ಆಧ್ಯಾತ್ಮಿಕ ತೊಂದರೆ ಕಡಿಮೆಯಾಗದಿರುವುದರ ಹಿಂದಿರುವ ಕಾರಣಗಳ ಚಿಂತನೆಯನ್ನು ಮಾಡಿರಿ !

(ಪೂ.) ಶ್ರೀ ಸಂದೀಪ ಆಳಶಿ

ನನಗೆ ೨೦೧೨ ರಿಂದ ಆಧ್ಯಾತ್ಮಿಕ ತೊಂದರೆಗಳು ಪ್ರಾರಂಭವಾಯಿತು. ಅಂದಿನಿಂದ ಇಲ್ಲಿಯವರೆಗೆ ನಾನು ನಿಯಮಿತವಾಗಿ ನಾಮಜಪ ಇತ್ಯಾದಿ ಉಪಾಯಗಳನ್ನು ಮಾಡುತ್ತಿದ್ದೇನೆ. ಮೊದಲಿಗಿಂತ ನನ್ನ ತೊಂದರೆಯು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದರೂ, ಸಾಧಾರಣವಾಗಿ ಪ್ರತಿದಿನ ನನಗೆ ಉಪಾಯಗಳನ್ನು ಮೊದಲಿನಷ್ಟೇ ಸಮಯ ಮಾಡಬೇಕಾಗುತ್ತದೆ. ನನ್ನ ತೊಂದರೆ ಕಡಿಮೆಯಾಗದಿರುವ ಹಿಂದಿರುವ ಕಾರಣಗಳು ಯಾವವು, ಎನ್ನುವುದರ ಬಗ್ಗೆ ನಾನು ಮಾಡಿದ ಚಿಂತನೆಯು ಮುಂದಿನಂತಿದೆ.

ತೊಂದರೆ ಕಡಿಮೆಯಾಗದಿರುವುದರ ಹಿಂದಿರುವ ಕಾರಣಗಳ ಪ್ರಮಾಣ

ಆಧ್ಯಾತ್ಮಿಕ ತೊಂದರೆಯಿರುವ ಬಹಳಷ್ಟು ಸಾಧಕರು ‘ತೊಂದರೆ ಇದೆ; ಎಂದು ಕೇವಲ ಉಪಾಯವನ್ನು ಮಾಡುವುದಕ್ಕೆ ಮಾತ್ರ ಹೆಚ್ಚು ಒತ್ತು ಕೊಡುತ್ತಾರೆ; ಆದರೆ ‘ಉಪಾಯವು ಗುಣಾತ್ಮಕವಾಗಿ ಆಗುತ್ತಿದೆಯೇ ? ತೊಂದರೆ ಹೆಚ್ಚಾಗಲು ಕಾರಣವಾಗಿರುವ ಹಿಂದಿರುವ ಸ್ವಭಾವದೋಷವನ್ನು ದೂರಗೊಳಿಸಲು ತಳಮಳದಿಂದ ಪ್ರಯತ್ನಗಳಾಗುತ್ತಿವೆಯೇ ? (ಒಂದು ಚಿಕ್ಕ ಸ್ವಭಾವದೋಷದಿಂದಲೂ ತೊಂದರೆ ಹೆಚ್ಚಾಗಬಹುದು) ಇತ್ಯಾದಿ ವಿಷಯಗಳ ವಿಚಾರವನ್ನು ಹೆಚ್ಚು ಮಾಡುವುದಿಲ್ಲ ಇದರಿಂದ ಅವರ ತೊಂದರೆ ಬೇಗ ಕಡಿಮೆಯಾಗುವುದಿಲ್ಲ. ತೊಂದರೆಯಿರುವ ಸಾಧಕರು ಮೇಲಿನಂತೆ ಚಿಂತನೆಯನ್ನು ಮಾಡಿದರೆ ತೊಂದರೆ ದೂರಗೊಳಿಸಲು ಅವರ ಪ್ರಯತ್ನಗಳಿಗೆ ಯೋಗ್ಯ ಮಾರ್ಗದರ್ಶನ ದೊರಕಿ ಸಹಾಯವಾಗುವುದು. ಸಾಧಕರಿಗೆ ಅವಶ್ಯಕತೆಯೆನಿಸಿದರೆ ಈ ಚಿಂತನೆಯನ್ನು ಮಾಡಲು ಅವರು ಕುಟುಂಬದವರ ಅಥವಾ ಜವಾಬ್ದಾರ ಸಾಧಕರ ಸಹಾಯವನ್ನು ಪಡೆದುಕೊಳ್ಳಬಹುದು. ಸಾಧಕರು ‘ತಮಗೆ ತೊಂದರೆಯಿದೆ, ಎಂದು ಹೆಚ್ಚು ವಿಚಾರಮಾಡುವುದು ಅಥವಾ ದುಃಖಿಸುವುದಕ್ಕಿಂತ ‘ತಮ್ಮ ಮನಸ್ಸನ್ನು ಸಾಧಕತ್ವದ ದೃಷ್ಟಿಯಿಂದ ಸಿದ್ಧಗೊಳಿಸುವುದು ಪರಾತ್ಪರ ಗುರು ಡಾ. ಆಠವಲೆಯವರಿಗೆ ಅಪೇಕ್ಷಿತವಿದೆ, ಎಂದು ವಿಚಾರ ಮಾಡಬೇಕು. ‘ತೊಂದರೆಯನ್ನು ಎದುರಿಸಲು ನಮಗೆ ಯಾವ ಸಂಘರ್ಷವನ್ನು ಮಾಡಬೇಕಾಗುತ್ತದೆಯೋ, ಅದನ್ನು ಮಾಡಲು ನಾವು ಕಲಿತರೆ, ಮುಂದೆ ಜೀವನದಲ್ಲಿ ಎದುರಾಗುವ ಯಾವುದೇ ಸಂಘರ್ಷದಲ್ಲಿ ಜಯಶಾಲಿಗಳಾಗಲು ನಮಗೆ ಸಾಧ್ಯವಾಗಲಿದೆ, ಎಂದು ಸಾಧಕರು ದೃಢನಿಶ್ಚಯ ಹೊಂದಿರಬೇಕು. ಪರಾತ್ಪರ ಗುರು ಡಾಕ್ಟರರಿಗೆ ಶರಣಾಗತಿಯಿಂದ ಮೊರೆ ಹೋದರೆ, ಈ ಸಂಘರ್ಷದ ಬಲವೂ ನಮ್ಮ ಬರುವುದು. – (ಪೂ.) ಶ್ರೀ ಸಂದೀಪ ಆಳಶಿ (೨೬.೮.೨೦೨೦)