ಬೆಳಗಾವಿ – ಸನಾತನ ಸಂಸ್ಥೆಯ ೮೭ ನೇ ಸಂತರಾದ ಪೂ. (ಡಾ.) ನೀಲಕಂಠ ಅಮೃತ ದೀಕ್ಷಿತ (ವಯಸ್ಸು ೯೨) ಇವರು ಜುಲೈ ೨೭ ರಂದು ರಾತ್ರಿ ೯.೩೫ ಕ್ಕೆ ತಮ್ಮ ನಿವಾಸದಲ್ಲಿ ದೇಹತ್ಯಾಗ ಮಾಡಿದರು. ಜುಲೈ ೨೮ ರಂದು ಬೆಳಗ್ಗೆ ಅವರ ಅಂತಿಮಸಂಸ್ಕಾರ ಮಾಡಲಾಯಿತು. ಅವರು ರಾಮನಾಥಿ (ಗೋವಾ) ಆಶ್ರಮದಲ್ಲಿ ಪೂರ್ಣವೇಳೆ ಸಾಧನೆಯನ್ನು ಮಾಡುವ ಸೌ. ಅಂಜಲಿ ಕಣಗಲೇಕರ ಇವರ ತಂದೆ, ಅದೇರೀತಿ ಪೂರ್ಣವೇಳೆ ಸಾಧನೆಯನ್ನು ಮಾಡುವ ಡಾ. ಅಂಜೇಶ ಕಣಗಲೇಕರ ಹಾಗೂ ಹಾಗೂ ಶ್ರೀ. ಸತ್ಯಕಾಮ ಕಣಗಲೇಕರ ಇವರ ಅಜ್ಜ ಆಗಿದ್ದರು. ಪತ್ನಿ, ಇಬ್ಬರು ಮಕ್ಕಳು, ೧ ಮಗಳು, ಸೊಸೆ, ಅಳಿಯ, ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳು ಹೀಗೆ ಇವರ ಕುಟುಂಬ ಇದೆ. ಸನಾತನ ಪರಿವಾರ ದೀಕ್ಷಿತ ಹಾಗೂ ಕಣಗಲೇಕರ ಕುಟುಂಬದ ದುಃಖದಲ್ಲಿ ಸಹಭಾಗಿಯಾಗಿದೆ.
ಪೂ. ದೀಕ್ಷಿತ ಅಜ್ಜನವರ ದೇಹತ್ಯಾಗದ ಸಮಯದಲ್ಲಿ ಡಾ. ಅಂಜೇಶ ಕಣಗಲೇಕರ (ಪೂ. ಅಜ್ಜನ ಮೊಮ್ಮಗ) ಇವರಿಗೆ ಗಮನಕ್ಕೆ ಬಂದ ವೈಶಿಷ್ಟ್ಯಪೂರ್ಣ ಅಂಶಗಳು
‘ಪೂ. ದೀಕ್ಷಿತ ಅಜ್ಜನವರು ಜುಲೈ ೨೭ ರಂದು ರಾತ್ರಿ ೯.೩೦ ಕ್ಕೆ ದೇಹತ್ಯಾಗ ಮಾಡಿದ ನಂತರ ಅವರ ಮುಖವು ಅತ್ಯಂತ ಶಾಂತ ಹಾಗೂ ತೇಜಸ್ವಿಯಾಗಿ ಕಾಣಿಸುತ್ತಿತ್ತು, ಅದೇರೀತಿ ವಾತಾವರಣದಲ್ಲಿ ಚೈತನ್ಯವು ಅರಿವಾಗುತ್ತಿತ್ತು. ಕುಟುಂಬದವರೆಲ್ಲರ ಊಟ ಆದಮೇಲೆ ಪೂ. ಅಜ್ಜ ದೇಹತ್ಯಾಗ ಮಾಡಿದರು. ಇದರಿಂದ ‘ಪೂ. ಅಜ್ಜನವರು ದೇಹತ್ಯಾಗ ಮಾಡುವಾಗಲೂ ಇತರರ ವಿಚಾರ ಮಾಡಿದರು, ಎಂದು ಅರಿವಾಯಿತು. ಪೂ. ಅಜ್ಜರವರ ಪಾರ್ಥಿವ ಶರೀರಕ್ಕೆ ಮಾರನೇ ದಿನ ಅಂದರೆ ಜುಲೈ ೨೮ ರಂದು ಬೆಳಗ್ಗೆ ೮ ಗಂಟೆಗೆ ಅಗ್ನಿ ನೀಡಲಾಯಿತು. ಅಲ್ಲಿಯವರೆಗೆ ಅವರ ಮುಖದಲ್ಲಿ ಪ್ರಸನ್ನತೆ ಇತ್ತು. ಅಗ್ನಿ ನೀಡಿದಾಗ ‘ವಾತಾವರಣದಲ್ಲಿ ಚೈತನ್ಯ ಪ್ರಕ್ಷೇಪಣೆ ಆಗುತ್ತಿದೆ, ಎಂದು ಅರಿವಾಗುತ್ತಿತ್ತು. – ಡಾ. ಅಂಜೇಶ ಕಣಗಲೇಕರ, ಬೆಳಗಾವಿ.
ಪೂ. ದೀಕ್ಷಿತ ಇವರ ಅಂತಿಮಸಂಸ್ಕಾರದ ಸಮಯದಲ್ಲಿ ಬಂದಿದ್ದ ಒಂದು ಶ್ವಾನವನ್ನು ನೋಡಿದಾಗ ಅದು ಕಾಲಭೈರವನ ರೂಪವೇ ಆಗಿದೆ ಎಂದು ಅವರ ಮಗಳಿಗೆ ಅನಿಸಿತು
‘ಅಂತಿಮಸಂಸ್ಕಾರದ ಸಮಯದಲ್ಲಿ ಪೂ. ಅಜ್ಜನವರ ಪಾರ್ಥಿವ ಶರೀರವನ್ನು ಯಾವ ಸ್ಥಳದಲ್ಲಿ ಇಡಲಾಗಿತ್ತೋ, ಅಲ್ಲಿ ಒಂದು ಕಪ್ಪು ಬಣ್ಣದ ಶ್ವಾನ ಬಂದಿತು. ಆ ಸಮಯದಲ್ಲಿ ನಾನು ಅದಕ್ಕೆ ‘ಪೂ. ಅಜ್ಜನನ್ನು ಈಗಷ್ಟೇ (ಸ್ಮಶಾನಭೂಮಿ)ಗೆ ತೆಗೆದುಕೊಂಡು ಹೋಗಿದ್ದಾರೆ, ಎಂದು ಹೇಳಿದೆ. ಆಗ ನಾನು ಹೇಳುತ್ತಿರುವುದು ಆ ಶ್ವಾನವು ಕೇಳಿಸಿಕೊಂಡಿತು ಹಾಗೂ ಅದಕ್ಕೆ ಅರ್ಥವಾಯಿತು, ಎಂದು ನನಗೆ ಅರಿವಾಯಿತು. ತದನಂತರ ಸುಮಾರು ಹೊತ್ತು ಆ ಶ್ವಾನ ಸ್ಮಶಾನ ಭೂಮಿಯ ದಿಕ್ಕಿನತ್ತ ನೋಡುತ್ತಲೇ ಇತ್ತು. ‘ಆ ಕಪ್ಪುಬಣ್ಣದ ಶ್ವಾನ ಅಂದರೆ ಕಾಲಭೈರವನ ರೂಪವೇ ಆಗಿತ್ತು, ಎಂದು ನನಗೆ ಅನಿಸಿತು. – ಸೌ. ಅಂಜಲಿ ಕಣಗಲೇಕರ (ಪೂ. ದೀಕ್ಷಿತ ಇವರ ಮಗಳು)
‘ಪೂ. ಅಜ್ಜರವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಮಾಡಲು ಅವರ ಪರಿಚಯದ ಓರ್ವ ವ್ಯಕ್ತಿಯು ಗಂಧದ ಕಟ್ಟಿಗೆಯನ್ನು ತಂದಿದ್ದರು, ಅದೇರೀತಿ ಒಬ್ಬ ಮಗನು ಪೂ. ಅಜ್ಜನವರಿಗೆ ಗಂಧದ ಹಾರವನ್ನು ತಂದಿದ್ದರು. – ಸೌ. ಅಂಜಲಿ ಕಣಗಲೇಕರ
ಪೂ. ದೀಕ್ಷಿತರವರ ಪಾರ್ಥಿವಶರೀರಕ್ಕೆ ಅಗ್ನಿಸಂಸ್ಕಾರ ಮಾಡುವಾಗ ಅವರ ಮೊಮ್ಮಗ ಹಾಗೂ ಮಗಳಿಗೆ ಗಮನಕ್ಕೆ ಬಂದ ಅಂಶಗಳು
೧. ‘ಪೂ. ದೀಕ್ಷಿತ ಅಜ್ಜನವರ ದೇಹತ್ಯಾಗ ಆದನಂತರ ವಾತಾವರಣದಲ್ಲಿ ಧ್ಯಾನಾವಸ್ಥೆಯಂತೆ ಶಾಂತತೆಯು ಅರಿವಾಗುತ್ತಿತ್ತು, ಅದೇರೀತಿ ವಾತಾವರಣವು ಹಗುರವಾಗಿತ್ತು.
೨. ಪೂ. ಅಜ್ಜನವರ ಕಣ್ಣುಗಳು ಅರ್ಧತೆರೆದಿರುವ ಸ್ಥಿತಿಯಲ್ಲಿತ್ತು, ಅದೇರೀತಿ ಅವರ ದೇಹದ ಸ್ಪರ್ಶವು ಅತ್ಯಂತ ತಂಪಾಗಿ ಅರಿವಾಗುತ್ತಿತ್ತು. ‘ಅವರು ಕೈಲಾಸದಲ್ಲಿ ಧ್ಯಾನಾವಸ್ಥೆಯಲ್ಲಿದ್ದಾರೆ, ಎಂದು ಅರಿವಾಯಿತು. ಬದುಕಿರುವಾಗಲೂ ಅವರ ದೇಹವನ್ನು ಸ್ಪರ್ಶಿಸಿದಾಗ ಅವರ ಚರ್ಮ ಮೃದುವಾಗಿತ್ತು. ದೇಹತ್ಯಾಗದ ನಂತರ ಇನ್ನಷ್ಟು ಮೃದು ಅಂದರೆ ಬೆಣ್ಣೆಯಂತೆ ಮೃದುವಾಗಿತ್ತು.
೩. ಪೂ. ಅಜ್ಜನವರ ದೇಹದತ್ತ ನೋಡಿದಾಗ ತುಂಬಾ ಚೈತನ್ಯ ಹಾಗೂ ತೇಜವು ಪ್ರಕ್ಷೇಪಿತವಾಗುತ್ತಿದೆ, ಅದೇರೀತಿ ಅವರ ಉಸಿರಾಟ ನಡೆಯುತ್ತಿದೆ ಹಾಗೂ ಕಣ್ಣುಗಳು ಮಿಟುಕಿಸುತ್ತಿರುವಂತೆ ಅನಿಸಿತು. ಪೂ. ಅಜ್ಜರವರಲ್ಲಿ ಸಜೀವ ಕಂಡು ಬಂದು ಸೂಕ್ಷ್ಮದಲ್ಲಿ ಅವರ ಚಲನವಲನ ಆಗುತ್ತಿದೆ ಎಂದು ಅರಿವಾಯಿತು. – ಡಾ. ಅಂಜೇಶ ಕಣಗಲೇಕರ, ಶ್ರೀ. ಸತ್ಯಕಾಮ ಕಣಗಲೇಕರ ಹಾಗೂ ಸೌ. ಅಂಜಲಿ ಕಣಗಲೇಕರ, ಬೆಳಗಾವಿ.
ಇಲ್ಲಿ ಪ್ರಕಟಿಸಿದ ಅನುಭೂತಿಯು ‘ಭಾವ ಇದ್ದಲ್ಲಿ ದೇವ ಈ ಯುಕ್ತಿಗನುಸಾರ ಸಾಧಕರ ವೈಯಕ್ತಿಕ ಅನುಭೂತಿಯಾಗಿದೆ. ಇದೇರೀತಿ ಎಲ್ಲರಿಗೂ ಬರುತ್ತದೆ ಎಂದಿಲ್ಲ. – ಸಂಪಾದಕರು