿದೆ, ಅದನ್ನು ಸಂಪೂರ್ಣ ಶ್ರದ್ಧೆಯಿಂದ ಮತ್ತು ನಿರಂತರವಾಗಿ ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯನ್ನು ಮಾಡುತ್ತಾ ಮತ್ತು ಅದರ ಶುದ್ಧ ನೀರನ್ನು ಹಾಕುತ್ತಿದ್ದರೆ ಒಂದು ದಿನ ದೇವರ ಕೃಪೆ ಎಂಬ ದೊಡ್ಡ ಮಳೆ ಬಿದ್ದು ತುಂಬಿದ ಮನಸ್ಸುರೂಪಿ ಚರಂಡಿಯನ್ನು ಸ್ವಚ್ಛ ಮಾಡುವುದು ಮತ್ತು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಲು ಸಾಧ್ಯವಾಗುವುದು ! : ಅನೇಕ ಸಾಧಕರಿಗೆ ‘ನಾವು ಕಳೆದ ಎಷ್ಟೋ ವರ್ಷಗಳಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನಾ ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ; ಆದರೆ ನಮ್ಮಲ್ಲಿ ಹೇಳಿಕೊಳ್ಳುವಷ್ಟು ಬದಲಾವಣೆಯಾಗಿಲ್ಲ’, ಎಂದು ಬೇಸರವೆನಿಸುತ್ತದೆ ಮತ್ತು ನಿರಾಶೆ ಬರುತ್ತದೆ. ಇಲ್ಲಿ ಗಮನದಲ್ಲಿಡಬೇಕಾದ ವಿಷಯವೆಂದರೆ, ನಮ್ಮ ಮನಸ್ಸೆಂದರೆ ಅತ್ಯಂತ ಹೊಲಸು ತುಂಬಿದ ಚರಂಡಿಯಾಗಿದೆ. ನಮ್ಮ ಸ್ವಭಾವದೋಷ ಮತ್ತು ಅಹಂ ನಿರ್ಮೂಲನಾ ಪ್ರಕ್ರಿಯೆಯೆಂದರೆ ಒಂದು ಚಿಕ್ಕ ಲೋಟದಿಂದ ಇಷ್ಟು ವರ್ಷಗಳಿಂದ ತುಂಬಿದ ಚರಂಡಿಯನ್ನು (ಮನಸ್ಸನ್ನು) ಸ್ವಚ್ಛ ಮಾಡಿದಂತಿದೆ. ನಮ್ಮ ಈ ಚಿಕ್ಕ ಪ್ರಯತ್ನದಿಂದ ಇಷ್ಟು ದೊಡ್ಡ ತುಂಬಿದ ಈ ಮನರೂಪಿ ಚರಂಡಿ ಹೇಗೆ ಸ್ವಚ್ಛವಾಗುವುದು ? ನಾವು ಆ ಚಿಕ್ಕ ಲೋಟದಿಂದ (ನಮ್ಮ ನಿಯಮಿತ ಪ್ರಕ್ರಿಯೆ) ನಿಯಮಿತವಾಗಿ, ಸಂಪೂರ್ಣ ಶ್ರದ್ಧೆಯಿಂದ ಮತ್ತು ನಿರಂತರವಾಗಿ ನೀರು ಹಾಕುತ್ತಿದ್ದರೆ, ಒಂದು ದಿನ ದೇವರು ದೊಡ್ಡ ಮಳೆಯನ್ನು (ಗುರುಗಳ ಕೃಪೆಯಾಗುತ್ತದೆ) ಸುರಿಸುತ್ತಾನೆ ಮತ್ತು ನಮ್ಮ ಇಷ್ಟು ವರ್ಷಗಳಿಂದ ತುಂಬಿದ ಮನಸ್ಸುರೂಪಿ ಚರಂಡಿ ಮಳೆಯ ನೀರಿನ ಪ್ರವಾಹದಿಂದ ಸಂಪೂರ್ಣ ಸ್ವಚ್ಛವಾಗುತ್ತದೆ (ನಾವು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುತ್ತೇವೆ). ಆದುದರಿಂದ ಸಾಧಕರು ನಿಯಮಿತವಾಗಿ, ಶ್ರದ್ಧೆಯಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನಾ ಪ್ರಕ್ರಿಯೆಯನ್ನು ನಡೆಸಬೇಕು ಮತ್ತು ತಮ್ಮ ಉದ್ಧಾರವನ್ನು ಮಾಡಿ ಕೊಳ್ಳಬೇಕು.’ – (ಪೂ.) ಡಾ. ಪಿಂಗಳೆ (೨೫.೪.೨೦೧೩)

೧ ಆ. ಗುರುಭಕ್ತಿಯೇ ವ್ಯಷ್ಟಿ ಮತ್ತು ಸಮಷ್ಟಿ ಕಾರ್ಯದ ಗುರುಕೀಲಿಕೈಯಾಗಿದೆ ! : ‘ಕೇವಲ ಸಾಧಕರದ್ದಷ್ಟೇ ಅಲ್ಲ, ಪ್ರತಿಯೊಬ್ಬ ಮನುಷ್ಯನ ಜನ್ಮದ ಧ್ಯೇಯವು ಈಶ್ವರಪ್ರಾಪ್ತಿ, ಅಂದರೆ ಆನಂದಪ್ರಾಪ್ತಿಯೇ ಆಗಿದೆ. ಕಾಲಾನುಸಾರ ಈ ಧ್ಯೇಯವನ್ನು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಮಾಧ್ಯಮದಿಂದ ಪ್ರಾಪ್ತ ಮಾಡಿಕೊಳ್ಳುವುದಿದೆ. ವ್ಯಷ್ಟಿ ಸಾಧನೆಯ ಸ್ವರೂಪದಲ್ಲಿ ಸಗುಣ ಗುರುಕೃಪೆಯ ಮಾಧ್ಯಮದಿಂದ ವೈಯಕ್ತಿಕ ಆನಂದಪ್ರಾಪ್ತಿಯ ಕಡೆಗೆ ಹೋಗುವುದು ಮತ್ತು ಸಮಷ್ಟಿ ಸಾಧನೆಯ ಸ್ವರೂಪದಲ್ಲಿ ನಿರ್ಗುಣ ಗುರುತತ್ತ್ವದ ಧರ್ಮಸ್ವರೂಪದೊಂದಿಗೆ ಏಕರೂಪವಾಗುವುದು, ಅಂದರೆ ಸಮಷ್ಟಿಯನ್ನು ಆನಂದಮಯ ಮಾಡುವುದು. ‘ಹಿಂದೂ ರಾಷ್ಟ್ರ’ ಸ್ಥಾಪನೆಯು ಗುರುಗಳ ಸಮಷ್ಟಿ, ಅಂದರೆ ಧರ್ಮಸ್ವರೂಪದೊಂದಿಗೆ ಏಕರೂಪತೆಯನ್ನು ನೀಡುವ, ಅಂದರೆ ಎಲ್ಲ ಪ್ರಾಣಿ ಮಾತ್ರರಿಗೆ ಆನಂದವನ್ನು ನೀಡುವ ಸಾಧನೆಯಾಗಿರುವುದರಿಂದ ಅದು ಮೋಕ್ಷದಾಯಕವಾಗಿದೆ. ವ್ಯಷ್ಟಿಯಿರಲಿ ಅಥವಾ ಸಮಷ್ಟಿಯಿರಲಿ, ಯಾವುದೇ ಮಾರ್ಗದಿಂದ ಹೋಗಲು ಶ್ರೀಗುರುಗಳ ಮಾರ್ಗದರ್ಶನ ಮತ್ತು ಅವರ ಕೃಪೆಯನ್ನು ಪಡೆದುಕೊಳ್ಳುವುದು ಅತೀ ಆವಶ್ಯಕವಾಗಿದೆ. ಗುರು ಭಕ್ತಿಯೇ ವ್ಯಷ್ಟಿ ಮತ್ತು ಸಮಷ್ಟಿ ಕಾರ್ಯದ ಗುರುಕೀಲಿಕೈಯಾಗಿದೆ.

‘ಹೇ ಶ್ರೀಗುರುದೇವರೇ, ನಮ್ಮೆಲ್ಲ ಸಾಧಕರಿಗೆ, ಹಾಗೆಯೇ ಹಿಂದುತ್ವದ ಕಾರ್ಯವನ್ನು ಮಾಡುವ ಹಿಂದುಷ್ಠನಿಷ್ಠರಿಗೆ ಸತತವಾಗಿ ಯೋಗ್ಯ ಸಾಧನೆಯನ್ನು ಮಾಡುವ ಸದ್ಬುದ್ಧಿ ಲಭಿಸಲಿ. ನಮ್ಮಿಂದ ಸ್ವಭಾವದೋಷ ಮತ್ತು ಅಹಂಭಾವ ನಿರ್ಮೂಲನೆಯ ಪ್ರಕ್ರಿಯೆಯನ್ನು ಮನಃಪೂರ್ವಕ ಮತ್ತು ಆನಂದದಿಂದ ಮಾಡಿಸಿಕೊಳ್ಳಿರಿ. ‘ಹಿಂದೂ ರಾಷ್ಟ್ರ’ದ ಯುಗವನ್ನು ನಿರ್ಮಾಣ ಮಾಡುವ ನಿಮ್ಮ ಕಾರ್ಯದಲ್ಲಿ ನಮ್ಮೆಲ್ಲರಿಂದ ಅಳಿಲು ಸೇವೆಯಂತೆ ದೊರಕಿದ ಸೇವೆಯನ್ನು ಸಾಧನೆ ಎಂದು ಮಾಡಿಸಿಕೊಂಡು ನಮ್ಮ ಉದ್ಧಾರವನ್ನು ಮಾಡಿರಿ’, ಇದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ.’ – (ಪೂ.) ಡಾ. ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ. (೯.೭.೨೦೧೩)

೧ ಇ. ನಾಮಜಪದ ಹಂತಗಳು !

೧. ‘ಮೊದಲು ನಾಮಜಪ ಹೇಗೆ ಆಗುತ್ತದೆಯೋ, ಹಾಗೆ ಮಾಡಬೇಕು.

೨. ತದನಂತರ ಒಂದು ಲಯದಿಂದ ಜಪ ಮಾಡಲು ಪ್ರಯತ್ನಿಸಬೇಕು.

೩. ನಂತರ ನಾಮಜಪವನ್ನು ಸಂಖ್ಯಾತ್ಮಕವಾಗಿ ಹೆಚ್ಚಿಸುವ ಮತ್ತು ಭಾವಪೂರ್ಣವಾಗಿ ಮಾಡುವ ಪ್ರಯತ್ನವನ್ನು ಮಾಡಬೇಕು. ಕೊನೆಗೆ ನಮಗೆ ಆಕಾಶತತ್ತ್ವದ ಜೊತೆಗೆ ಏಕರೂಪವಾಗುವುದಿದೆ. (ಹನುಮಂತನು ವಾಯುಪುತ್ರನಾಗಿದ್ದು ಜನ್ಮದಿಂದಲೇ ತೇಜದ ಮೇಲೆ ಅವನ ನಿಯಂತ್ರಣವಿತ್ತು. ಮುಂದೆ ಹನುಮಂತನು ರಾಮನೊಂದಿಗೆ, ಅಂದರೆ ಆಕಾಶ ತತ್ತ್ವದೊಂದಿಗೆ ಏಕರೂಪನಾದನು.)

ಹೇಗೆ ನಾವು ಒಂದು ಚತುಷ್ಟಚಕ್ರ ವಾಹನವನ್ನು ನಡೆಸಲು ಹಂತಹಂತವಾಗಿ ಕಲಿಯುತ್ತೇವೆಯೋ, ಹಾಗೆಯೇ ನಾಮಜಪವನ್ನು ಮಾಡಲು ಹಂತ ಹಂತವಾಗಿ ಕಲಿಯಬೇಕು.’

೧ ಈ. ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡುವುದರ ಮಹತ್ವ

೧ ಈ. ೧. ಸಾಧನೆಯಿಂದ ದೇಹದಲ್ಲಿನ ಷಟ್‌ಚಕ್ರಗಳು ಜಾಗೃತವಾಗುತ್ತವೆ : ‘ಸಾಧನೆಯನ್ನು ಮಾಡಿದರೆ ದೇಹದಲ್ಲಿನ ಷಟ್‌ಚಕ್ರಗಳು ಜಾಗೃತವಾಗುತ್ತವೆ. ನಾಮಜಪ, ಭಾವಜಾಗೃತಿ ಮತ್ತು ಗುಣಸಂವರ್ಧನೆ ಇವುಗಳಿಂದ ತಾರಕ ಸ್ವರೂಪದಲ್ಲಿನ ಈಶ್ವರೀ ಅಂಶವು ಜಾಗೃತವಾಗುತ್ತದೆ ಮತ್ತು ಸ್ವಭಾವದೋಷ (ರಾಕ್ಷಸ) ಅದೇ ರೀತಿ ಅಹಂ (ರಾವಣ) ಇವುಗಳ ನಿರ್ಮೂಲನೆಯ ಮೂಲಕ ಈಶ್ವರನ ಮಾರಕ ರೂಪ (ತತ್ತ್ವ)ವು ಜಾಗೃತವಾಗುತ್ತದೆ. ಎರಡೂ ತತ್ತ್ವಗಳು ಪೂರ್ಣ ಸ್ವರೂಪದಲ್ಲಿ ಜಾಗೃತವಾಗುವುದರಿಂದ ಈಶ್ವರಪ್ರಾಪ್ತಿಯು ಸಾಧ್ಯವಾಗುತ್ತದೆ.

೧ ಈ ೨. ಭಾವವವನ್ನಿಟ್ಟುಕೊಂಡು ಕೃತಿಗಳನ್ನು ಮಾಡಿದರೆ ಸಾಧಕರಲ್ಲಿನ ಈಶ್ವರನ ತಾರಕ ರೂಪ ಜಾಗೃತವಾಗುತ್ತದೆ : ಸಾಧನೆಯನ್ನು ಮಾಡುವಾಗ (ಗುರುಪ್ರಾಪ್ತಿಯಾಗುವ ಮೊದಲು ಮತ್ತು ನಂತರ) ಜೀವನದಲ್ಲಿನ ಎಲ್ಲ ವ್ಯವಹಾರಗಳನ್ನು (ಪ್ರತಿಯೊಂದು ಕೃತಿಯನ್ನು) ‘ಸಾಧನೆ ಎಂದು ಮತ್ತು ಶ್ರೀ ಗುರುಗಳ ಕೃಪೆ ಪ್ರಾಪ್ತವಾಗಬೇಕೆಂದು ಮಾಡುತ್ತಿದ್ದೇವೆ’, ಎಂಬ ಭಾವವನಿಟ್ಟುಕೊಳ್ಳಬೇಕು. ಇದರಿಂದ ಶೀಘ್ರ ಆಧ್ಯಾತ್ಮಿಕ ಪ್ರಗತಿಯಾಗಲು ಸಾಧ್ಯವಾಗುತ್ತದೆ. ಇದರಿಂದ ಸಾಧಕರಲ್ಲಿನ ಈಶ್ವರನ ತಾರಕ ರೂಪ ಜಾಗೃತವಾಗುತ್ತದೆ.

೧ ಈ ೩. ಅಷ್ಟಾಂಗ ಸಾಧನೆಯನ್ನು ಮಾಡುವಾಗ ಪ್ರತಿಯೊಂದು ಹಂತದಲ್ಲಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಯತ್ನವನ್ನು ಮಾಡಬೇಕು : ಈ ಪ್ರಯತ್ನದಿಂದ ಆಯಾ ಚಕ್ರಗಳಿಗೆ ಸಂಬಂಧಿಸಿದ ದೋಷಗಳ ಶುದ್ಧೀಕರಣವಾಗುತ್ತಿರುವಾಗ, ಅಲ್ಲಿ ಸಾತ್ತ್ವಿಕ ಮತ್ತು ತಿರ್ಯಕ ಲಹರಿಗಳಲ್ಲಿ ಸೂಕ್ಷ್ಮ ಯುದ್ಧ ಪ್ರಾರಂಭವಾಗುತ್ತದೆ. ಸಾಧಕರಲ್ಲಿನ ಸ್ವಭಾವ ದೋಷ ಅಥವಾ ಅಹಂಭಾವ (ರಾಕ್ಷಸ ಅಥವಾ ರಾವಣ) ಸ್ವರೂಪದಲ್ಲಿನ ತಿರ್ಯಕ ಲಹರಿಗಳೊಂದಿಗೆ ಸಾಧಕರ ಭಾವ, ಶ್ರೀ ಗುರುಗಳ ಬಗೆಗಿನ ಶ್ರದ್ಧೆ, ಸಾಧನೆ ಮತ್ತು ಈಶ್ವರಪ್ರಾಪ್ತಿಯ ತಳಮಳ, ಹಾಗೆಯೇ ಶ್ರೀ ಗುರುಗಳ ಅಂತರ್ಬಾಹ್ಯ ಕೃಪೆ ಇವುಗಳಲ್ಲಿನ ಸಾತ್ತ್ವಿಕ ಲಹರಿಗಳು ಹೋರಾಡುತ್ತಿರುತ್ತವೆ. ಈ ಸೂಕ್ಷ್ಮಯುದ್ದ ನಡೆಯುವಾಗ, ಸಾಧಕರ ದೇಹದಲ್ಲಿ ಉಷ್ಣತೆ ನಿರ್ಮಾಣವಾಗುತ್ತದೆ. ಈ ಸಂಘರ್ಷದ ಪರಿಣಾಮ ಅವನ ಮನಸ್ಸು ಮತ್ತು ಶರೀರದ ಮೇಲೆ ಆಗುತ್ತಿರುತ್ತದೆ. ಇಂತಹ ಸಮಯದಲ್ಲಿ ಅವನು ಮಾರ್ಗದರ್ಶನ ಪಡೆದು ಯೋಗ್ಯ ಸಾಧನಾ ಮಾರ್ಗದಲ್ಲಿರುವುದು ಆವಶ್ಯಕವಾಗಿರುತ್ತದೆ. ಶ್ರೀ ಗುರುಕೃಪೆಯಿಂದ ಹಂತಹಂತವಾಗಿ ಸಾಧಕನ ವಿಜಯವಾಗುತ್ತದೆ.

೧ ಈ ೪. ಪರಿಪೂರ್ಣ ಸೇವೆ ಮತ್ತು ಭಾವ ಜಾಗೃತಿಯ ಪ್ರಯತ್ನದಿಂದ ಅನಾಹತ ಮತ್ತು ವಿಶುದ್ಧ ಚಕ್ರಗಳ ಭೇದವಾಗುತ್ತದೆ : ಪರಿಪೂರ್ಣ ಸೇವೆಯಿಂದ ಪ್ರಾರಂಭದಲ್ಲಿ ಸ್ವಾಧಿಷ್ಠಾನ ಹಾಗೂ ಮಣಿಪೂರ ಚಕ್ರಗಳು ಮತ್ತು ಭಾವಪೂರ್ಣ ಹಾಗೂ ಪರಿಪೂರ್ಣ ಸೇವೆಯಿಂದ ಅನಾಹತ ಮತ್ತು ವಿಶುದ್ಧ ಚಕ್ರಗಳ ಭೇದ (ಜಾಗೃತಿ)ವಾಗಲು ಆರಂಭವಾಗುತ್ತದೆ. ಸಾಧನೆಯಲ್ಲಿನ ಭಾವಜಾಗೃತಿಯ ಪ್ರಯತ್ನದಿಂದ ಸಾಧಕನ ಅನಾಹತಚಕ್ರದ ಭೇದವಾಗುತ್ತದೆ, ಅಂದರೆ ಅವನ ವ್ಯಕ್ತಭಾವ ಜಾಗೃತವಾಗತೊಡಗುತ್ತದೆ. ಇದರಿಂದ ಸಾಧಕನಲ್ಲಿ ತಾರಕ ರೂಪದಲ್ಲಿನ ಈಶ್ವರೀ ಶಕ್ತಿಯು ಜಾಗೃತವಾಗುತ್ತಿರುತ್ತದೆ.

೧ ಈ ೫. ಆಜ್ಞಾಪಾಲನೆಯಿಂದ ಆಜ್ಞಾಚಕ್ರದ ಭೇದ, ಅಂದರೆ ಸಾಧಕನ ಮನೋಲಯವಾಗಲು ಆರಂಭವಾಗುತ್ತದೆ : ‘ಆಜ್ಞಾಪಾಲನೆ’ಯು ಗುಣಗಳ ರಾಜವಾಗಿದೆ. ಗುರುಕೃಪಾಯೋಗದಲ್ಲಿ ಆಜ್ಞಾಪಾಲನೆಗೆ ಬಹಳ ಮಹತ್ವವಿದೆ. ಆಜ್ಞಾಪಾಲನೆ ಗುಣವನ್ನು ಆಚರಣೆಯಲ್ಲಿ ತಂದರೆ ಆಜ್ಞಾಚಕ್ರದ ಭೇದ, ಅಂದರೆ ಸಾಧಕನ ಮನೋಲಯವಾಗಲು ಆರಂಭ ವಾಗುತ್ತದೆ. ಆರಂಭದಲ್ಲಿ ಪರೇಚ್ಛೆಯೆಂದು ಸಹ ಸಾಧಕರ ಮತ್ತು ಈಶ್ವರೇಚ್ಛೆಯೆಂದು ಶ್ರೀ ಗುರುಗಳ ಆಜ್ಞಾಪಾಲನೆ ಆಗುತ್ತದೆ. ನಂತರ ಮನಸ್ಸು ಮತ್ತು ಬುದ್ಧಿಯ ಶುದ್ಧೀಕರಣ ಪ್ರಕ್ರಿಯೆ ಆರಂಭವಾಗುವುದರಿಂದ ಸಹಸಾಧಕ ಅಥವಾ ಶ್ರೀ ಗುರುಗಳ ಆಜ್ಞಾಪಾಲನೆ ಮಾಡುವಾಗ ಆ ಆಜ್ಞೆಯ ಕಾರ್ಯದ ಬಗೆಗಿನ ಮತ್ತು ಅದರಿಂದಾಗುವ ತನ್ನ ಸಾಧನೆಗೆ ಸಂಬಂಧಿಸಿದ ಕಾರ್ಯಕಾರಣಭಾವವನ್ನು ಅರಿತು ಆಜ್ಞಾಪಾಲನೆಯನ್ನು ಮಾಡಲಾಗುತ್ತದೆ. ಕೊನೆಗೆ ಶ್ರೀ ಗುರುಗಳ ಮೇಲಿನ (ಧರ್ಮದ ಮೇಲಿನ) ಶ್ರದ್ಧೆಯಿಂದ ಸಾಧಕನಿಗೆ ಏನು ಹೇಳಲಾಗುತ್ತದೆಯೋ, ಅದರ ಆಜ್ಞಾಪಾಲನೆಯನ್ನು ಮಾಡುವುದು ಸಾಧ್ಯವಾಗುತ್ತದೆ. ಶ್ರದ್ಧೆಯಿಂದ ಆಜ್ಞಾಪಾಲನೆ ಮಾಡುವುದು, ಸರ್ವಶ್ರೇಷ್ಠವಾಗಿದೆ ಮತ್ತು ಪೂರ್ವಜನ್ಮಗಳಲ್ಲಿ ಸಾಧನೆ ಆಗಿರುವವರಿಗೆ ಅದು ತಕ್ಷಣ ಸಾಧ್ಯವಾಗುತ್ತದೆ. ಶ್ರದ್ಧೆಯಿಂದ ಆಜ್ಞಾಪಾಲನೆ ಮಾಡಲು ಸಾಧ್ಯವಾಗುವುದೆಂದರೆ ವಿಹಂಗಮವೇಗದಿಂದ (ಅತೀವೇಗದಿಂದ) ಸಾಧನೆಯಾಗುವುದು.

ಶ್ರೀ ಗುರು ಎಂದರೆ ಸಗುಣದಲ್ಲಿನ ಈಶ್ವರ ! ಸಾಧಕನ ಸಾಧನೆಯ ವಿಶ್ವದಲ್ಲಿ ಶ್ರೀ ಗುರುಗಳ ಮಹತ್ವವು ಅಸಾಧಾರಣವಿದೆ. ಶ್ರೀ ಗುರುಗಳ ಕೃಪೆಯಿಂದ ಗುರುಕೃಪಾಯೋಗವು ಕಾರ್ಯನಿರತವಾಗಿದ್ದರೆ, ಸಾಧಕನ ಸಾಧನೆಯ ಪ್ರವಾಸವು ನಿರ್ವಿಘ್ನವಾಗಿ ನೆರವೇರುತ್ತದೆ.’ – (ಸದ್ಗುರು) ಡಾ. ಪಿಂಗಳೆ (೧.೭.೨೦೧೭)

೨. ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಸಾಧನೆಯ ಬಗ್ಗೆ ಹೇಳಿದ ಅಂಶಗಳು

ಗುರುಕೃಪೆಯಿಂದ ನನಗೆ ೧೪.೧.೨೦೧೩ ರಿಂದ ೨೫.೨.೨೦೧೩ ರ ಕಾಲಾವಧಿಯಲ್ಲಿ ಪ್ರಯಾಗದಲ್ಲಿ ಆಯೋಜಿಸಲಾದ ಕುಂಭಮೇಳದಲ್ಲಿ ಸೇವೆಯನ್ನು ಮಾಡುವ ಅವಕಾಶವು ದೊರಕಿತು. ಆ ಸಮಯದಲ್ಲಿ ಪೂ. (ಡಾ.) ಪಿಂಗಳೆ ಕಾಕಾರವರು ಸಾಧನೆಯ ಬಗ್ಗೆ ಹೇಳಿದ ಅಂಶಗಳನ್ನು ಇಲ್ಲಿ ಕೊಡುತ್ತಿದ್ದೇನೆ.

೨ ಅ. ‘ಯಾವುದು ನಮ್ಮ ಬಳಿಯಿದೆಯೋ, ಅದನ್ನೇ ನಾವು ಇತರರಿಗೆ ಕೊಡುತ್ತೇವೆ. ನಮ್ಮಲ್ಲಿ ದೋಷಗಳಿದ್ದರೆ, ಪ್ರತಿಕ್ರಿಯೆಗಳನ್ನು ಕೊಡುತ್ತೇವೆ ಮತ್ತು ಗುಣಗಳಿದ್ದರೆ ಪ್ರೇಮವನ್ನು ಕೊಡುತ್ತೇವೆ. ನಾವು ಇತರರಿಗೆ ಏನು ಕೊಡುತ್ತೇವೆಯೋ, ಅದೇ ನಮಗೆ ಅವರಿಂದ ತಿರುಗಿ ಸಿಗುತ್ತದೆ.

೨ ಆ. ಸಾಧನೆಯ ಗತಿ ಚೆನ್ನಾಗಿದೆ; ಆದರೆ ‘ಕೇಳಿ ಕೊಂಡು ಮಾಡದಿರುವುದು’ ಅಥವಾ ತಮ್ಮ ‘ಮನಸ್ಸಿನಂತೆ ಮಾಡುವುದು’ ಈ ದೋಷಗಳಿಂದಾಗಿ ನಾವು ಧ್ಯೇಯದಿಂದ ದೂರ ಹೋಗಬಹುದು.

೨  ಇ. ‘ನಾವು ಯಾವ ಸೇವೆಯನ್ನು ಮಾಡುತ್ತೇವೆಯೋ, ಅದರ ಪರಿಣಾಮವೇನಾಗಬಹುದು’, ಎಂಬುದರಲ್ಲಿ ಸಮಾಧಾನವನ್ನು ಶೋಧಿಸುವ ಬದಲು ಸೇವೆಯಲ್ಲಿ ಮಾಡಿದ ಪ್ರಯತ್ನಗಳಿಂದ ಸಮಾಧಾನ ಪಡೆಯಲು ಪ್ರಯತ್ನಮಾಡಬೇಕು.

ಈ ಕುಂಭಮೇಳದ ನಿಮಿತ್ತ ಈಶ್ವರನು ತುಂಬಾ ಕಲಿಸಿದನು, ಅದಕ್ಕಾಗಿ ನಾನು ಭಗವಾನ ಶ್ರೀಕೃಷ್ಣ ಮತ್ತು ಪ.ಪೂ. ಡಾಕ್ಟರರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.’

೨ ಈ. ದೇವರ ಅನುಸಂಧಾನದಲ್ಲಿರುವುದರ ಮಹತ್ವ : ‘ನಾವು ಏನನ್ನೂ ಜೊತೆಗೆ ತೆಗೆದುಕೊಂಡು ಬಂದಿರುವುದಿಲ್ಲ ಮತ್ತು ಏನನ್ನೂ ಜೊತೆಗೆ ತೆಗೆದುಕೊಂಡು ಹೋಗುವುದಿಲ್ಲ. ನಮ್ಮೊಂದಿಗೆ ಕೇವಲ ಈಶ್ವರನೇ ಇರುತ್ತಾನೆ. ಆದುದರಿಂದ ನಾವು ಸತತವಾಗಿ ನಾಮಸ್ಮರಣೆಯಲ್ಲಿ ಮತ್ತು ಅನುಸಂಧಾನದಲ್ಲಿ ಇರಬೇಕು.

೨ ಉ. ಗುರುಗಳ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ಅವರಿಗೆ ಕೇವಲ ಪ್ರಾರ್ಥನೆಯನ್ನು ಮಾಡಬೇಕು ! : ನಾವು ಗುರುಗಳ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಋಣವನ್ನು ತೀರಿಸುವುದೆಂದರೆ, ಯಾವ ಮಾಧ್ಯಮದಿಂದ ನಾವು ತೀರಿಸುವವರಿದ್ದೇವೆಯೋ, ಅದೆಲ್ಲವೂ ಗುರುಗಳದ್ದೇ ಆಗಿರುತ್ತದೆ. ಆದುದರಿಂದ ಋಣವು ಪುನಃ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ಗುರುಗಳಿಗೆ, ‘ನನ್ನ ಮೇಲಿನ ಋಣವನ್ನು ನೀವು ಎಷ್ಟು ಹೆಚ್ಚು ಮಾಡಬೇಕೆಂದರೆ, ನನಗೆ ಅದನ್ನು ತೀರಿಸಲು ಆಗಲೇಬಾರದು. ನಂತರ ನೀವು ನನ್ನನ್ನು ವಶಪಡಿಸಿಕೊಳ್ಳಬೇಕು, ಅಂದರೆ ನನ್ನ ಅಸ್ತಿತ್ವವು ಮುಗಿದು ಅಲ್ಲಿ ಕೇವಲ ನಿಮ್ಮ ಅಸ್ತಿತ್ವವೇ ಉಳಿಯುವುದು’, ಎಂದು ಪ್ರಾರ್ಥನೆಯನ್ನು ಮಾಡಬೇಕು.

೨ ಊ. ವರ್ತಮಾನದಲ್ಲಿರ ಬೇಕು ! : ಭೂತಕಾಲದಲ್ಲಿ ಸಿಲುಕಬಾರದು. ದೇವರು ವರ್ತಮಾನದಲ್ಲಿ ಯಾವ ವಿಚಾರವನ್ನು ಕೊಟ್ಟಿದ್ದಾನೆಯೋ, ಅದರಂತೆ ಕೃತಿಯನ್ನು ಮಾಡಬೇಕು.

೨ ಎ. ಶೇ. ೬೦ ಮತ್ತು ಶೇ. ೭೦ ರಷ್ಟು ಆಧ್ಯಾತ್ಮಿಕ ಮಟ್ಟವೆಂದರೇನು ? : ‘ನಮಗೆ ಏನೂ ಮಾಡಲು ಬರುವುದಿಲ್ಲ’, ಎಂಬುದನ್ನು ಅರಿತುಕೊಂಡು ದೇವರಿಗೆ ಶರಣಾಗುವುದೆಂದರೆ ಶೇ. ೬೦ ರಷ್ಟು ಮಟ್ಟ ಮತ್ತು ‘ನಾವು ಏನೂ ಮಾಡುವುದಿಲ್ಲ ದೇವರೇ ಎಲ್ಲವನ್ನೂ ಮಾಡುತ್ತಿದ್ದಾನೆ’, ಎಂಬುದನ್ನು ಅನುಭವಿಸುವುದೆಂದರೆ ಶೇ. ೭೦ ರಷ್ಟು ಮಟ್ಟ ! – ಆಧುನಿಕ ವೈದ್ಯೆ (ಸೌ.) ಮಧುವಂತಿ ಪಿಂಗಳೆ

೩. ಭಾವದ ಅಂಶಗಳು ಮತ್ತು ಪ್ರಾರ್ಥನೆ !

೩ ಅ. ಭಾವದ ಅಂಶಗಳು

೩ ಅ ೧. ಶ್ರೀ ಗುರುಗಳ ಬಗ್ಗೆ

ಅ. ನನ್ನ ಹೃದಯದಲ್ಲಿ ಶ್ರೀಗುರುಗಳ ವಾಸವಿದೆ ! : ಪ. ಪೂ. ಡಾಕ್ಟರರು (ಶ್ರೀಕೃಷ್ಣ) ನನ್ನ ಹೃದಯದಲ್ಲಿಯೇ ಇದ್ದಾರೆ ಮತ್ತು ನನ್ನ ಮನಸ್ಸಿನಲ್ಲಿನ ಪ್ರತಿಯೊಂದು ವಿಚಾರವು ಅವರಿಗೆ ತಿಳಿಯುತ್ತದೆ.

ಆ. ಪ.ಪೂ. ಡಾಕ್ಟರರ ವಾಕ್ಯವೆಂದರೆ, ಬ್ರಹ್ಮವಾಕ್ಯವಾಗಿದೆ ! : ನಾನು ಗುರುದೇವರ ಚರಣಗಳನ್ನು ಹಿಡಿದಿರುವೆನೋ ಇಲ್ಲವೋ ನನಗೆ ಗೊತ್ತಿಲ್ಲ; ಆದರೆ ಅವರು ನನ್ನನ್ನು ಹಿಡಿದಿದ್ದಾರೆ, ಇದು ನಿಶ್ಚಿತ ! ‘ಒಂದು ವೇಳೆ ಹುಲಿಯ ಬಾಯಿಯಲ್ಲಿನ ಬೇಟೆಯ ಪಶು ಬಿಟ್ಟು ಹೋಗಬಹುದು; ಆದರೆ ಗುರುಗಳು ಯಾರನ್ನು ಹಿಡಿದಿರುವರೋ, ಅವರ ಉದ್ಧಾರವು ಈ ಜನ್ಮದಲ್ಲಿಯೇ ಖಂತವಾಗಿಯೂ ಆಗಲಿದೆ’, ಎಂದು ಪ.ಪೂ. ಡಾಕ್ಟರರೇ ‘ಶಿಷ್ಯ’ ಗ್ರಂಥದಲ್ಲಿ ಬರೆದಿದ್ದಾರೆ ಮತ್ತು ಅವರ ವಾಕ್ಯವು ‘ಬ್ರಹ್ಮವಾಕ್ಯವೇ’ ಆಗಿದೆ. ‘ಅವರ ಕೃಪೆಯಿಂದಲೇ ನಾನು ಬಿಡುಗಡೆಯಾಗಿದ್ದೇನೆ’, ಎಂದು ನನಗೆ ಆಂತರ್ಯದಲ್ಲಿ ಸತತವಾಗಿ ಅರಿವಿರಲಿ.

ಇ. ಚರಣಗಳಿಗೆ ಮಾನಸ ಮಸಾಜ್ ಮಾಡಬೇಕು : ಪ್ರತಿದಿನ ರಾತ್ರಿ ಮಲಗುವ ಮೊದಲು ಪ.ಪೂ. ಡಾಕ್ಟರರ ಚರಣಗಳಿಗೆ ಮನಸ್ಸಿನಿಂದ (ಸೂಕ್ಷ್ಮದಿಂದ) ಮಸಾಜ್ ಮಾಡಬೇಕು ಮತ್ತು ಅವರ ಬೆನ್ನಿಗೆ ಮೃದುವಾಗಿ ಎಣ್ಣೆಯನ್ನು ಹಚ್ಚಿ ತಿಕ್ಕಬೇಕು.

೩ ಅ ೨. ಸೇವೆಯ ಬಗೆಗಿನ ಭಾವ 

ಅ. ಯಾವುದೇ ಸೇವೆಯಿಂದ ಈಶ್ವರಪ್ರಾಪ್ತಿ ಆಗುತ್ತದೆ ! : ಪ್ರತಿಯೊಂದು ಸೇವೆಯು ನನ್ನನ್ನು ಈಶ್ವರನತ್ತ ಕರೆದುಕೊಂಡು ಹೋಗಲಿಕ್ಕಾಗಿಯೇ ಇದೆ. ಶಾರೀರಿಕ ಸೇವೆಯಿಂದ ಅಹಂ ಕಡಿಮೆಯಾಗಿ ಶೀಘ್ರಗತಿಯಲ್ಲಿ ಈಶ್ವರನ ಬಳಿ ಹೋಗಲು ಸಾಧ್ಯವಾಗುತ್ತದೆ. ನಾಮಜಪವನ್ನು ಮಾಡಿದರೆ ಮನಸ್ಸು ಶುದ್ಧವಾಗಿ ಶೀಘ್ರಗತಿಯಲ್ಲಿ ಈಶ್ವರನ ಬಳಿ ಹೋಗಲು ಸಾಧ್ಯವಾಗುತ್ತದೆ ಮತ್ತು ಬುದ್ಧಿಯಿಂದ ಸೇವೆಯನ್ನು ಮಾಡಿದರೆ ಬುದ್ಧಿಯು ಶುದ್ಧವಾಗಿ ಈಶ್ವರನ ಬಳಿ ಹೋಗಲು ಸಾಧ್ಯವಾಗುತ್ತದೆ.

೩ ಅ ೩. ಇತರ ಅಂಶಗಳು

ಅ. ಜಾಗರೂಕತೆಯಿಂದ ಮನಸ್ಸಿನ ಪರೀಕ್ಷಣೆಯನ್ನು ಮಾಡಬೇಕು : ಯಾವುದಾದರೊಂದು ತಪ್ಪು ಅಥವಾ ನಕಾರಾತ್ಮಕ ವಿಚಾರ ಬಂದರೆ (ತೊಂದರೆಯಿಂದಾಗಿ ಅಥವಾ ಕೆಟ್ಟ ಶಕ್ತಿಗಳಿಂದಾಗಿ), ತಕ್ಷಣ ಗುರುಗಳಲ್ಲಿ ಕ್ಷಮೆ ಕೇಳಬೇಕು. ಒಳ್ಳೆಯ ಮತ್ತು ಸಕಾರಾತ್ಮಕ ವಿಚಾರ ಬಂದರೆ ತಕ್ಷಣ ಗುರುಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

ಆ. ಹೃದಯದಲ್ಲಿರುವ ಈಶ್ವರನನ್ನು ಸತತವಾಗಿ ಹುಡುಕಬೇಕು : ನಾನು ಹೊರಗಿನ ಈಶ್ವರನನ್ನು ಹುಡುಕದೇ ನನ್ನ ಹೃದಯದಲ್ಲಿರುವ ಈಶ್ವರನನ್ನು ಹುಡುಕುತ್ತೇನೆ. ಯಾವಾಗಲೂ ಕಣ್ಣುಗಳನ್ನು ಮುಚ್ಚಿ ನಾನು ಈಶ್ವರನು ನನ್ನ ಹೃದಯದಲ್ಲಿ ಕಾಣಿಸುವನೇ, ಎಂದು ನೋಡುತ್ತೇನೆ. (ಕೆಲವೊಮ್ಮೆ ಪ್ರಕಾಶ, ಕೆಲವೊಮ್ಮೆ ಬಿಂದು, ಕೆಲವೊಮ್ಮೆ ವಲಯಗಳು, ಕೆಲವೊಮ್ಮೆ ಆಕೃತಿ ಹೀಗೆ ಅನೇಕ ರೀತಿಯಲ್ಲಿ ಅವನು ನನಗೆ ನನ್ನ ಹೃದಯದಲ್ಲಿ ಕಾಣಿಸುತ್ತಾನೆ.)

ಇ. ‘ಪ.ಪೂ. ಡಾಕ್ಟರರೇ ನನ್ನನ್ನು ಪ್ರತಿಕ್ಷಣ ಸಂಭಾಳಿಸುತ್ತಾರೆ’, ಎಂಬುದರ ಅರಿವನ್ನಿಟ್ಟುಕೊಳ್ಳಬೇಕು : ಪ.ಪೂ. ಡಾಕ್ಟರರು ಹೆಜ್ಜೆಹೆಜ್ಜೆಗೂ ನನ್ನ ಶ್ರದ್ಧೆಯ ಪರೀಕ್ಷೆಯನ್ನು ಮಾಡುತ್ತಾರೆ ಮತ್ತು ನನ್ನನ್ನು ಅವರೇ ತೇರ್ಗಡೆ ಮಾಡುತ್ತಾರೆ. ಕಠಿಣ ಪ್ರಸಂಗಗಳಲ್ಲಿಯೂ ‘ಪ.ಪೂ. ಡಾಕ್ಟರರೇ ನನ್ನನ್ನು ಸಂಭಾಳಿಸುತ್ತಾರೆ ಮತ್ತು ನನ್ನ ಮೇಲೆ ಕೃಪೆಯನ್ನೂ ಮಾಡುತ್ತಾರೆ’, ಎಂಬ ಅರಿವನ್ನು ಯಾವಾಗಲೂ ಇಟ್ಟುಕೊಳ್ಳಬೇಕು. ‘ಅವರು ನನ್ನ ಪ್ರಾರಬ್ಧ ಮತ್ತು ಸಂಚಿತವನ್ನು ನಾಶ ಮಾಡುತ್ತಿದ್ದಾರೆ’, ಎಂಬುದನ್ನು ನಾವು ಯಾವಾಗಲೂ ಗಮನದಲ್ಲಿಡಬೇಕು.

೩ ಅ ೪. ಪ್ರಾರ್ಥನೆ

ಅ. ಗುರುದೇವರೇ, ಕೇವಲ ತಮ್ಮ ಕೃಪಾಪ್ರಾಪ್ತಿ ಗಾಗಿಯೇ ಈ ಜೀವದ ಪ್ರಯತ್ನವಿರಲಿ ! : ಹೇ ಗುರುದೇವರೇ, ನನ್ನಲ್ಲಿ ಸೇವಾಭಾವವಿಲ್ಲ ಮತ್ತು ನಿಮಗೆ ಅಪೇಕ್ಷಿತವಿರುಂತಹ ಈಶ್ವರಪ್ರಾಪ್ತಿಯ ತಳಮಳವೂ ಇಲ್ಲ. ನೀವೇ ಅದನ್ನು ಹೆಚ್ಚಿಸಿ ನನ್ನಿಂದ ಭಾವಪೂರ್ಣ ಸೇವೆಯನ್ನು ಮಾಡಿಸಿಕೊಳ್ಳಿರಿ. ಗುರುದೇವರೇ, ಕೇವಲ ತಮಗಾಗಿಯೇ ಈ ಜೀವದ ಎಲ್ಲ ಪ್ರಯತ್ನಗಳಿರಲಿ.

ಆ. ಹೇ ಗುರುದೇವರೇ, ಇತರರ ಪ್ರಗತಿಯಿಂದ ನನಗೆ ಆಂತರಿಕ ಆನಂದ ಸಿಗಲಿ ! : ಹೇ ಗುರುದೇವಾ, ನನ್ನಲ್ಲಿ  ಸಮಷ್ಟಿಭಾವ ಅತ್ಯಲ್ಪವಿರುವುದರ ಅರಿವು ನನಗೆ ಸತತವಾಗಿ ಇರಲಿ. ಸಹಸಾಧಕರ ಮತ್ತು ತಳಮಳ ದಿಂದ ಸೇವೆ ಮತ್ತು ಸಾಧನೆಯನ್ನು ಮಾಡುವ ಸಾಧಕರ ಶೀಘ್ರ ಪ್ರಗತಿಯಾಗಲಿ ಮತ್ತು ಅವರ ಪ್ರಗತಿಯಲ್ಲಿಯೇ ನನಗೆ ಆಂತರಿಕ ಆನಂದ ಸಿಗಲಿ.

ಇ. ಹೇ ಶ್ರೀಕೃಷ್ಣ, ನನಗೆ ನಿನ್ನ ಲೀಲೆಯ ಅರಿವಿರಲಿ ಮತ್ತು ನಿನ್ನ ಸ್ಮರಣೆಯಲ್ಲಿಯೇ ನನಗೆ ಆನಂದ ಸಿಗಲಿ ! : ಹೇ ಶ್ರೀಕೃಷ್ಣ, ನನಗೆ ಒಳ್ಳೆಯದರ ಸುಖ ಬೇಡ ಮತ್ತು ಕೆಟ್ಟದರ ದುಃಖವೂ ಬೇಡ. ಸುಖ-ದುಃಖಗಳು ನಿನ್ನ ಲೀಲೆಯೇ ಆಗಿವೆ, ನಿನ್ನ ಮಾಯೆಯೇ ಆಗಿದೆ ಎಂಬುದು ನನ್ನ ಗಮನಕ್ಕೆ ಬರಲಿ. ಆಂತರ್ಯದಲ್ಲಿನ ನಿನ್ನ ಸ್ಮರಣೆಯ (ಅನುಸಂಧಾನದ) ಆನಂದವು (ಎಲ್ಲಿ ನಿನ್ನ ಸತ್ಯ ರೂಪವಿದೆಯೋ, ಅದು) ಸತತವಾಗಿ ಸಿಗಲಿ.

ಈ. ಹೇ ಈಶ್ವರನೇ, ಈ ಪೃಥ್ವಿಯ ಮೇಲೆ ಶೀಘ್ರ ‘ಹಿಂದೂ ರಾಷ್ಟ್ರ’ ಸ್ಥಾಪನೆಯಾಗಲಿ ! : ಹೇ ಈಶ್ವರನೇ, ಈ ಪೃಥ್ವಿಯ ಮೇಲೆ ಹಿಂದೂ ಧರ್ಮಕ್ಕೆ ಮತ್ತು ಸಾಧಕರಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿ. ನೀನು ಕಿರುಬೆರಳಿನ ಮೇಲೆ ಎತ್ತಿದ ಈ ‘ಈಶ್ವರೀ ರಾಜ್ಯರೂಪಿ ಗೋವರ್ಧನ ಪರ್ವತಕ್ಕೆ’ ನಮ್ಮ ಕೋಲುಗಳನ್ನು ತಾಗಿಸಿಕೋ ಮತ್ತು ನಮ್ಮೆಲ್ಲರ ಸಮಷ್ಟಿ ಸಾಧನೆಯನ್ನು ಮಾಡಿಸಿಕೋ, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ ! – ಸಂಕಲನಕಾರರು – ಕು. ವೈದೇಹಿ ಪಿಂಗಳೆ (ಈಗಿನ ಸೌ. ವೈದೇಹಿ ಗೌಡ) (ಪೂ. ಪಿಂಗಳೆಕಾಕಾರವರ ಮಗಳು)

೪. ಅನುಸಂಧಾನದ ಬಗ್ಗೆ ಮಾಡಿದ ಮಾರ್ಗದರ್ಶನ

ಅ. ‘ಅಷ್ಟಾವಧಾನಗಳು ಯಾವ ವಿಷಯಗಳ ಮೇಲೆ ಕೇಂದ್ರೀಕೃತವಾಗುತ್ತವೆಯೋ, ನಮಗೆ ಅವುಗಳ ನೆನಪಾಗುತ್ತದೆ. ಈ ಅಷ್ಟಾವಧಾನಗಳು ಗುರುದೇವರು ಮತ್ತು ಭಗವಂತನ ಮೇಲೆ ಕೇಂದ್ರೀಕೃತವಾದರೆ, ಸಾಧನೆಯಲ್ಲಿ ಈಶ್ವರನೊಂದಿಗಿನ ಅನುಸಂಧಾನವು ನಿರ್ಮಾಣವಾಗುತ್ತದೆ. ಅಖಂಡ ಅನುಸಂಧಾನ ವೆಂದರೆ ಈಶ್ವರನೊಂದಿಗೆ ಏಕರೂಪತೆ !

ಆ. ಈಶ್ವರನ ಸ್ಮರಣೆಯನ್ನು ಮಾಡಲು ನಾಮ ಸ್ಮರಣೆಯಿದೆ. ಅನುಸಂಧಾನವು ಈಶ್ವರನ ಪ್ರತ್ಯಕ್ಷ ಸ್ಮರಣೆಯೇ ಆಗಿರುವುದರಿಂದ ಅಲ್ಲಿ ನಾಮಸ್ಮರಣೆ ಇರುವುದಿಲ್ಲ. ಇದಕ್ಕೆ ‘ಪಶ್ಯಂತಿವಾಣಿಯಲ್ಲಿನ ನಾಮಸ್ಮರಣೆ’ ಎನ್ನುತ್ತಾರೆ.

ಇ. ‘ನಾನು, ಈಶ್ವರ ಮತ್ತು ಚರಾಚರ ಎಲ್ಲವೂ ಒಂದೇ ಆಗಿದ್ದೇವೆ’, ಎಂಬ ಅನುಭೂತಿಯನ್ನು ಪಡೆಯುವುದೆಂದರೆ ಪರಾವಾಣಿಯಲ್ಲಿನ ನಾಮಸ್ಮರಣೆ !’ – ಸದ್ಗುರು (ಡಾ.) ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ. (೨೩.೧೦.೨೦೧೮)

ಸದ್ಗುರು (ಡಾ.) ಪಿಂಗಳೆಯವರ ಬೋಧನೆ

ಅ. ‘ಎಲ್ಲ ಸಾಧಕರ ಚರಣಗಳತ್ತ  ನೋಡಿ ನಮಗೆ ಗುರುದೇವರ ನೆನಪಾಗಬೇಕು. ಪ್ರತಿಯೊಬ್ಬ ಸಾಧಕನಲ್ಲಿನ ಪರಮಪ್ರಿಯ ಪ.ಪೂ. ಗುರುದೇವರ ದರ್ಶನ ಪಡೆಯುವುದಿದೆ.

ಆ. ನಮ್ಮ ಸುತ್ತಲೂ ನಡೆಯುತ್ತಿರುವ ಚಿಕ್ಕ ತಪ್ಪುಗಳು ಗಮನಕ್ಕೆ ಬರಲು ಪ್ರಾರ್ಥನೆಯನ್ನು ಮಾಡಬೇಕು.

ಇ. ಮಹಾಪ್ರಸಾದ ತೆಗೆದುಕೊಳ್ಳುವ ಮೇಜಿನ ಮೇಲಿನ ತಟ್ಟೆ ಹೇಗಿರಬೇಕು ? ಫಲಕದ ಮೇಲೆ ತಪ್ಪುಗಳನ್ನು ಯಾವ ರೀತಿ ಬರೆಯಬೇಕು ? ಯಾರಿಗೆ ಯಾವ ರೀತಿಯಲ್ಲಿ ಬೀಳ್ಕೊಡಬೇಕು ?, ಇವುಗಳಂತಹ ಚಿಕ್ಕ ಕೃತಿಗಳಿಂದಲೂ ನಮ್ಮ ಸಾಧನೆಯಾಗಬೇಕು. – ಕು. ಪೂನಮ ಚೌಧರಿ, ದೆಹಲಿ (೧೮.೭.೨೦೧೭)