ಸದ್ಗುರು ನಂದಕುಮಾರ ಜಾಧವ ಕಾಕಾರವರ ಅಮೂಲ್ಯ ಮಾರ್ಗದರ್ಶನ

ಸದ್ಗುರು ನಂದಕುಮಾರ ಜಾಧವ

೨೭.೪.೨೦೧೩ ರಂದು ಪುಣೆ ಜಿಲ್ಲೆ ಯಲ್ಲಿನ ಶೇ. ೬೦ ಮತ್ತು ಅದಕ್ಕಿಂತಲೂ ಹೆಚ್ಚು ಮಟ್ಟವಿರುವ ಸಾಧಕರಿಗೆ ಪೂ. ನಂದಕುಮಾರ ಜಾಧವ ಕಾಕಾರವರು ಮಾರ್ಗದರ್ಶನ ಮಾಡಿದರು. ಅದರಲ್ಲಿನ ಕೆಲವು ಅಂಶಗಳನ್ನು ಮುಂದೆ ಕೊಡುತ್ತಿದ್ದೇವೆ.

೧ ಅ. ವ್ಯಷ್ಟಿ ಸಾಧನೆಯ ಬಗ್ಗೆ

೧. ‘ಮನಸ್ಸಿನಲ್ಲಿ ತುಂಬ ವಿಚಾರಗಳು ಬರುತ್ತಿದ್ದರೆ, ವೇಗವಾಗಿ ನಾಮಜಪ ಮಾಡಬೇಕು. ಆದರೂ ವಿಚಾರಗಳು ನಿಲ್ಲದಿದ್ದರೆ ಶ್ರೀಕೃಷ್ಣನಿಗೆ ಪ್ರಾರ್ಥನೆ ಮಾಡಬೇಕು.

೨. ಒತ್ತಡವೆನಿಸಿದರೆ (ಟೆನ್ಶನ್) ತಕ್ಷಣ ಪ್ರಾರ್ಥನೆ ಮಾಡಬೇಕು.

೧ ಆ. ಸಮಷ್ಟಿ ಸಾಧನೆಯ ವಿಷಯದಲ್ಲಿ

೧. ‘ಸಾಧಕರು ತಾವಾಗಿಯೇ ವರದಿಯನ್ನು ಕೊಡುವುದಿಲ್ಲ, ಆಗ ಪ್ರತಿಕ್ರಿಯೆಗಳು ಬರುತ್ತವೆ’, ಎಂದು ಸಾಧಕರು ಹೇಳಿದಾಗ ಪೂ. ಕಾಕಾರವರು, “ವರದಿ ತೆಗೆದುಕೊಳ್ಳುವುದು ನಮ್ಮ ಸಾಧನೆಯಾಗಿದೆ. ಸಾಧಕರು ತಾವಾಗಿ ವರದಿಯನ್ನು ಕೊಡದಿದ್ದರೆ ಪ್ರತಿಕ್ರಿಯೆಗಳು ಬರಬಾರದು”, ಎಂದು ಹೇಳಿದರು.

೨. ಇತರರಿಗೆ ಅವರ ತಪ್ಪುಗಳನ್ನು ಹೇಳುವುದೆಂದರೆ ಪ್ರೇಮಭಾವ !

೧ ಇ. ಸಂತಪದವಿಯನ್ನು ಪ್ರಾಪ್ತಮಾಡಿಕೊಳ್ಳಲು ಏನೆಲ್ಲ ಪ್ರಯತ್ನಗಳನ್ನು ಮಾಡಬೇಕು ?

೧. ಭಾವದ ಸ್ತರದಲ್ಲಿನ ಪ್ರಯತ್ನಗಳನ್ನು ಹೆಚ್ಚಿಸಬೇಕು. ಶ್ರೀಕೃಷ್ಣನಿಗೆ ಸತತವಾಗಿ ಮೊರೆಯಿಡಬೇಕು. ಶ್ರೀಕೃಷ್ಣನಿಗೆ ಎಷ್ಟು ಆರ್ತತೆಯಿಂದ ಪ್ರಾರ್ಥನೆ ಮಾಡಬೇಕೆಂದರೆ, ನಮಗೆ ಅವನ ಅನುಭೂತಿ ಬರಬೇಕು. ಅನುಭೂತಿ ಬರುವವರೆಗೆ ತಳಮಳದಿಂದ ಮತ್ತು ಆರ್ತತೆಯಿಂದ ಪ್ರಾರ್ಥನೆ ಮಾಡಬೇಕು. ಶ್ರೀಕೃಷ್ಣನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಶರಣಾಗತಿಯನ್ನು ಹೆಚ್ಚಿಸಬೇಕು. ಕ್ಷಮೆ ಯಾಚನೆ ಮಾಡಬೇಕು.

೨. ಸಾಧಕರು ಕೃತಜ್ಞತಾಭಾವವನ್ನು ಹೆಚ್ಚಿಸಬೇಕು. ಒಂದು ಬಾರಿ ಪ.ಪೂ. ಡಾಕ್ಟರರು, “ಕೃತಜ್ಞತಾಭಾವವಿಲ್ಲದಿದ್ದರೆ, ಶರಣಾಗತಭಾವವನ್ನು ಹೆಚ್ಚಿಸಲು ಅನೇಕ ಜನ್ಮಗಳನ್ನು ಪಡೆಯಬೇಕಾಗುವುದು” ಎಂದು ಹೇಳಿದ್ದರು.

೩. ಸಮಷ್ಟಿಯಲ್ಲಿ ಪ್ರಯತ್ನ ಮಾಡುವಾಗ ನಮ್ಮ ತಪ್ಪುಗಳ ಬಗ್ಗೆ ಇತರರಿಗೆ ಕೇಳುತ್ತೇವೆಯೇ ಮತ್ತು ಇತರರಿಗೆ ಅವರ ತಪ್ಪುಗಳನ್ನು ಹೇಳುತ್ತೇವೆಯೇ, ಎಂದು ವಿಚಾರ ಮಾಡಬೇಕು.

೧ ಈ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕ್ಷಾತ್ರತೇಜ ಮತ್ತು ಬ್ರಾಹ್ಮತೇಜದ ಆವಶ್ಯಕತೆ ! : ಧರ್ಮನಿಷ್ಠ ವ್ಯಕ್ತಿಯು ಹಿಂದೂ ಧರ್ಮದ ಹಾನಿಯನ್ನು ತಾನು ಸ್ವತಃ ಮಾಡುವುದಿಲ್ಲ ಮತ್ತು ಇತರರು ಧರ್ಮಹಾನಿಯನ್ನು ಮಾಡಿದರೆ ಅವನಿಗೆ ಸಹನೆ ಯಾಗುವುದಿಲ್ಲ. ಆದುದರಿಂದ ಧರ್ಮರಕ್ಷಣೆಯ ನಿಜವಾದ ಕಾರ್ಯವನ್ನು ಸಾಧನೆ ಮಾಡುವ ವ್ಯಕ್ತಿಯೇ ಮಾಡಬಲ್ಲನು. ಸಾಧನೆಯಿಂದ ಆತ್ಮಬಲ ಜಾಗೃತವಾಗುತ್ತದೆ. ಆತ್ಮಬಲ ಜಾಗೃತವಾದ ವ್ಯಕ್ತಿಯಿಂದ ಧರ್ಮದ ಕಾರ್ಯವು ಪರಿಣಾಮಕಾರಿಯಾಗಿ ಆಗುತ್ತದೆ. ಹಾಗೆಯೇ ಈ ಕಾರ್ಯಕ್ಕೆ ಈಶ್ವರನ ಆಶೀರ್ವಾದವೂ ಲಭಿಸುತ್ತದೆ. ಆದುದರಿಂದ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ, ಅವರು ಸ್ವತಃ ಸಾಧನೆ ಮಾಡಬೇಕು’, ಎಂದು ಹೇಳಬೇಕು. ಕ್ಷಾತ್ರತೇಜ ಮತ್ತು ಸಾಧನೆಯನ್ನು ಮಾಡಿ ದೊರಕಿದ ಬ್ರಾಹ್ಮತೇಜವು ಒಟ್ಟಾದರೆ, ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಮಾಡುವುದು ಸುಲಭವಾಗುವುದು.’

೧ ಉ. ಶರಣಾಗತಭಾವ ಮತ್ತು ಕೃತಜ್ಞತಾಭಾವ ವನ್ನಿಟ್ಟುಕೊಂಡು ವ್ಯಷ್ಟಿ ಸಾಧನೆಯನ್ನು ಮಾಡಬೇಕು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ತಮ್ಮನ್ನು ತಾವು ಸಂಪೂರ್ಣ ಸಮರ್ಪಿಸಿಕೊಂಡು ಸೇವೆಯನ್ನು ಮಾಡುವುದೇ ಶ್ರೀಗುರುಚರಣಗಳಲ್ಲಿ ನಿಜವಾದ ಕೃತಜ್ಞತೆಯಾಗಿದೆ ! : ‘ಪ.ಪೂ. ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುವ ಭಾಗ್ಯವು ನಮಗೆ ಲಭಿಸಿದೆ. ಅವರಿಂದಾಗಿಯೇ ದೈವೀ ನಾದ ಕೇಳಿಸುವುದು, ದೈವೀ ಕಣಗಳ ಮಳೆ ಸುರಿಯುವುದು, ಓಂಗಳು ಮೂಡುವುದು ಮುಂತಾದ ವೈಶಿಷ್ಟ್ಯಪೂರ್ಣ ಘಟನೆಗಳು ನಮಗೆ ಅನುಭವಿಸಲು ಸಿಗುತ್ತಿವೆ. ಮುಂಬರುವ ಭೀಕರ ಆಪತ್ಕಾಲದ ಅರಿವನ್ನು ಅವರೇ ನಮಗೆ ಮಾಡಿಕೊಟ್ಟರು. ಮೋಕ್ಷಪ್ರಾಪ್ತಿಯೇ ನಮ್ಮ ಜೀವನದ ಧ್ಯೇಯವಾಗಿದೆ, ಎಂಬುದು ಅವರಿಂದಾಗಿಯೇ ತಿಳಿಯಿತು ಮತ್ತು ಅದನ್ನು ಪಡೆಯಲು ಅವರೇ ನಮ್ಮಿಂದ ಸಾಧನೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಅವರ ಚರಣಗಳಲ್ಲಿ ಕೋಟಿಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸಬೇಕು.

ಪ.ಪೂ. ಡಾಕ್ಟರರಿಗೆ ಅಪೇಕ್ಷಿತವಿರುವಂತೆ ಸ್ವಭಾವದೋಷ-ನಿರ್ಮೂಲನೆ, ಅಹಂ-ನಿರ್ಮೂಲನೆ, ಗುಣಸಂವರ್ಧನೆ ಮತ್ತು ಭಾವಜಾಗೃತಿಗಾಗಿ ತಳಮಳದಿಂದ ಮತ್ತು ಸಾತತ್ಯದಿಂದ ಪ್ರಯತ್ನಿಸಿ ಶೀಘ್ರ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳಬೇಕು. ಸಮಾಜದಲ್ಲಿನ ವ್ಯಕ್ತಿಗಳಿಗೆ ‘ಹಿಂದೂ ರಾಷ್ಟ್ರವು ಏಕೆ ಬೇಕು ? ಅದು ಹೇಗಿರುತ್ತದೆ ?’, ಎಂಬುದರ ಮಾಹಿತಿಯನ್ನು ನೀಡಬೇಕು. ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕೆಂದು; ಸಾಧನೆ ಮತ್ತು ಧರ್ಮಾಚರಣೆ ಮಾಡುವುದರ ಮಹತ್ವವನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಟ್ಟು ಅವರಿಗೆ ಧರ್ಮಾಚರಣೆ ಮಾಡಲು ಪ್ರವೃತ್ತಗೊಳಿಸಬೇಕು. ಪ.ಪೂ. ಡಾಕ್ಟರರು ಸಂಕಲನ ಮಾಡಿದ ಗ್ರಂಥಗಳ ಅಧ್ಯಯನ ಮಾಡಿ ಅವುಗಳಲ್ಲಿನ ಜ್ಞಾನವನ್ನು ಸಮಾಜಕ್ಕೆ ತಲುಪಿಸಿ, ಸಮಷ್ಟಿ ಸಾಧನೆಯ ಅವಕಾಶ ಪಡೆದು ಗುರುಕೃಪೆಗೆ ಪಾತ್ರರಾಗಬೇಕು. ನಾವು ಜನ್ಮ-ಮೃತ್ಯುವಿನ ಚಕ್ರದಿಂದ ಬಿಡುಗಡೆಯಾಗಬೇಕೆಂದು ಪ.ಪೂ. ಗುರುದೇವರು ಯಾವ ಪ್ರಯತ್ನಗಳನ್ನು ನಮ್ಮಿಂದ ಮಾಡಿಸಿಕೊಳ್ಳುತ್ತಿರುವರೋ, ಅವುಗಳಿಗಾಗಿ ನಾವು ಅವರ ಚರಣಗಳಲ್ಲಿ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ ಅದು ಕಡಿಮೆಯೇ ಆಗಿದೆ. ಆದರೂ ಅವರ ಚರಣಗಳಲ್ಲಿ ಸದಾ ಶರಣಾಗತಭಾವ ಮತ್ತು ಕೃತಜ್ಞತಾಭಾವವನ್ನಿಟ್ಟುಕೊಂಡು ವ್ಯಷ್ಟಿ ಸಾಧನೆಯನ್ನು ಮಾಡುವುದು ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಸಂಪೂರ್ಣ ಸಮರ್ಪಿಸಿಕೊಂಡು ಸೇವೆಯನ್ನು ಮಾಡುವುದೇ ಶ್ರೀಗುರುಚರಣಗಳಲ್ಲಿ ನಿಜವಾದ ಕೃತಜ್ಞತೆಯಾಗಿದೆ !’ – (ಪೂ.) ನಂದಕುಮಾರ ಜಾಧವ (೧೨.೭.೨೦೧೩)

೧ ಊ. ‘ಸೇವೆಯು ಸಿಕ್ಕಿದ ನಂತರ ಯೋಗ್ಯ ವಿಚಾರಪ್ರಕ್ರಿಯೆ ಹೇಗಿರಬೇಕು ?’, ಎಂಬ ಬಗ್ಗೆ ಮಾಡಿದ ಮಾರ್ಗದರ್ಶನ

೧. ‘ನನ್ನಲ್ಲಿ ಏನಾದರೂ ಒಳ್ಳೆಯದಿದೆ; ಆದುದರಿಂದ ನನಗೆ ಈ ಸೇವೆಯನ್ನು ನೀಡಿದ್ದಾರೆ’, ಎನ್ನುವ ಬದಲು ‘ನನ್ನಲ್ಲಿ ಏನೋ ಕೊರತೆಯಿದೆ ಆದುದರಿಂದ ನನಗೆ ಕಲಿಯಲು ಈ ಸೇವೆಯನ್ನು ನೀಡಿದ್ದಾರೆ, ಈ ಸೇವೆಯ ಮಾಧ್ಯಮದಿಂದ ಕಲಿತು ನನಗೆ ಉತ್ತಮ ರೀತಿಯಲ್ಲಿ ಸಾಧನೆಯನ್ನು ಮಾಡುವುದಿದೆ’, ಎಂಬುದನ್ನು ಯಾವಾಗಲೂ ಮನಸ್ಸಿಗೆ ಹೇಳುತ್ತಿರಬೇಕು.

೨. ಶ್ರೀಕೃಷ್ಣನಿಗೆ ಮುಂದಿನ ಪ್ರಾರ್ಥನೆಯನ್ನು ಮಾಡಬೇಕು, ‘ಹೇ ಶ್ರೀಕೃಷ್ಣ, ಗುರುದೇವರಿಗೆ ಹೇಗೆ ಅಪೇಕ್ಷಿತವಿದೆಯೋ, ಹಾಗೆ ನೀನು ನನ್ನನು ರೂಪಿಸು.’

೩. ‘ಈಶ್ವರನು ನನ್ನನ್ನು ಮಾಧ್ಯಮವನ್ನಾಗಿ ಮಾಡಿಕೊಂಡಿದ್ದಾನೆ’, ಎಂಬುದರ ಬಗ್ಗೆ ನಮಗೆ ಯಾವಾಗಲೂ ಕೃತಜ್ಞತೆ ಅನಿಸಬೇಕು. ಸತತ ಕೃತಜ್ಞತಾಭಾವದಲ್ಲಿರಲು ಪ್ರಯತ್ನಿಸಬೇಕು.

೪. ‘ಯಾವಾಗ ನನ್ನಿಂದ ಸಾಧ್ಯವಿಲ್ಲ’, ಎಂದು ಅನಿಸುತ್ತದೆಯೋ, ಆಗ ನನ್ನಲ್ಲಿ ಕರ್ತೃತ್ವವಿರುತ್ತದೆ. ಆದುದರಿಂದ ‘ನನಗೆ ಸಾಧ್ಯವಿಲ್ಲ, ಈಶ್ವರನೇ, ನೀನೇ ನನ್ನಿಂದ ಮಾಡಿಸಿಕೋ, ಎಂದು ಪ್ರಾರ್ಥನೆ ಮಾಡಬೇಕು.

೫. ‘ನನ್ನೊಂದಿಗೆ ಸೇವೆಯನ್ನು ಮಾಡುವ ಇತರ ಸಹಸಾಧಕರ ಸಾಧನೆಯಾಗುತ್ತಿದೆಯೇ ? ಸೇವೆಯಿಂದ ಸಹಸಾಧಕರನ್ನು ಮುಂದಿನ ಹಂತಕ್ಕೆ ಕರೆದುಕೊಂಡು ಹೋಗುವ ವಿಚಾರ ಆಗುತ್ತದೆಯೇ ?’, ಎಂಬ ವಿಚಾರವು ನಿರಂತರವಾಗಿ ಬರಬೇಕು.

೬. ‘ನಮ್ಮ ತಪ್ಪುಗಳು ನಮ್ಮ ಗಮನಕ್ಕೆ ಬಂದು ನಾವು ಅವುಗಳಿಂದ ಕಲಿಯುತ್ತೇವೆಯೇ ? ಸಹಸಾಧಕರ ತಪ್ಪುಗಳು ಗಮನಕ್ಕೆ ಬರುತ್ತವೆಯೇ ? ಅವರಿಗೆ ಅವುಗಳನ್ನು ಯೋಗ್ಯ ರೀತಿಯಲ್ಲಿ ಹೇಳಲು ಸಾಧ್ಯವಿದೆಯೇ ?’, ಎಂಬುದರ ಅಧ್ಯಯನ ಮಾಡಬೇಕು.’ – ಶ್ರೀ. ಸುಮಿತ ಸಾಗವೇಕರ, ಸನಾತನ ಆಶ್ರಮ, ಗೋವಾ. (ಏಪ್ರಿಲ್ ೨೦೧೮)