ಪಿತೃಗಳ ಶಾಂತಿಗಾಗಿ ವಿವಿಧ ದೇಶಗಳಲ್ಲಿ ಮಾಡಲಾಗುವ ಪರಂಪರಾಗತ ಕೃತಿಗಳು  !

ಹಾಲಿವುಡ್‌ನ ಪ್ರಸಿದ್ಧ ನಟ ಸಿಲ್ವೆಸ್ಟರ್ ಸ್ಟೆಲೋನ್ ಇವರಿಗೆ ಅವರ ಮರಣ ಹೊಂದಿದ ಮಗನ ಆತ್ಮದ ನಿರಂತರ ಅರಿವಾಗುತ್ತಿತ್ತು. ಇದರಿಂದ ಅವರು ಮಗನ ಆತ್ಮಕ್ಕೆ ಶಾಂತಿ ದೊರಕಬೇಕು ಎಂದು ಸಂಪೂರ್ಣ ಕುಟುಂಬವನ್ನು ಭಾರತಕ್ಕೆ ಕಳುಹಿಸಿ ಹರಿದ್ವಾರದಲ್ಲಿ ಪಿಂಡದಾನ ಮತ್ತು ಶ್ರಾದ್ಧ ವಿಧಿಯನ್ನು ಮಾಡಿಸಿಕೊಂಡರು. ಈ ವಿಧಿಯ ಬಳಿಕ ಒಬ್ಬನೇ ಒಬ್ಬ ಹಿಂದೂವು ಅವರಿಗೆ ನೀವು ಕ್ರೈಸ್ತನಾಗಿದ್ದೀರಿ ಹಾಗಾಗಿ ಪಿಂಡದಾನ ಆಗಲು ಸಾಧ್ಯವಿಲ್ಲ ವೆಂದು ಹೇಳಿದ್ದಾರೆಯೇ ? ಅಂದರೆ ಹಿಂದೂ ಧರ್ಮದಲ್ಲಿನ ಶ್ರಾದ್ಧವಿಧಿಗಳಿಗೆ ಮತ್ತು ಪಂಥಗಳಿಗೆ ಯಾವುದೇ ಸಂಬಂಧವಿಲ್ಲ

‘ಸಾಧಕರೇ, ಕ್ಷಣಿಕ ಸುಖಕ್ಕಾಗಿ ಸಕಾಮ ಸಾಧನೆಯಲ್ಲಿ ಸಿಲುಕದೇ ಗುರುಕೃಪಾಯೋಗಾನುಸಾರ ಅಷ್ಟಾಂಗ ಸಾಧನೆಯನ್ನು ಮಾಡಿ ಜೀವನವನ್ನು ಸಾರ್ಥಕಗೊಳಿಸಿರಿ ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಪರಾತ್ಪರ ಗುರು ಡಾ. ಆಠವಲೆಯವರು ಗುರುಕೃಪಾಯೋಗಾನುಸಾರ ಹೇಳಿದ ಅಷ್ಟಾಂಗ ಸಾಧನೆಯ ಮಾರ್ಗದಿಂದ ಸಾಧನೆಯನ್ನು ಮಾಡಿದರೆ ಸಾಧಕರು ಮಾಯೆಯಲ್ಲಿ ಸಿಲುಕದೇ ಬೇಗ ಈಶ್ವರಪ್ರಾಪ್ತಿ ಮಾಡಿಕೊಳ್ಳಬಹುದು. ಈ ಸಾಧನೆಯಲ್ಲಿ ಸಾಧಕನಿಗೆ ಸಕಾಮದಲ್ಲಿ ಸಿಲುಕದೇ ನಿಷ್ಕಾಮ ಸಾಧನೆ ಮಾಡುವುದಕ್ಕೆ ಕಲಿಸಲಾಗುತ್ತದೆ. ಗುರುಕೃಪಾಯೋಗಾನುಸಾರ ಹೇಳಿದ ಸಾಧನೆಯು ಸಾಧಕನನ್ನು ಸಗುಣದಿಂದ ನಿರ್ಗುಣದ ಕಡೆಗೆ ಬೇಗನೇ ಒಯ್ಯುತ್ತದೆ.

ಸಾಧನೆಯಲ್ಲಿನ ನಿಜವಾದ ಸಾತತ್ಯ !

ಎವರೆಸ್ಟ್ ಏರುವ ಪ್ರಯತ್ನವನ್ನು ಮಾಡುವಾಗ ಅವನು ಕೆಲವು ಬಾರಿ ಕೆಳಗೆ ಬೀಳಬಹುದು. ನಮಗೂ ಸಾಧನೆಯ ಎವರೆಸ್ಟ್ ಶಿಖರವನ್ನು ಏರಲಿಕ್ಕಿದೆ. ‘ಯಾವುದಾದರೊಂದು ಉಚ್ಚಮಟ್ಟದ ಧ್ಯೇಯವನ್ನು ತಲುಪುವಾಗ ಮಧ್ಯಮಧ್ಯದಲ್ಲಿ ನಮ್ಮ ಪ್ರಯತ್ನಗಳ ಶಕ್ತಿಯು ಕಡಿಮೆ ಬೀಳುತ್ತಿರುವುದರಿಂದ ಅಥವಾ ಪ್ರಾರಬ್ಧದಲ್ಲಿರುವ ಅಡಚಣೆಗಳಿಂದಾಗಿ ನಮಗೆ ಸ್ವಲ್ಪ ಸ್ವಲ್ಪ ಸೋಲ ಬೇಕಾಗುವುದು, ಇದನ್ನು ನಾವು ತಿಳಿಯಬೇಕಾಗುತ್ತದೆ.

ಎಲ್ಲ ವಾಚಕರಿಗೆ, ಹಿತಚಿಂತಕರಿಗೆ ಹಾಗೂ ಧರ್ಮಪ್ರೇಮಿಗಳಿಗೆ ವಿನಂತಿ !

೧೮.೯.೨೦೨೦ ರಿಂದ ೧೬.೧೦.೨೦೨೦ ಈ ಕಾಲಾವಧಿಯಲ್ಲಿ ‘ಅಧಿಕ ಮಾಸ ಇದೆ. ‘ಅಧಿಕ ಮಾಸದಲ್ಲಿ ಮಂಗಲಕಾರ್ಯಗಳನ್ನು ಮಾಡದೇ ವಿಶೇಷ ವ್ರತಗಳು ಹಾಗೂ ಪುಣ್ಯಕರ ಕಾರ್ಯವನ್ನು ಮಾಡಬೇಕು, ಎಂದು ಶಾಸ್ತ್ರಕಾರರು ಹೇಳಿದ್ದಾರೆ. ಈ ತಿಂಗಳಿನಲ್ಲಿ ದಾನ ನೀಡಿದರೆ ಅದರ ಹೆಚ್ಚು ಪಟ್ಟು ಫಲ ಸಿಗುತ್ತದೆ. ಆದ್ದರಿಂದ ಈ ಕಾಲದಲ್ಲಿ ವಸ್ತ್ರದಾನ, ಅನ್ನದಾನ ಹಾಗೂ ಜ್ಞಾನದಾನಗಳನ್ನು ಮಾಡುವುದಕ್ಕೆ ವಿಶೇಷ ಮಹತ್ವವಿದೆ.

ಶ್ರಿಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನ

‘ದಿನವಿಡಿ ನಾವು ಮಾಡಿದ ಕೃತಿಗಳ ಅಭ್ಯಾಸ ಮಾಡಿದರೆ, ಅವುಗಳ ಪೈಕಿ ಎಷ್ಟು ಶೇಕಡಾ ಕೃತಿಗಳನ್ನು ಕೆಲಸವೆಂದು ಹಾಗೂ ಎಷ್ಟನ್ನು ಸೇವೆ ಎಂದು ಮಾಡಲಾಯಿತು ಎಂದು ಚಿಂತನೆ ಮಾಡಬೇಕು. ಸೇವೆ ಮಾಡುವಾಗ ಈಶ್ವರಪ್ರಾಪ್ತಿಗಾಗಿ ಮಾಡಿದ ಪ್ರತಿಯೊಂದು ಕೃತಿಗಳೆಂದರೆ ‘ಸಾಧನೆಯಾಗಿದೆ. ಉಳಿದೆಲ್ಲ ಕಾರ್ಯಗಳು ಕೇವಲ ಮಾಯೆಯಾಗಿದೆ.

ಯಾರನ್ನು ಆರ್ಯರೆಂದು ಉಲ್ಲೇಖಿಸಬೇಕು ?

ವಾಸನೆಯ ಅಧೀನರಾಗದ ಮತ್ತು ಶಾಸ್ತ್ರಗಳು ಅಯೋಗ್ಯವೆಂದು ಹೇಳಿದ ಕರ್ಮಗಳನ್ನು ಮಾಡದ, ಪ್ರಕೃತಿಯ ಮತ್ತು ಶಾಸ್ತ್ರಗಳ ನಿಯಮಗಳಂತೆ ಯೋಗ್ಯ ಕರ್ತವ್ಯಗಳನ್ನು ಪಾಲಿಸುವ ಮನುಷ್ಯನಿಗೆ ‘ಆರ್ಯ ಎಂದು ಕರೆಯುತ್ತಾರೆ.

೧೦೩ ರ ಇಳಿ ವಯಸ್ಸಿನಲ್ಲಿ ಕೊರೋನಾವನ್ನು ಗೆದ್ದ ಮಹಾರಾಷ್ಟ್ರ ಡೊಂಬಿವಿಲಿಯ ಸನಾತನದ ಸಂತರಾದ ಪೂ. ಆನಂದಿ ಪಾಟೀಲ ಅಜ್ಜಿ ಸೂಕ್ಷ್ಮದಿಂದ ನಿರಂತರ ಪರಾತ್ಪರ ಗುರು ಡಾ. ಆಠವಲೆಯವರ ಅಸ್ತಿತ್ವವನ್ನು ಅನುಭವಿಸುತ್ತಿದೆ ! –  ಪೂ. ಪಾಟೀಲ ಅಜ್ಜಿ

ಮುಖ್ಯಮಂತ್ರಿ ಕಾರ್ಯಾಲಯದಿಂದ ‘ಫೇಸಬುಕ್ ಖಾತೆಯಲ್ಲಿ ಈ ವಿಷಯದಲ್ಲಿ ಪ್ರಕಟಿಸಲಾಗಿರುವ ಸುದ್ದಿಯಲ್ಲಿ ಅನೇಕ ಜನರು ಪೂ. ಆನಂದಿ ಪಾಟೀಲ ಅಜ್ಜಿಯವರನ್ನು ‘ಕೊರೋನಾ ಯೋಧೆ ಎಂದು ಉಲ್ಲೇಖಿಸಿ ಅವರಿಂದ ಪ್ರೇರಣೆ ದೊರಕಿದೆಯೆಂದು ಹೇಳಿದರು ಮತ್ತು ಅವರಿಗೆ ಅಭಿನಂದನೆಯನ್ನು ಕೂಡ ವ್ಯಕ್ತಪಡಿಸಿದರು.

ಎಲ್ಲ ಅರ್ಪಣೆದಾರರಿಗೆ ಅನ್ನದಾನ ಮಾಡುವ ಅಮೂಲ್ಯ ಅವಕಾಶ !

ಸದ್ಯ ಧರ್ಮಗ್ಲಾನಿಯ ಕಾಲವಾಗಿರುವುದರಿಂದ ‘ಧರ್ಮಪ್ರಸಾರ ಮಾಡುವುದು ಕಾಲಾನುಸಾರ ಆವಶ್ಯಕವಾಗಿದೆ. ಧರ್ಮಪ್ರಸಾರವನ್ನು ಮಾಡುವ ಸಂತರು, ಸಂಸ್ಥೆಗಳು ಮತ್ತು ಸಂಘಟನೆಗಳಿಗೆ ಅನ್ನದಾನ ಮಾಡುವುದು ಸರ್ವಶ್ರೇಷ್ಠ ದಾನವಾಗುತ್ತದೆ. ಸನಾತನ ಸಂಸ್ಥೆಯು ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಕಟಿಬದ್ಧವಾಗಿದೆ. ಸನಾತನ ಸಂಸ್ಥೆಯ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ಧರ್ಮಪ್ರಸಾರದ ಕಾರ್ಯವನ್ನು ಮಾಡಲಾಗುತ್ತದೆ.

ಪಿತೃಗಳ ಶಾಂತಿಗಾಗಿ ವಿವಿಧ ದೇಶಗಳಲ್ಲಿ ಮಾಡಲಾಗುವ ಪಾರಂಪರಿಕ ಕೃತಿಗಳು ! – ಶ್ರೀ ರಮೇಶ ಶಿಂದೆ

ಕೇವಲ ಭಾರತದಲ್ಲಿ ಮಾತ್ರ ಪೂರ್ವಜರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಸಂಕಲ್ಪನೆ ಇದೆ ಎಂದೇನಿಲ್ಲ, ವಿದೇಶಗಳಲ್ಲಿಯೂ ಪಿತೃಗಳ ಶಾಂತಿಗಾಗಿ ವಿವಿಧ ಪಾರಂಪರಿಕ ಕೃತಿಗಳನ್ನು ಮಾಡಲಾಗುತ್ತದೆ. ಅದರಲ್ಲಿ ಪೂರ್ವಜರ ಮುಕ್ತಿಗಾಗಿ ಶಾಸ್ತ್ರೋಕ್ತ ಸಂಕಲ್ಪನೆ ಇಲ್ಲದಿದ್ದರೂ, ಕನಿಷ್ಟ ‘ಪೂರ್ವಜರ ಬಗ್ಗೆ ಕೃತಜ್ಞತೆಯಿರಬೇಕು, ಎನ್ನುವ ಭಾವನೆಯಂತೂ ಖಂಡಿತವಾಗಿ ಇದೆ.

ಪೂ. ರಮಾನಂದಣ್ಣ ಇವರು ಮೋಕ್ಷಗುರು ಗುರುದೇವರ ಬಗ್ಗೆ ವ್ಯಕ್ತಪಡಿಸಿದ ಭಾವಪೂರ್ಣ ಕೃತಜ್ಞತೆ !

ನೀವು ಮಾಡಿದ ಕೃಪೆಗಾಗಿ ನಾನು ಇನ್ನೆಷ್ಟೋ ಜನ್ಮ ತೆಗೆದುಕೊಂಡು ಬಂದರೂ, ನಿಮ್ಮ ಋಣದಿಂದ ಮುಕ್ತನಾಗಲು ಸಾಧ್ಯವಿಲ್ಲ. ಈ ಕಲಿಯುಗದ ಘೋರ ಅಂಧಕಾರದ ಸುಳಿವಿನಲ್ಲಿ ಈ ಜೀವ ಸಿಲುಕಿ ಹಾಕಿಕೊಂಡಿತು. ಅಜ್ಞಾನದ ತುತ್ತ ತುದಿಯಲ್ಲಿ ಇದ್ದಂತಹ ಈ ಪಾಪಿ ಜೀವವನ್ನು, ಅನಂತ ಅಪರಾಧಗಳನ್ನು ಮಾಡಿದ ನನ್ನನ್ನು ಇದೆಲ್ಲದರಿಂದ ಹೊರತೆಗೆದು, ಅಷ್ಟು ಮಾತ್ರವಲ್ಲ ಅವೆಲ್ಲವನ್ನು ಕ್ಷಮಿಸಿ, ಜನ್ಮ-ಮೃತ್ಯು ಚಕ್ರದಿಂದ ಕೇವಲ ನೀವೇ ಪಾರು ಮಾಡಿದ್ದೀರಿ.