ಯಾರು ಏನು ಇದ್ದಾರೆ ?

೧. ಯಾರು ಜೀವಂತ ಇದ್ದಾರೆ ? ಜ್ಞಾನವಂತನು ಜೀವಂತವಾಗಿದ್ದಾನೆ.

೨. ಯಾರು ಸುಖವಾಗಿದ್ದಾರೆ ? ವಾಸನೆ ಮತ್ತು ಕಾಮನೆರಹಿತ ತ್ಯಾಗಿ ಮನುಷ್ಯನು ಸುಖವಾಗಿದ್ದಾನೆ.

೩. ಉತ್ತಮವಾದ ದಯೆ ಯಾವುದು ? ಎಲ್ಲ ಪ್ರಾಣಿಗಳು ಸುಖವಾಗಿಡುವುದು.

೪. ಉತ್ತಮ ಧನ ಯಾವುದು ? ಸಂತೋಷ(ಆನಂದ) ಉತ್ತಮ ಧನವಿದೆ.

೫. ಉತ್ತಮ ಮಾರ್ಗ ಯಾವುದು ? ಸಕಲ ದುಃಖಗಳಿಂದ ಮುಕ್ತಿ ನೀಡುವ ಮಾರ್ಗವೇ ಉತ್ತಮ ಮಾರ್ಗವಾಗಿದೆ.

೬. ದುಃಖ ಯಾವುದು ? ದುಷ್ಟರ ಸಹವಾಸವೇ ಜೀವನದಲ್ಲಿ ನಿಜವಾದ ದುಃಖವಾಗಿದೆ.

೭. ಹಾನಿ ಯಾವುದು ? ‘ಆತ್ಮವನ್ನು ತಿಳಿಯದಿರುವುದು’, ಇದೇ ನಿಜವಾದ ಹಾನಿಯಾಗಿದೆ.

೮. ಯಾರು ಶೂರರಿದ್ದಾರೆ ? ಇಂದ್ರಿಯಗಳನ್ನು ಗೆದ್ದವನು ಮತ್ತು ಅಪರಾಧಿಯನ್ನು ಕ್ಷಮಿಸುವವನು ನಿಜವಾದ ಶೂರನು.

೯. ಏನಿದು ಯೋಗ ? ‘ಕರ್ಮದಲ್ಲಿ ಸಾಕ್ಷಿಭಾವ ಇರುವುದು’, ಇದೇ ನಿಜವಾದ ಯೋಗ.

೧೦. ಪಂಡಿತರು ಯಾರು ? ಸಕಲ ಪ್ರಾಣಿಗಳಲ್ಲಿ ಒಬ್ಬನೇ ಪರಮಾತ್ಮನನ್ನು ನೋಡುವವನು ಮತ್ತು ‘ಬಂಧನ ಮತ್ತು ಮೋಕ್ಷ’ ಇವುಗಳಲ್ಲಿನ ವ್ಯತ್ಯಾಸವನ್ನು ತಿಳಿದಿರುವವನೇ, ಅವನೇ ನಿಜವಾದ ಪಂಡಿತನು.

೧೧. ಏನಿದು ಸುಖ ? ಯಾವುದು ದುಃಖದಲ್ಲಿ ಪರಿವರ್ತನೆಯಾಗುವುದೋ ಅದು ಸುಖ.

೧೨. ಆನಂದ ಯಾವುದು ? ‘ಯಾವುದು ಇಂದ್ರಿಯಗಳಿಲ್ಲದೇ ಪ್ರಾಪ್ತಿಯಾಗುತ್ತದೆ ಮತ್ತು ಯಾವುದು ದುಃಖದಲ್ಲಿ ಪರಿವರ್ತನೆಯಾಗುವುದಿಲ್ಲವೋ, ಅದು ಆನಂದ !

– ಚೈತನ್ಯ (ಸಾಂಕೃತ್ಯ, ೨೮.೫.೨೦೧೨)