ಸಾಧಕರಿಗೆ ಸೂಚನೆ, ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

‘ಕೊರೋನಾ ವೈರಾಣುವಿನ ಸೋಂಕಿನ ಹಿನ್ನೆಲೆಯಲ್ಲಿ ಅನಿವಾರ್ಯ ಕಾರಣಗಳಿಂದ ಮನೆಯಿಂದ ಹೊರಗೆ ಹೋಗುವವರು, ಹಾಗೆಯೇ ಶೀತ, ಕೆಮ್ಮು ಅಥವಾ ಜ್ವರದ ಲಕ್ಷಣಗಳಿರುವವರು ಮುಂದಿನ ಕೃತಿಗಳನ್ನು ಮಾಡಬೇಕು !

‘ದೇಶದಾದ್ಯಂತ ‘ಕೊರೋನಾ ವೈರಾಣುಗಳು ತೀವ್ರಗತಿಯಲ್ಲಿ ಹರಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರೂ ಜನದಟ್ಟನೆ ಇರುವ ಸ್ಥಳಗಳಿಗೆ ಹೋಗದಿರುವುದು, ಅನಾವಶ್ಯಕ ಪ್ರಯಾಣ ಮಾಡದಿರುವುದು, ಸಾಮಾಜಿಕ ಅಂತರವನ್ನು ಕಾಪಾಡುವುದು, ಮಾಸ್ಕ್‌ನ್ನು ಉಪಯೋಗಿಸುವುದು ಮುಂತಾದ ಸೂಚನೆಗಳನ್ನು ಪಾಲಿಸುವುದು ಆವಶ್ಯಕವಾಗಿದೆ. ಯಾರಿಗೆ ಅನಿವಾರ್ಯ ಕಾರಣಗಳಿಗಾಗಿ ಅಥವಾ ನೌಕರಿಯ ನಿಮಿತ್ತ ಪ್ರತಿದಿನ ಹೊರಗೆ ಹೋಗುವ ಪ್ರಸಂಗ ಬರುವುದೋ, ಅವರು ಶೀತ, ಕೆಮ್ಮು ಅಥವಾ ಜ್ವರದ ಲಕ್ಷಣಗಳಿಲ್ಲದಿದ್ದರೂ, ಪ್ರತಿದಿನ ೨-೩ ಬಾರಿ ಪ್ರತಿಸಲ ೫-೬ ನಿಮಿಷ ಮೂಗಿನ ಮೂಲಕ ವಾಫ್ ತೆಗೆದುಕೊಳ್ಳಬೇಕು.

ಶೀತ, ಕೆಮ್ಮು ಅಥವಾ ಜ್ವರದ ಲಕ್ಷಣಗಳಿರುವವರು, ಪ್ರತಿ ೩ ಗಂಟೆಗಳ ನಂತರ ವಾಫ್ ತೆಗೆದುಕೊಳ್ಳುವುದು ಆವಶ್ಯಕವಾಗಿದೆ. ಬಿಸಿ ನೀರಿನಲ್ಲಿ ಉಪ್ಪು ಮತ್ತು ಸ್ವಲ್ಪ ಅರಿಶಿಣ ಸೇರಿಸಿ ದಿನದಲ್ಲಿ ೫-೬ ಬಾರಿ ಗಂಟಿನಲ್ಲಿ ಗುಳುಗುಳು (‘ಗಾರ್ಗಲಿಂಗ್) ಮಾಡಬೇಕು, ಜೊತೆಗೆ ವೈದ್ಯರ ಸಲಹೆ ಪಡೆಯಬೇಕು. ಸಾಧ್ಯವಿದ್ದರೆ ಮನೆಯ ಇತರ ಸದಸ್ಯರಿಂದ ಪ್ರತ್ಯೇಕವಾಗಿರಬೇಕು. ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಎಲ್ಲರೂ ಸಮತೋಲನ ಆಹಾರ ಸೇವಿಸುವುದು ಮತ್ತು ಸಾಕಷ್ಟು ನಿದ್ದೆ ಮಾಡುವುದು ಆವಶ್ಯಕವಾಗಿದೆ. – ಆಧುನಿಕ ವೈದ್ಯ ಪಾಂಡುರಂಗ ಮರಾಠೆ, ಸನಾತನ ಆಶ್ರಮ, ರಾಮನಾಥಿ, ಗೋವಾ (೮.೮.೨೦೨೦)