‘ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಭಾರತದಾದ್ಯಂತ ನಿಯೋಜಿಸಲಾಗಿರುವ ಔಷಧಿ ವನಸ್ಪತಿಗಳ ಗಿಡಗಳನ್ನು ನೆಡಲು ಸಹಾಯ ಮಾಡಿರಿ !

ಮುಂಬರುವ ಭೀಕರ ಕಾಲದ ಮೂರನೇ ಮಹಾಯುದ್ಧ ಮತ್ತು ನೈಸರ್ಗಿಕ ವಿಪತ್ತುಗಳನ್ನು ಎದುರಿಸುವ ಸಿದ್ಧತೆಯ ಒಂದು ಭಾಗವೆಂದು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಆದಷ್ಟು ಬೇಗನೆ ಭಾರತದಾದ್ಯಂತ  ಔಷಧಿ ವನಸ್ಪತಿಗಳ ಗಿಡಗಳನ್ನು ನೆಡಲು ಆಯೋಜನೆ ಮಾಡಲಾಗಿದೆ. ಇದಕ್ಕಾಗಿ ರೈತರು; ಭೂಮಾಲೀಕರು, ವನಸ್ಪತಿ (ಬಾಟನಿ) ವಿಜ್ಞಾನಿ, ಕೃಷಿ ಹಾಗೆಯೇ ಆಯುರ್ವೇದದ ತಜ್ಞರು ಔಷಧಿ ವನಸ್ಪತಿಗಳ ಜ್ಞಾನವಿರುವವರು  ಹೀಗೆ ಅನೇಕ ಜನರ ಸಹಾಯದ ಆವಶ್ಯಕತೆಯಿದೆ. ತಮ್ಮ ಆಸಕ್ತಿ ಮತ್ತು ಕ್ಷಮತೆಗನುಸಾರ ಮುಂದಿನ ಸೇವೆಗಳಲ್ಲಿ ತಾವೂ ಕೈಜೋಡಿಸಬಹುದು.

೧. ಪ್ರತ್ಯಕ್ಷ ಕೃಷಿ ವಿಷಯದಲ್ಲಿನ ಸೇವೆ

ಭೂಮಿಯಲ್ಲಿ ಔಷಧಿ ವನಸ್ಪತಿಗಳ ಗಿಡಗಳನ್ನು ನೆಡುವುದು; ಔಷಧಿ ವನಸ್ಪತಿಗಳ ಗಿಡಗಳನ್ನು ನೆಡಲು ಆವಶ್ಯಕವಿರುವ ಸಸಿಗಳನ್ನು ತಯಾರಿಸುವುದು; ಗಿಡನೆಡಲು ಭೂಮಿ, ಮಾನವ ಸಂಪನ್ಮೂಲ ಅಥವಾ ಉಪಕರಣಗಳನ್ನು ಒದಗಿಸುವುದು; ಶಾಸ್ತ್ರೀಯ ಪದ್ಧತಿಯಿಂದ ಗಿಡಗಳನ್ನು ನೆಡಲು ಸಹಾಯ ಮಾಡುವುದು; ಪ್ರತ್ಯಕ್ಷ ಶ್ರಮದಾನ ಮಾಡುವುದು.

೨. ಇತರ ಸೇವೆ

ಔಷಧಿ ವನಸ್ಪತಿಗಳನ್ನು ಗುರುತಿಸುವುದು, ಗಿಡವನ್ನು ಹೇಗೆ ನೆಡುವುದು, ಈ ವಿಷಯದಲ್ಲಿ ಮಾರ್ಗದರ್ಶನ ಮಾಡುವುದು; ತಾಂತ್ರಿಕ ಅಡಚಣೆಗಳನ್ನು ದೂರ ಮಾಡುವುದು; ಔಷಧಿಯ ವನಸ್ಪತಿಯ ಗಿಡಗಳನ್ನು ನೆಡುವ ವಿಷಯದಲ್ಲಿ ಮಾಹಿತಿಯನ್ನು ನೀಡುವ ಗ್ರಂಥ ಅಥವಾ ಲೇಖನವನ್ನು ಒದಗಿಸುವುದು; ಸರಕಾರದ ಯೋಜನೆಗಳ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ಸಹಾಯ ಮಾಡುವುದು; ವನಸ್ಪತಿ ಗಿಡಗಳನ್ನು ನೆಡಲು ಆರ್ಥಿಕ ಸಹಾಯ ಮಾಡುವುದು; ವನಸ್ಪತಿಯಿಂದ ಔಷಧಿಗಳನ್ನು ತಯಾರಿಸಲು ಸಹಾಯ ಮಾಡುವುದು.

ಔಷಧಿ ವನಸ್ಪತಿ ಗಿಡಗಳನ್ನು ನೆಡುವ ಸೇವೆಯಲ್ಲಿ ಸಹಭಾಗಿಗಳಾಗಲು ಸಂಪರ್ಕ

ಶ್ರೀ. ವಿಷ್ಣು ಜಾಧವ, ‘ಸನಾತನ ಆಶ್ರಮ, 24/B, ರಾಮನಾಥಿ ಬಾಂದಿವಡೆ, ಫೋಂಡಾ, ಗೋವಾ.

ಪಿನ್ – 403401  ಸಂಚಾರವಾಣಿ ಕ್ರಮಾಂಕ: 8208514791

ವಿ-ಅಂಚೆ ವಿಳಾಸ : [email protected]

ಭಾವಿ ಹಿಂದೂ ರಾಷ್ಟ್ರದಲ್ಲಿ ಆಯುರ್ವೇದವೇ ಮುಖ್ಯ ಚಿಕಿತ್ಸಾ ಪದ್ಧತಿಯಾಗಿರಲಿದೆ. ಈ ಕಾರಣದಿಂದ ಈಗಿನಿಂದಲೇ ಔಷಧಿ ವನಸ್ಪತಿಗಳನ್ನು ಬೆಳೆಸುವುದು ಮಹತ್ವದ್ದಾಗಿದೆ