ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಬಗ್ಗೆ ಮಂಗಳೂರಿನ ಶ್ರೀ. ಕೀರ್ತನ್ ಭಟ್ ಇವರಿಗೆ ಹೊಳೆದ ಕವಿತೆ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಮನ ವರ್ಣಿಸಿ ತಣಿಯದು
ನಿಮ್ಮ ಕುರಿತಾಗಿ
ಏನ ವರ್ಣಿಸಲೆಂದೇ
ನನಗೆಂದಿಗೂ ಅರಿವಾಗದು || ೧ ||

ಕಣ್ಮುಂದೆ ನಿಮ್ಮ ರೂಪ ಬಂದೊಡನೆ
ಮನ ಭೋರ್ಗರೆವುದು
ಅದರಿಂದಾದ ಆ ಅಲೆಗಳು
ಎನ್ನ ತೋಯಿಸುತಿಹವು || ೨ ||

ಅಸಾಧ್ಯವಾಗಿಹುದು ಅರಿಯಲು ಎನಗೆ
ಇದರ ಕಾರ್ಯಕಾರಣ ಭಾವವು
ನಿಮ್ಮ ಕೀರ್ತನೆಯಲಿಯೇ
ಮನ ನಿಲ್ಲಲಿಚ್ಛಿಸಿಹುದು || ೩ ||

ಕಂಡದ್ದು ಪ್ರತ್ಯಕ್ಷ ಒಂದೋ ಎರಡೋ ಬಾರಿ
ಕೇಳಿದ್ದು ಎರಡೋ ಮೂರೋ ಮಾತು
ಇಷ್ಟಕ್ಕೇ ಇಷ್ಟಾದರೆ
ನಿರಂತರ ಸಹವಾಸದ ಫಲ ಅಗಣಿತವೇನೋ || ೪ ||

ಅವರ್ಣನೀಯ ಆ ಮುಖವರ್ಚಸ್ಸು
ಶಬ್ದಗಳು ಕ್ಷುಲ್ಲಕವೆನಿಸುತಿಹವು
ಕಣ್ಮುಂದಿರುವ ರೂಪ ಅಸ್ಪಷ್ಟವಾದರೂ
ಅನುಭವಿಸುತಿಹ ಆನಂದ ನಿಜವೇ ಹೌದು || ೫ ||

ಅಮ್ಮಾ ಎಂದು ಬಾಯ್ತುಂಬ ಕರೆವಾಸೆ
ಆ ಮಹಾ ಜಗದ್ಧಾತ್ರಿಯನು
ನಮಿಸುತಿಹೆನು ಕುಳಿತಲ್ಲೆ
ಅವರ ಮಮತೆಯ ಕಡಲಿನೊಳು || ೬ ||

ಅಲ್ಪನಾಗಿಹೆನು ಬುದ್ಧಿಯಿಂದ
ಅಳೆಯಲು ನಿಮ್ಮ ಸಹವಾಸದ ಆನಂದ
ಏಕೀ ಸ್ಥಿತಿಯೆಂದು ತಿಳಿಯದೇ ಹೋಗಿಹೆನು
ನಿರಂತರ ನಿಮ್ಮ ಸಹವಾಸ ಸಿಗಲೆಂದು
ನಿಮ್ಮ ಚರಣಗಳಲಿ ಅನಂತ ಪ್ರಾರ್ಥನೆಯು || ೭ ||

– ಶ್ರೀ. ಕೀರ್ತನ ಭಟ್, ಸನಾತನ ಸೇವಾಕೇಂದ್ರ, ಮಂಗಳೂರು.