ಅಧಿಕ ಮಾಸದಲ್ಲಿನ ಶುಭ-ಅಶುಭ ದಿನಗಳು ಮತ್ತು ಆ ದಿನಗಳ ಆಧ್ಯಾತ್ಮಿಕ ಮಹತ್ವ

ಸೌ. ಪ್ರಾಜಕ್ತಾ ಜೋಶಿ

ಅಧಿಕ ಆಶ್ವಯುಜ ಮಾಸವು ‘೧೮.೯.೨೦೨೦ ರಿಂದ ಆರಂಭವಾಗಿದೆ. ಅಧಿಕ ಮಾಸದಿಂದ ಎಲ್ಲರಿಗೂ ಹಿಂದೂ ಧರ್ಮದ ತಿಥಿ, ನಕ್ಷತ್ರ, ಶುಭ-ಅಶುಭ ಮತ್ತು ಮಾಸಕ್ಕನುಸಾರ ಪ್ರತಿಯೊಂದು ದಿನದ ಶಾಸ್ತ್ರಾರ್ಥದ ಜ್ಞಾನವಾಗಲು ‘ಸಾಪ್ತಾಹಿಕ ಶಾಸ್ತ್ರಾರ್ಥ’ (ಸಾಪ್ತಾಹಿಕ ದಿನವಿಶೇಷ) ಈ ಲೇಖನಮಾಲೆಯನ್ನು ಪ್ರಕಟಿಸುತ್ತಿದ್ದೇವೆ.

೨. ಶಾಸ್ತ್ರಾರ್ಥ

೨ ಅ. ಅಧಿಕ ಮಾಸ : ಅಧಿಕ ಮಾಸದ ಬಗ್ಗೆ ಸವಿಸ್ತಾರ ಮಾಹಿತಿ

https://www.sanatan.org/kannada/92226.html ಈ ಲಿಂಕ್‌ನಲ್ಲಿ ಲಭ್ಯವಿದೆ. ಅಧಿಕ ಮಾಸವನ್ನು ‘ಪುರುಷೋತ್ತಮ ಮಾಸ’ವೆಂದು ಕರೆಯುತ್ತಾರೆ. ಈ ಮಾಸದಲ್ಲಿ ಹೆಚ್ಚೆಚ್ಚು ನಾಮಜಪ, ದಾನ ಮತ್ತು ಪುಣ್ಯಕರ್ಮಗಳನ್ನು ಮಾಡಬೇಕು. ಇದರ ಫಲವು ಮುಂದಿನ ಅಧಿಕ ಮಾಸದವರೆಗೆ ಪ್ರಾಪ್ತವಾಗುತ್ತದೆ.

೨. ಆ. ಕ್ಷಯ ದಿನ : ೧೯.೯.೨೦೨೦ ಈ ದಿನವು ‘ಕ್ಷಯ ದಿನ’ವಾಗಿದೆ. ಯಾವ ತಿಥಿಯ ಸಮಯದಲ್ಲಿ ಸೂರ್ಯೋದಯದ ಸಮಯ ವಿರುವುದಿಲ್ಲವೋ, ಅದು ‘ಕ್ಷಯ ತಿಥಿ’ ಆಗಿರುತ್ತದೆ. ಕ್ಷಯ ತಿಥಿಯು ಶುಭ ಕಾರ್ಯಕ್ಕಾಗಿ ವರ್ಜ್ಯವಿರುತ್ತದೆ.

೨ ಇ. ವಿನಾಯಕ ಚತುರ್ಥಿ : ಪ್ರತಿಯೊಂದು ಮಾಸದ ಅಮಾವಾಸ್ಯೆಯ ನಂತರ ಬರುವ ಶುಕ್ಲ ಪಕ್ಷದಲ್ಲಿನ ಚತುರ್ಥಿ ತಿಥಿಗೆ ‘ವಿನಾಯಕ ಚತುರ್ಥಿ’ ಎನ್ನುತ್ತಾರೆ. ಈ ದಿನ ಶ್ರೀ ವಿನಾಯಕ (ಗಣೇಶ) ವ್ರತವನ್ನು ಮಾಡುತ್ತಾರೆ. ಈ ದಿನ ಶ್ರೀ ವಿನಾಯಕಿ ಚತುರ್ಥಿ ಮಹಾತ್ಮೆ, ವ್ರತಕಥೆ ಮತ್ತು ಶ್ರೀ ವಿನಾಯಕ ಅಷ್ಟೋತ್ತರಶತ ನಾಮಸ್ತೋತ್ರವನ್ನು ಓದುತ್ತಾರೆ. ಈ ಉಪಾಸನೆಯಿಂದ ಎಲ್ಲ ಕಾರ್ಯಗಳು ಸಿದ್ಧವಾಗುತ್ತವೆ.

೨ ಈ. ದುರ್ಗಾಷ್ಟಮಿ : ಪ್ರತಿಯೊಂದು ಮಾಸದ ಅಮಾವಾಸ್ಯೆಯ ನಂತರ ಬರುವ ಶುಕ್ಲ ಪಕ್ಷದಲ್ಲಿನ ಅಷ್ಟಮಿ ತಿಥಿಗೆ ‘ದುರ್ಗಾಷ್ಟಮಿ’ ಎನ್ನುತ್ತಾರೆ. ಈ ದಿನ ಶ್ರೀ ದುರ್ಗಾದೇವಿಯ ವ್ರತವನ್ನು ಮಾಡುತ್ತಾರೆ. ಅಸುರ ಶಕ್ತಿಗಳ ನಾಶವಾಗಿ ಭಯಮುಕ್ತವಾಗಲು ಈ ವ್ರತವನ್ನು ಮಾಡುತ್ತಾರೆ. ಈ ದಿನ ದುರ್ಗಾಸಪ್ತಶತಿ ಸ್ತೋತ್ರ, ಕವಚ, ಅರ್ಗಲಾ ಸ್ತೋತ್ರ ಮುಂತಾದ ದೇವಿ ಸ್ತೋತ್ರಗಳನ್ನು ಪಠಿಸುತ್ತಾರೆ.

೨ ಉ. ಯಮಘಂಟ ಯೋಗ : ರವಿವಾರ ಮಾಘಾ, ಸೋಮವಾರ ವಿಶಾಖಾ, ಮಂಗಳವಾರ ಆರ್ದ್ರಾ, ಬುಧವಾರ ಮೂಲಾ, ಗುರುವಾರ ಕೃತ್ತಿಕಾ, ಶುಕ್ರವಾರ ರೋಹಿಣಿ ಮತ್ತು ಶನಿವಾರ ಹಸ್ತಾ ನಕ್ಷತ್ರಗಳು ಒಟ್ಟಾಗಿ ಬಂದರೆ ‘ಯಮಘಂಟ ಯೋಗ’ವಾಗುತ್ತದೆ. ಇದು ಅನಿಷ್ಟ ಯೋಗವಾಗಿದೆ. ಈ ಯೋಗದ ಸಮಯದಲ್ಲಿ ಎಂದಿಗೂ ಪ್ರವಾಸ  ಮಾಡಬಾರದು.

೩. ಅಧಿಕ ಮಾಸದಲ್ಲಿ ಮಾಡಬೇಕಾದ ಉಪಾಸನೆಯೊಂದಿಗೆ ಈ ವಾರದ ಕೆಲವು ತಿಥಿಗಳ ಮಹತ್ವವನ್ನು ಅರಿತು ಉಪಾಸನೆ ಮಾಡುವುದು ಲಾಭದಾಯಕವಾಗಿದೆ. ಸತ್ಸೇವೆಗೆ ಪ್ರಾಧಾನ್ಯತೆ ನೀಡಿ ಸತತ ಈಶ್ವರೀ ಅನುಸಂಧಾನದಲ್ಲಿದ್ದರೆ ಮನುಷ್ಯ ಜನ್ಮವು ಸಾರ್ಥಕವಾಗುತ್ತದೆ.’ – ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಿತ ವಿಶಾರದ, ವಾಸ್ತು ವಿಶಾರದ, ಅಂಕ ಜ್ಯೋತಿಷ್ಯ ವಿಶಾರದ, ರತ್ನಶಾಸ್ತ್ರ ವಿಶಾರದ, ಅಷ್ಟಕವರ್ಗ ವಿಶಾರದ, Certified Dowser, ರಮಲ ಪಂಡಿತ, ಹಸ್ತಾಕ್ಷರ ಮನೋವಿಶ್ಲೇಷಣೆ ಶಾಸ್ತ್ರ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಫೋಂಡಾ, ಗೋವಾ. (೧೫.೯.೨೦೨೦)