ಸೇವೆಯ ಮಧ್ಯದಲ್ಲಿ ಸ್ವಲ್ಪ ವಿಶ್ರಾಂತಿಯ ಅವಶ್ಯಕತೆಯಿದ್ದಾಗ ಸಾತ್ತ್ವಿಕ ಕೃತಿಗಳನ್ನು ಮಾಡಬೇಕು !

(ಪೂ.) ಸಂದೀಪ ಆಳಶಿ

‘ತುಂಬಾ ಸಮಯ ನಿರಂತರ ಶಾರೀರಿಕ ಸೇವೆ ಮಾಡಿದಾಗ ಶರೀರಕ್ಕೆ ಮತ್ತು ಬೌದ್ಧಿಕ ಸೇವೆ ಮಾಡಿದಾಗ ಬುದ್ಧಿಗೆ ದಣಿವಾಗುತ್ತದೆ. ಮನಸ್ಸಿಗೂ ಏನಾದರೂ ಬದಲಾವಣೆ ಬೇಕೆನಿಸುತ್ತದೆ. ಆಗ ಸೇವೆಯ ಮಧ್ಯದಲ್ಲಿ ಸ್ವಲ್ಪ ವಿಶ್ರಾಂತಿಯ ಅವಶ್ಯಕತೆಯೆನಿಸುತ್ತದೆ. ಆಗ ವಿಶ್ರಾಂತಿ ಪಡೆಯುವುದು ಯೋಗ್ಯವಿರುತ್ತದೆ; ಏಕೆಂದರೆ ಸೇವೆ ಮಾಡಲು ಶರೀರ, ಮನಸ್ಸು ಮತ್ತು ಬುದ್ಧಿ ಇವುಗಳ ಸಂಪೂರ್ಣ ಸಿದ್ಧತೆ ಇಲ್ಲದಿದ್ದಾಗ ಸೇವೆಯನ್ನು ಸರಿಯಾದ ರೀತಿಯಲ್ಲಿ ಮಾಡಲು ಆಗುವುದಿಲ್ಲ. ಇದರಿಂದಾಗಿ ಸೇವೆಯ ಫಲಶೃತಿ ಕಡಿಮೆಯಾಗುತ್ತದೆ.

ಸಾಧಕರು ಸೇವೆಯಲ್ಲಿ ವಿಶ್ರಾಂತಿ ಸಿಗಲೆಂದು ಸಹಸಾಧಕರೊಂದಿಗೆ ಹರಟೆ ಹೊಡೆಯುವುದು, ಚೇಷ್ಟೆ-ತಮಾಷೆ ಮಾಡುವುದು ಹಾಗೂ ಸಂಚಾರವಾಣಿಯಲ್ಲಿ ಅನಾವಶ್ಯಕ ಮಾತನಾಡುವುದು, ಮನೋರಂಜನಾತ್ಮಕ ಕಾರ್ಯಕ್ರಮಗಳನ್ನು ನೋಡುವುದು ಇಂತಹ ಅಸಾತ್ತ್ವಿಕ ಕೃತಿಗಳನ್ನು ಮಾಡುತ್ತಾರೆ. ಇದರಿಂದಾಗಿ ಅವರ ಸಮಯವು ವ್ಯರ್ಥವಾಗುತ್ತದೆ, ಬಹಿರ್ಮುಖತೆ ಹೆಚ್ಚಾಗುತ್ತದೆ ಮತ್ತು ಮಾಯೆಯ ವಿಷಯಗಳಲ್ಲಿ ಸಿಲುಕಿಕೊಳ್ಳುವುದರಿಂದ ಅವರಿಗೆ ತೊಂದರೆದಾಯಕ ಆವರಣ ಬರುತ್ತವೆ. ಸಾಧಕರು ಇದನ್ನು ತಡೆಯಲು ಸೇವೆಯಲ್ಲಿ ವಿಶ್ರಾಂತಿ ಸಿಗಲು ‘ಸನಾತನ ಪ್ರಭಾತವನ್ನು ಓದುವುದು, ಭಾವಪ್ರಯೋಗವನ್ನು ಮಾಡುವುದು, ಆಧ್ಯಾತ್ಮಿಕ ಉಪಾಯ ಅಥವಾ ನಾಮಜಪ ಮಾಡುವುದು ಇಂತಹ ಸಾತ್ತ್ವಿಕ ಕೃತಿಗಳನ್ನು ಮಾಡಬೇಕು, ಇದರಿಂದಾಗಿ ಸಾಧಕರಿಗೆ ವಿಶ್ರಾಂತಿ ಸಿಗುವುದರೊಂದಿಗೆ ಅವರು ಸತ್‌ನಲ್ಲಿಯೂ ಇರಬಹುದು.

ನಮ್ಮ ಮನಸ್ಸಿಗೆ ತುಂಬಾ ಸಮಯದಿಂದ ಮಾಯೆಯಲ್ಲಿ ರಮಿಸುವ ಸಂಸ್ಕಾರವು ದೃಢವಾಗಿದೆ. ಆದುದರಿಂದ ಮೇಲೆ ಹೇಳಿದಂತೆ ಮನಸ್ಸಿನ ಸ್ತರದ ಕೃತಿಯನ್ನು ಆರಂಭದಲ್ಲಿ ಬದಲಾಯಿಸುವುದು ಸ್ವಲ್ಪ ಕಠಿಣವಾದರೂ ಮನಸ್ಸಿಗೆ ಯೋಗ್ಯವಾಗಿರುವುದನ್ನು ಮಾಡಲು ಅಭ್ಯಾಸ ಮಾಡಿಸಿದರೆ ಕ್ರಮೇಣ ಅದನ್ನು ಮಾಡಲು ಸಾಧ್ಯವಾಗುತ್ತದೆ. ಸದ್ಯದ ಘೋರ ಆಪತ್ಕಾಲದಲ್ಲಿಯೂ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಾದ ನಮ್ಮೆಲ್ಲರಿಗೂ ತುಂಬಾ ಸೇವೆಯನ್ನು ನೀಡಿ ಆಪತ್ಕಾಲದಿಂದ ಪಾರಾಗಲು ಒಂದು ರೀತಿಯ ಚೈತನ್ಯರೂಪಿ ಸಂಜೀವಿನಿಯನ್ನೇ ನೀಡಿದ್ದಾರೆ ಎಂಬ ಭಾವವನ್ನಿಟ್ಟು ಮೇಲಿನ ದೃಷ್ಟಿಕೋನದಂತೆ ಕೃತಿಯನ್ನು ಮಾಡಿದರೆ, ನಮ್ಮ ಮೇಲೆ ಪರಾತ್ಪರ ಗುರು ಡಾಕ್ಟರರ ಅಪಾರ ಕೃಪೆಯಾಗುವುದು ! – (ಪೂ.) ಸಂದೀಪ ಆಳಶಿ (೬.೯.೨೦೨೦)