ಸಾಧಕರೇ, ‘ಇತರರ ಬಗ್ಗೆ ಮತ್ಸರವೆನಿಸುವುದು’, ಸಾಧನೆಯಲ್ಲಿ ಎಲ್ಲಕ್ಕಿಂತ ದೊಡ್ಡ ಅಡಚಣೆ ಆಗಿರುವುದರಿಂದ ಅದನ್ನು ದೂರಗೊಳಿಸಿರಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಕೆಲವು ಸಾಧಕರಿಗೆ ಸಹ ಸಾಧಕರನ್ನು ಹೊಗಳಿದರೆ ಅಥವಾ ಅವರ ಆಧ್ಯಾತ್ಮಿಕ ಉನ್ನತಿಯಾದರೆ ಮತ್ಸರವೆನಿಸುತ್ತದೆ. ‘ಇತರರ ಬಗ್ಗೆ ಮತ್ಸರವೆನಿಸುವುದು’, ಸಾಧನೆಯ ಅತ್ಯಂತ ದೊಡ್ಡ ಅಡಚಣೆಯಾಗಿದೆ. ಅದನ್ನು ದೂರಗೊಳಿಸಲು ತಳಮಳದಿಂದ ಪ್ರಯತ್ನಿಸಬೇಕು. ‘ಇತರ ಸಾಧಕರ ಪ್ರಶಂಸೆಯ ಅಥವಾ ಆಧ್ಯಾತ್ಮಿಕ ಪ್ರಗತಿಯ ಆನಂದವನ್ನು ಪಡೆಯಲು ಸಾಧ್ಯವಾದಾಗ ಅಥವಾ ಇತರರ ಪ್ರಯತ್ನ ಮತ್ತು ಗುಣಗಳಿಂದ ಕಲಿಯುವಂತಹ ಸಾಧಕರ ಸಾಧನೆಯ ಮಾರ್ಗಕ್ರಮಣವು ಯೋಗ್ಯ ದಿಶೆಯಿಂದ ಆಗುತ್ತಿದೆ’, ಎಂಬುದನ್ನು ಗಮನದಲ್ಲಿಡಬೇಕು !’ – ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೭.೨೦೨೦)