ಮಂಗಳೂರು ಸೇವಾಕೇಂದ್ರದ ಶ್ರೀ. ರೂಪೇಶ ಗೋಕರ್ಣ ಇವರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಚರಣದಲ್ಲಿ ಕೃತಜ್ಞತಾಭಾವದಿಂದ ಮಾಡಿದ ಪ್ರಾರ್ಥನೆ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ,

‘ಓಂ ನಿರ್ಮಾಣವಾಗಿರುವ, ಚೈತನ್ಯಮಯ ಮತ್ತು ಗುಲಾಬಿ ಬಣ್ಣದ ನಿಮ್ಮ ಕೋಮಲಚರಣಗಳಲ್ಲಿ ಕೃತಜ್ಞತಾಪೂರ್ವಕ ನಮಸ್ಕಾರಗಳು ! (ಒಮ್ಮೆ ಓರ್ವ ಸಾಧಕನು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರ ಪಾದಗಳ ಛಾಯಾಚಿತ್ರವನ್ನು ತೆಗೆಯುತ್ತಿರುವಾಗ ಅವರ ಪಾದಗಳಲ್ಲಿ ಮೂಡಿದ ‘ಓಂಅನ್ನು ನೋಡಿದೆನು.)

ಶ್ರೀಸತ್‌ಶಕ್ತಿ (ಸದ್ಗುರು) ಸೌ. ಬಿಂದಾ ಸಿಂಗಬಾಳ

೧. ಮಾತಾ (ಸದ್ಗುರು (ಸೌ.) ಬಿಂದಾ ಸಿಂಗಬಾಳ), ನನಗೆ ಅಖಂಡ ಸದ್ಗುರು ಸೇವೆ ಮಾಡುವುದಿದೆ.

೨. ನನ್ನನ್ನು ಅಖಂಡ ಸದ್ಗುರುವಿನ ಸ್ಮರಣೆ ಮತ್ತು ಭಕ್ತಿ ಮಾಡಿ ನಿಮ್ಮ ಚರಣದಲ್ಲಿರಿಸಿರಿ

೩. ನನಗೆ ಸದ್ಗುರುಮಯ ಆಗಬೇಕಾಗಿದೆ.

೪. ನನಗೆ ಅಖಂಡ ಸದ್ಗುರುವಿನ ಚೈತನ್ಯ ಮತ್ತು ಅಸ್ತಿತ್ವದ ಆನಂದ ವನ್ನು ಅನುಭವಿಸಲಿಕ್ಕಿದೆ

೫. ನನ್ನ ಶರೀರ, ಮನಸ್ಸು, ಬುದ್ಧಿ, ಚಿತ್ತ, ಅಹಂ ಮತ್ತು ನನ್ನ ಜೀವನ ಸದ್ಗುರುವಿನ ಚರಣಗಳಲ್ಲಿ ಅರ್ಪಣೆಯಾಗಿ ನನಗೆ ಸಮರ್ಪಣೆಯಾಗುವುದಿದೆ.

೬. ನನಗೆ ಜೀವನದಲ್ಲಿ ಕೇವಲ ಸದ್ಗುರುವಿನ ಚರಣ ಪ್ರಾಪ್ತಿ ಮಾಡಿಕೊಳ್ಳುವುದಿದೆ, ನನಗೆ ಸದ್ಗುರುಗಳನ್ನು ಬಿಟ್ಟು ಬೇರೆ ಏನೂ ಬೇಡ !

೭. ಹೇ ವಿಷ್ಣು ಪ್ರಿಯೆ, ಮಹಾಲಕ್ಷ್ಮೀಯ ಅವತಾರವಾಗಿರುವ, ಪರಾತ್ಪರ ಗುರು ಡಾಕ್ಟರರ ಆದರ್ಶ ಶಿಷ್ಯೆ, ಸಮಷ್ಟಿ ರಾಧಾ (ಸದ್ಗುರು ಬಿಂದಾ ಸಿಂಗಬಾಳ)ರವರ ‘ಓಂ ಇರುವ ಚೈತನ್ಯಮಯ ದೈವೀ ಚರಣಗಳಲ್ಲಿ ನಾನು ಪ್ರಾರ್ಥನೆ ಮಾಡುತ್ತಿದ್ದೇನೆ, ನನ್ನ ಜೀವನ ಸದ್ಗುರುವಿನ (ನಿಮ್ಮ) ಚರಣದಲ್ಲಿ ಸಮರ್ಪಣೆಯಾಗಲಿ. ನನಗೆ ಭಗವಾನ್ ಶ್ರೀವಿಷ್ಣುವಿನ ಚರಣಗಳಲ್ಲಿ ಅಖಂಡವಾಗಿರಿಸಿ ಮತ್ತು ಏಕರೂಪ ಮಾಡಿರಿ. ಯಾವ ರೀತಿ ಹನುಮಂತನು ಶ್ರೀರಾಮನ ಸೇವೆ ಮತ್ತು ಭಕ್ತಿ ಮಾಡಿದನೋ ಅದೇ ರೀತಿ ನನ್ನಿಂದ ಸದ್ಗುರುವಿನ ಭಕ್ತಿ ಮತ್ತು ಸೇವೆಯನ್ನು ಮಾಡಿಸಿಕೊಳ್ಳಿರಿ.

| ಶ್ರೀ ಸದ್ಗುರು ಚರಣಾರ್ಪಣಮಸ್ತು |

– ಶ್ರೀ. ರೂಪೇಶ ಗೋಕರ್ಣ, ಸನಾತನ ಆಶ್ರಮ, ರಾಮನಾಥಿ ಗೋವಾ. (೨೨.೪.೨೦೧೯)