ಸಾಧಕರೇ, ಆಧ್ಯಾತ್ಮಿಕ ಮಟ್ಟ ಹೆಚ್ಚಾಗದಿದ್ದರೆ ನಿರಾಶರಾಗಬೇಡಿ !

(ಪೂ.) ಸಂದೀಪ ಆಳಶಿ

‘ಗುರುಪೂರ್ಣಿಮೆಯಲ್ಲಿ ಕೆಲವು ಸಾಧಕರ ಆಧ್ಯಾತ್ಮಿಕ ಮಟ್ಟವು ಕಡಿಮೆಯಾಯಿತು, ಕೆಲವರದ್ದು ಅಷ್ಟೇ ಇದೆ ಅಥವಾ ಘೋಷಣೆಯಾಗಲಿಲ್ಲ. ಇದರಿಂದಾಗಿ ಕೆಲವರ ಮನಸ್ಸಿನಲ್ಲಿ ನಿರಾಶೆಯ ವಿಚಾರಗಳು ಬಂದವು. ಜೀವನದಲ್ಲಿ ಯಶಸ್ಸು ಮತ್ತು ವೈಫಲ್ಯ ಇವೆರಡೂ ಪಾಲಿಗೆ ಬಂದೇ ಬರುತ್ತವೆ. ಛತ್ರಪತಿ ಶಿವಾಜಿ ಮಹಾರಾಜರಿಗೂ ‘ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸುವಾಗ ಕೆಲವು ಸಲ ಯುದ್ಧದಲ್ಲಿ ಸೋಲಬೇಕಾಯಿತು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿಃಸ್ವಾರ್ಥದಿಂದ ಪಾಲ್ಗೊಂಡ ರಾಷ್ಟ್ರವೀರರಲ್ಲಿ ಎಷ್ಟೋ ವೀರರ ಹೆಸರು ಸಹ ಇಂದು ಇತಿಹಾಸಕ್ಕೆ ಗೊತ್ತಿಲ್ಲ. ನಮಗೂ ‘ಹಿಂದೂ ರಾಷ್ಟ್ರವನ್ನು ಸ್ಥಾಪನೆ ಮಾಡುವುದಿದೆ. ಅದಕ್ಕಾಗಿ ‘ನಿಃಸ್ವಾರ್ಥ ವೃತ್ತಿಯಿಂದ ಪ್ರಯತ್ನಿಸುತ್ತಿರುವುದು, ಇದೇ ಸಾಧನೆಯಾಗಿದೆ. ‘ಸಾಧನೆಯಲ್ಲಿ ಇದುವರೆಗೆ ಯಾವುದು ಮಾಡಲು ಸಾಧ್ಯವಾಗುತ್ತಿರಲಿಲ್ಲ ಅದನ್ನು ಮಾಡುತ್ತಿರುವುದು, ಇದೇ ಸಾಧನೆಯಾಗಿದೆ. ‘ತನ್ನಲ್ಲಿ ಸಾಧಕತ್ವವನ್ನು ನಿರ್ಮಾಣ ಮಾಡುವುದು, ಇದೇ ಆಧ್ಯಾತ್ಮಿಕ ಪ್ರಗತಿಯಾಗಿದೆ. ಇದಕ್ಕಾಗಿ ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಶರಣಾಗತರಾಗಿ ಅವರಲ್ಲಿ ಭಾವಪೂರ್ಣವಾಗಿ ಪ್ರಾರ್ಥನೆಯನ್ನು ಮಾಡೋಣ ! – (ಪೂ.) ಶ್ರೀ. ಸಂದೀಪ ಆಳಶಿ (೬.೭.೨೦೨೦)