ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ 

೧. ಸಾಧಕರಲ್ಲಿ ಸೇವೆಯ ತಳಮಳವಿರಬೇಕು !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಆಧ್ಯಾತ್ಮಿಕ ತೊಂದರೆಯಿರುವ ಸಾಧಕರಿಗೆ ಸೇವೆ ಮಾಡಲು ಸಂಘರ್ಷ ಮಾಡಬೇಕಾಗುತ್ತದೆ. ಆದುದರಿಂದ ಅವರು ಯಾವುದಾದರೊಂದು ಲೇಖನದ ಕಡತವನ್ನು ಸಂಕಲನ ಮಾಡಿದರೂ, ಆ ಸೇವೆಯು ಈಶ್ವರನ ಚರಣಗಳಲ್ಲಿ ಸಮರ್ಪಿತವಾಗುತ್ತದೆ, ಏಕೆಂದರೆ ಅವರು ಅದನ್ನು ಸಂಘರ್ಷ ಮಾಡಿ ಮಾಡಿರುತ್ತಾರೆ. ನಾವು ಸಕಾರಾತ್ಮಕವಾಗಿದ್ದರೆ, ದೇವರು ನಮಗೆ ಸೂಚಿಸುತ್ತಾನೆ ಮತ್ತು ಅವನೇ ಪ್ರಗತಿ ಮಾಡಿಸಿಕೊಳ್ಳುತ್ತಾನೆ. ಸಾಧಕರಿಗೆ ಸೇವೆಯ ಬಗ್ಗೆ ಸೆಳೆತವಿರಬೇಕು. ಸೇವೆಯಿಂದಲೂ ಚೈತನ್ಯವು ಸಿಗುತ್ತದೆ ಮತ್ತು ದೋಷ-ಅಹಂ ಇವುಗಳನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ.

೨. ಸಾಧನೆಯಲ್ಲಿ ನಾವು ಪರಿಶ್ರಮ ಪಡುವುದನ್ನು ನೋಡಿ ಈಶ್ವರನು ಪ್ರಗತಿ ಮಾಡಿಸಿಕೊಳ್ಳುತ್ತಾನೆ !

‘ನಾವು ತುಂಬಾ ವರ್ಷಗಳಿಂದ ಸಾಧನೆಯಲ್ಲಿದ್ದೇವೆ, ಆದರೂ ನಮ್ಮ ಪ್ರಗತಿಯಾಗುವುದಿಲ್ಲ’, ಎಂಬ ವಿಚಾರ ಮಾಡಬಾರದು. ಪ್ರಾರಬ್ಧ, ಆಧ್ಯಾತ್ಮಿಕ ತೊಂದರೆ, ಕೊಡು-ಕೊಳ್ಳುವ ಸಂಬಂಧ ಮುಂತಾದ ಅನೇಕ ವಿಷಯಗಳಿಗೆ ನಮ್ಮ ಆಧ್ಯಾತ್ಮಿಕ ಊರ್ಜೆಯು ಖರ್ಚಾಗುತ್ತಿರುತ್ತದೆ. ನಮ್ಮ ಪ್ರಾರಬ್ಧ ಅಥವಾ ಆಧ್ಯಾತ್ಮಿಕ ತೊಂದರೆ ಗಳು ಕಡಿಮೆಯಾದಾಗ, ಸಾಧನೆಯ ಪ್ರಯತ್ನಗಳು ಇನ್ನೂ ಹೆಚ್ಚಾಗುತ್ತದೆ ಹಾಗೂ ನಮ್ಮ ಸಾಧನೆಯಲ್ಲಿರುವ ಪರಿಶ್ರಮವನ್ನು ನೋಡಿ ಈಶ್ವರನು ನಮ್ಮ ಪ್ರಗತಿಯನ್ನು ಮಾಡಿಸಿಕೊಳ್ಳುತ್ತಾನೆ. ‘ನಾವು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದರೆ ಸಾಕು’, ಎಂಬ ವಿಚಾರ ಬಂದಾಗಲೇ ಅಹಂ ಹೆಚ್ಚಾಗುತ್ತದೆ. ನಾವು ಶೇ. ೧೦೦ ರಷ್ಟು ಅಂದರೆ ಈಶ್ವರಪ್ರಾಪ್ತಿಯ ಧ್ಯೇಯವನ್ನಿಟ್ಟು ಅದನ್ನು ಪಡೆಯಲು ಪ್ರಯತ್ನಿಸಬೇಕು.

೩. ಸಾಧಕರ ಬಗ್ಗೆ ಇರುವ ಪೂರ್ವಗ್ರಹವನ್ನು ದೂರ ಮಾಡಿ ಮನಸ್ಸನ್ನು ನಿರ್ಮಲ ಮತ್ತು ಶುದ್ಧವಾಗಿಡಬೇಕು !

ಸನಾತನದ ಪ್ರತಿಯೊಬ್ಬ ಸಾಧಕನು ಭಿನ್ನವಾಗಿದ್ದಾನೆ. ಅವನು ವಜ್ರದಂತೆ ಇದ್ದಾನೆ. ನಾವು ಪ್ರತಿಯೊಬ್ಬ ಸಾಧಕನ ಗುಣಗಳ ಪಟ್ಟಿ ಮಾಡಿದಾಗ ಅವರ ಬಗ್ಗೆ ಇರುವ ಪೂರ್ವಗ್ರಹವು ದೂರವಾಗು ವುದು. ಸಾಧಕರ ಬಗೆಗಿನ ಪೂರ್ವಗ್ರಹವು ದೂರವಾದರೆ, ಮನಸ್ಸು ನಿರ್ಮಲ ಮತ್ತು ಶುದ್ಧವಾಗುವುದು. ನಾವೆಲ್ಲರೂ ಸಾಧಕರ ಗುಣಗಳನ್ನು ಅಂಗೀಕರಿಸಬೇಕು. ನಾವೆಲ್ಲರೂ ಒಂದೇ ಕುಟುಂಬದ ರಾಗಿದ್ದೇವೆ. ಆದುದರಿಂದ ನಾವು ಎಲ್ಲರಿಂದ ಕಲಿಯಬೇಕು. ಸಾಧಕರ ಮನಸ್ಸು ಒಂದಾದರೆ ಜೊತೆಯಲ್ಲಿ ಮತ್ತು ಸಂಘಟಿತವಾಗಿ ಒಳ್ಳೆಯ ರೀತಿಯಿಂದ ಸೇವೆ ಮಾಡಬಹುದು ಹಾಗೂ ಅದರಿಂದ ಫಲಶೃತಿಯು ಹೆಚ್ಚು ಸಿಗುತ್ತದೆ.

೪. ಅಧ್ಯಾತ್ಮದಲ್ಲಿ ತಳಮಳಕ್ಕೆ ಶೇ. ೮೦ ರಷ್ಟು ಮಹತ್ವ !

ಗುರುಗಳು ಎಲ್ಲರಿಂದ ಸಾಧನೆಯನ್ನು ಮಾಡಿಸಿಕೊಳ್ಳುತ್ತಾರೆ. ಕೆಲವು ವರ್ಷಗಳ ಹಿಂದೆ ಪರಾತ್ಪರ ಗುರು ಡಾ. ಆಠವಲೆಯವರು, “ಮುಂಬರುವ ಕಾಲದಲ್ಲಿ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಸಾಧಕರ ಫಸಲು ಬರುವುದು”, ಎಂದು ಹೇಳಿದ್ದರು. ಈ ವಾಕ್ಯದ ಅನುಭೂತಿ ಬರುತ್ತಿದ್ದೂ ನಾವು ತಳಮಳದಿಂದ ಪ್ರಯತ್ನಿಸೋಣ. ಗುರುಗಳು ಎಲ್ಲರನ್ನು ಒಟ್ಟಿಗೆ ತಂದಿದ್ದಾರೆ. ಮಹಾನ ಗುರುಗಳ ಸಂಕಲ್ಪದಿಂದಾಗಿ ನಾವು ಮುಂದೆ ಹೋಗುತ್ತಿದ್ದೇವೆ. ಅಧ್ಯಾತ್ಮದಲ್ಲಿ ತಳಮಳಕ್ಕೆ ಶೇ. ೮೦ ರಷ್ಟು ಮಹತ್ವವಿದ್ದು ನಾವು ಗುರುಗಳಲ್ಲಿ ಶರಣಾಗಿ ಪ್ರಯತ್ನಿಸೋಣ.