ಅಧಿಕ ಮಾಸದಲ್ಲಿನ ಶುಭ-ಅಶುಭ ದಿನಗಳು ಮತ್ತು ಆ ದಿನಗಳ ಆಧ್ಯಾತ್ಮಿಕ ಮಹತ್ವ
ಪ್ರತಿಯೊಂದು ಮಾಸದ ಅಮಾವಾಸ್ಯೆಯ ನಂತರ ಬರುವ ಶುಕ್ಲ ಪಕ್ಷದಲ್ಲಿನ ಅಷ್ಟಮಿ ತಿಥಿಗೆ ‘ದುರ್ಗಾಷ್ಟಮಿ’ ಎನ್ನುತ್ತಾರೆ. ಈ ದಿನ ಶ್ರೀ ದುರ್ಗಾದೇವಿಯ ವ್ರತವನ್ನು ಮಾಡುತ್ತಾರೆ. ಅಸುರ ಶಕ್ತಿಗಳ ನಾಶವಾಗಿ ಭಯಮುಕ್ತವಾಗಲು ಈ ವ್ರತವನ್ನು ಮಾಡುತ್ತಾರೆ. ಈ ದಿನ ದುರ್ಗಾಸಪ್ತಶತಿ ಸ್ತೋತ್ರ, ಕವಚ, ಅರ್ಗಲಾ ಸ್ತೋತ್ರ ಮುಂತಾದ ದೇವಿ ಸ್ತೋತ್ರಗಳನ್ನು ಪಠಿಸುತ್ತಾರೆ.