ಸಾಧಕರಿಗೆ ಸೂಚನೆ, ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

‘ದೇಶದಾದ್ಯಂತ ‘ಕೊರೋನಾ ವೈರಾಣುಗಳು ತೀವ್ರಗತಿಯಲ್ಲಿ ಹರಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಜನದಟ್ಟನೆ ಇರುವ ಸ್ಥಳಗಳಿಗೆ ಹೋಗದಿರುವುದು, ಅನಾವಶ್ಯಕ ಪ್ರಯಾಣ ಮಾಡದಿರುವುದು, ಸಾಮಾಜಿಕ ಅಂತರವನ್ನು ಕಾಪಾಡುವುದು, ಮಾಸ್ಕ್‌ನ್ನು ಉಪಯೋಗಿಸುವುದು ಮುಂತಾದ ಸೂಚನೆಗಳನ್ನು ಪಾಲಿಸುವುದು ಆವಶ್ಯಕವಾಗಿದೆ.

ಸನಾತನದ ಆಶ್ರಮಗಳಲ್ಲಿ ‘ಫಿಜಿಯೋಥೆರಪಿ’ ಚಿಕಿತ್ಸೆಗಳಿಗಾಗಿ ವಿವಿಧ ಉಪಕರಣಗಳು ಬೇಕಾಗಿವೆ !

‘ಅಧ್ಯಾತ್ಮಪ್ರಸಾರ, ಸಮಾಜಕ್ಕೆ ಸಾಧನೆಯ ಬಗ್ಗೆ ಮಾರ್ಗದರ್ಶನ, ಹಾಗೆಯೇ ಹಿಂದೂ ರಾಷ್ಟ್ರದ ಸ್ಥಾಪನೆಯ ಬಗ್ಗೆ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವುದು, ಈ ವ್ಯಾಪಕ ಉದ್ದೇಶಗಳಿಂದ ಸನಾತನ ಸಂಸ್ಥೆಯ ಕಾರ್ಯವು ನಡೆಯುತ್ತಿದೆ. ವಿವಿಧ ವಯಸ್ಸಿನ ನೂರಾರು ಸಾಧಕರು ಪೂರ್ಣವೇಳೆ ಸೇವಾನಿರತರಾಗಿ ಈ ಧರ್ಮಕಾರ್ಯದಲ್ಲಿ ತಮ್ಮ ಯೋಗದಾನವನ್ನು ನೀಡುತ್ತಿದ್ದಾರೆ.

ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಅಧ್ಯಾತ್ಮದ ಜಿಜ್ಞಾಸುಗಳು, ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆ ಮಾಡುವ ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ ಆಧ್ಯಾತ್ಮಿಕ ಪ್ರಗತಿಗಾಗಿ ಮಾರ್ಗದರ್ಶನವಾಗ ಬೇಕು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಎಂಬುದಕ್ಕಾಗಿ ಸನಾತನವು ಆಚಾರಧರ್ಮ, ಧಾರ್ಮಿಕ ಕೃತಿ, ದೇವತೆಗಳು, ಸಾಧನೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ಗ್ರಂಥ ಮತ್ತು ಕಿರುಗ್ರಂಥಗಳನ್ನು ಪ್ರಕಾಶಿಸಿದೆ

ಸಾಧಕರಿಗೆ ಮಹತ್ವದ ಸೂಚನೆ, ಹಾಗೆಯೇ ವಾಚಕರಿಗೆ, ಹಿತಚಿಂತಕರಿಗೆ ಹಾಗೂ ಧರ್ಮಪ್ರೇಮಿಗಳಿಗೆ ವಿನಂತಿ !

ಅಂತರ್ಜಾಲವನ್ನು (ಇಂಟರ್‌ನೆಟ್) ಬಳಸಿದ ಬಳಿಕ ಅದನ್ನು ತಕ್ಷಣ ಬಂದ್ ಮಾಡಬೇಕು. ಅಂತರ್ಜಾಲದ ಅನಗತ್ಯ ಬಳಕೆ ಮಾಡಬಾರದು. ಅಗತ್ಯವಿರುವಷ್ಟು ಮಾತ್ರ ಜಾಲತಾಣಗಳಿಗೆ ಭೇಟಿ ನೀಡಬೇಕು. ಉಚಿತ ಗಣಕೀಯ ಪ್ರಣಾಲಿ (ಸಾಫ್ಟ್‌ವೇರ್) ಗಳಿರುವ, ಹಾಗೆಯೇ ಸಂಶಯಾಸ್ಪದ ಜಾಲತಾಣಗಳನ್ನು (ಉದಾ. ‘ಟೊರೆಂಟ್, ಫೈಲ್ ಡೌನ್‌ಲೋಡ್ ಮಾಡುವ ಜಾಲತಾಣಗಳನ್ನು) ನೋಡಬಾರದು

ಎಲ್ಲೆಡೆಯ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

‘ಆಪತ್ಕಾಲದ ಸ್ಥಿತಿಯು ಯಾವಾಗ ಉದ್ಭವಿಸುವುದು ?’, ಎಂದು ಹೇಳಲು ಆಗುವುದಿಲ್ಲ. ಆದುದರಿಂದ ಆಪತ್ಕಾಲದ ಪೂರ್ವ ತಯಾರಿಯೆಂದು ಸನಾತನದ ಧರ್ಮಪ್ರಸಾರ ಕಾರ್ಯಕ್ಕಾಗಿ ಸೈಕಲ್ ಲಭ್ಯವಾಗುವುದು ಆವಶ್ಯಕವಾಗಿದೆ. ಒಟ್ಟು ಸಾಧಕರ ಸಂಖ್ಯೆಯ ಬಗ್ಗೆ ವಿಚಾರ ಮಾಡಿದರೆ ಸದ್ಯ ಪುರುಷರಿಗಾಗಿ ಉಪಯೋಗಕ್ಕೆ ಬರುವ ೪೦೦ ಮತ್ತು ಮಹಿಳೆಯರು ಉಪಯೋಗಿಸುವಂತಹ ೬೦೦ ಹೀಗೆ ಒಟ್ಟು ೧ ಸಾವಿರ ಸೈಕಲ್‌ಗಳ ಆವಶ್ಯಕತೆಯಿದೆ.

ಸಾಧಕರೇ, ‘ತಮ್ಮ ಆಧ್ಯಾತ್ಮಿಕ ಮಟ್ಟ ಹೆಚ್ಚಾಗಬೇಕು’, ಎಂಬ ವಿಚಾರವೂ ಸ್ವೇಚ್ಛೆಯೇ ಆಗಿರುವುದರಿಂದ ಆ ವಿಚಾರಗಳಲ್ಲಿ ಸಿಲುಕದೇ ‘ಭಾವ’ ಮತ್ತು ‘ತಳಮಳ’ವನ್ನು ಹೆಚ್ಚಿಸಿ ಸಾಧನೆಯ ಆನಂದವನ್ನು ಪಡೆಯಿರಿ !

‘ಅಭ್ಯಾಸ ಮಾಡಿದರೆ, ಪರೀಕ್ಷೆಯಲ್ಲಿ ಉತ್ತೀರ್ಣರಾಗಲೇಬೇಕು. ಅದರಂತೆ ಸಾಧನೆಯನ್ನು ಯೋಗ್ಯ ರೀತಿಯಲ್ಲಿ ಮಾಡಿದರೆ, ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟವು ಪ್ರಾಪ್ತವಾಗಲೇಬೇಕು. ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಪ್ರಗತಿಯ ವಿಚಾರಗಳಿಗಿಂತ ಪ್ರಯತ್ನಗಳ ದಿಶೆಯು ಯೋಗ್ಯವಿರಬೇಕು. ಸಾಧನೆಯನ್ನು ಮಾಡಲು ಸಾತತ್ಯದಿಂದ ಮತ್ತು ನಿರಪೇಕ್ಷವಾಗಿ ಪ್ರಯತ್ನಿಸಿದರೆ ಸಾಧನೆಯಲ್ಲಿನ ಆನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ.

ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದ ವಿವಿಧ ಸಾಹಿತ್ಯಗಳನ್ನು ಇಡಲು ಫೋಂಡಾ (ಗೋವಾ)ದ ಪರಿಸರದಲ್ಲಿ ೫೦ ರಿಂದ ೨೦೦ ಚದರ ಮೀಟರ್ ವಾಸ್ತುವಿನ ಆವಶ್ಯಕತೆ ಇದೆ !

ಗೋವಾದ ರಾಮನಾಥಿ ಆಶ್ರಮದಲ್ಲಿನ ಹೆಚ್ಚುತ್ತಿರುವ ಕಾರ್ಯದ ವ್ಯಾಪ್ತಿಯನ್ನು ನೋಡಿದರೆ ವಿವಿಧ ರೀತಿಯ ಸಾಹಿತ್ಯ, ಉದಾ. ಧಾನ್ಯ, ಪೀಠೋಪಕರಣಗಳು, ಕಟ್ಟಡಕಾಮಗಾರಿ ಮತ್ತು ದುರಸ್ತಿಯ ಸಾಮಗ್ರಿಗಳು ಮುಂತಾದವುಗಳನ್ನು ಇಡಲು ಅಲ್ಲಿನ ಸ್ಥಳವು ಸಾಕಾಗುತ್ತಿಲ್ಲ. ಅದಕ್ಕಾಗಿ ಗೋವಾದ ಫೋಂಡಾದಲ್ಲಿನ ಪರಿಸರದಲ್ಲಿ ೫೦ ರಿಂದ ೨೦೦ ಚದರ ಮೀಟರ್ ವಾಸ್ತು, ಉದಾ. ಗೋದಾಮು (ಗೋಡೌನ್), ಅಂಗಡಿಯ ಒಂದು ಕೊಠಡಿ, ನೆಲಮಾಳಿಗೆ, ಚಪ್ಪರ, ಮನೆ, ಮನೆಯ ಪಕ್ಕದಲ್ಲಿರುವ ಪ್ರತ್ಯೇಕ ಕೋಣೆ ಬೇಕಾಗಿದೆ.

‘ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಭಾರತದಾದ್ಯಂತ ನಿಯೋಜಿಸಲಾಗಿರುವ ಔಷಧಿ ವನಸ್ಪತಿಗಳ ಗಿಡಗಳನ್ನು ನೆಡಲು ಸಹಾಯ ಮಾಡಿರಿ !

ಮುಂಬರುವ ಭೀಕರ ಕಾಲದ ಮೂರನೇ ಮಹಾಯುದ್ಧ ಮತ್ತು ನೈಸರ್ಗಿಕ ವಿಪತ್ತುಗಳನ್ನು ಎದುರಿಸುವ ಸಿದ್ಧತೆಯ ಒಂದು ಭಾಗವೆಂದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಆದಷ್ಟು ಬೇಗನೆ ಭಾರತದಾದ್ಯಂತ  ಔಷಧಿ ವನಸ್ಪತಿಗಳ ಗಿಡಗಳನ್ನು ನೆಡಲು ಆಯೋಜನೆ ಮಾಡಲಾಗಿದೆ.

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಿಗೆ ಕರೆ !

ವಾಹನ ಓಡಿಸುವಾಗ ಮೇಲಿಂದಮೇಲೆ ನಮ್ಮ ಕೈಗಳ ಸ್ಪರ್ಶವಾಗುವ ಭಾಗ (ಬೀಗದಕೈ, ಬಾಗಿಲಿನ ಹ್ಯಾಂಡಲ್. ಆಸನ (ಸೀಟ್), ‘ಸೀಟ್ ಬೆಲ್ಟ್’, ‘ಸ್ಟೇರಿಂಗ್ ವೀಲ್’, ‘ಗೇರ್’, ‘ಹ್ಯಾಂಡ್‌ಬ್ರೇಕ್’ ಇತ್ಯಾದಿಗಳನ್ನು ಮೊದಲು ಸಾಬೂನಿನ ನೀರಿನಿಂದ ನಂತರ ಸಾದಾ ನೀರಿನಿಂದ ಒರೆಸಬೇಕು. ನಂತರ ಆ ಭಾಗಗಳನ್ನು ಒಣ ಬಟ್ಟೆಯಿಂದ ಒರೆಸಬೇಕು. ಯಾವ ಭಾಗವನ್ನು ನಾವು ಸ್ಪಶಿಸುವುದಿಲ್ಲವೋ ಆ ಭಾಗವನ್ನೂ (ಉದಾ. ಗಾಜು, ‘ಡ್ಯಾಶ್‌ಬೋರ್ಡ್’) ಈ ಮೇಲಿನಂತೆ ಒರೆಸಬೇಕು.

ಎಲ್ಲ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

ಕೆಲವು ಹಿತಚಿಂತಕರು ಈ ಮೊದಲು ಸಹ ಈ ಯೋಜನೆಗೆ ಸಹಾಯ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಎಲ್ಲೆಡೆಗಳಲ್ಲಿರುವ ಆಶ್ರಮಗಳು ಹಾಗೂ ಸೇವಾಕೇಂದ್ರಗಳ ಚಿಕ್ಕ-ದೊಡ್ಡ ಪ್ರಸ್ತಾಪಿತ ಯೋಜನೆಗಳ ವ್ಯಾಪ್ತಿಯ ವಿಚಾರ ಮಾಡಿದಾಗ ದೊಡ್ಡ ಪ್ರಮಾಣದಲ್ಲಿ ನಿಧಿಯ ಆವಶ್ಯಕತೆಯಿದೆ. ಮೊದಲ ಹಂತದಲ್ಲಿ ಒಟ್ಟು ೧೫೦ ‘ಕಿಲೋವ್ಯಾಟ್ ಕ್ಷಮತೆಯುಳ್ಳ ಸೌರಶಕ್ತಿ ಘಟಕವನ್ನು ಸ್ಥಾಪಿಸಲಾಗುವುದು.