ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಿಗೆ ಕರೆ !

ದ್ವಿಚಕ್ರ ಹಾಗೂ ಚತುಷ್ಚಕ್ರ ವಾಹನಗಳನ್ನುಉಪಯೋಗಿಸಿದ ನಂತರ ನಿರ್ಜಂತುಕರಣ (ಸ್ಯಾನಿಟೈಸ್) ಹಾಗೂ ಶುದ್ಧಿಯನ್ನು ಮಾಡಿ !

ಸದ್ಯ ದೇಶಾದ್ಯಂತ ‘ಕೊರೋನಾ’ದ ಸೋಂಕು ದೊಡ್ಡ ಪ್ರಮಾಣ ದಲ್ಲಿ ಹರಡಿದೆ. ಆದ್ದರಿಂದ ಎಲ್ಲರೂ ಮನೆಯಲ್ಲೇ ಇರುವುದು ಹೆಚ್ಚು ಸುರಕ್ಷಿತವಾಗಿದೆ. ಅತ್ಯಾವಶ್ಯಕ ಕಾರಣಗಳಿಂದಾಗಿ ಸ್ವಲ್ಪ ಸಮಯಕ್ಕಾಗಿ ಮನೆಯಿಂದ ಹೊರಗೆ ಹೋಗಬೇಕಾಗುತ್ತದೆ. ಹೊರಗೆ ಹೋದಲ್ಲಿ ಅಲ್ಲಿಂದ ಬಂದ ಮೇಲೆ ದ್ವಿಚಕ್ರ ಹಾಗೂ ಚತುಷ್ಚಕ್ರ ವಾಹನಗಳನ್ನು ಈ ಮುಂದಿನಂತೆ ನಿರ್ಜಂತುಕರಣ (‘ಸ್ಯಾನಿಟೈಸೇಶನ್’) ಹಾಗೂ ಶುದ್ಧಿಯನ್ನು ಮಾಡಿ.

೧. ವಾಹನದ ‘ಸ್ಯಾನಿಟೈಸೇಶನ್’ ಹೇಗೆ ಮಾಡಬೇಕು ?

ಅ. ವಾಹನ ಓಡಿಸುವಾಗ ಮೇಲಿಂದಮೇಲೆ ನಮ್ಮ ಕೈಗಳ ಸ್ಪರ್ಶವಾಗುವ ಭಾಗ (ಬೀಗದಕೈ, ಬಾಗಿಲಿನ ಹ್ಯಾಂಡಲ್. ಆಸನ (ಸೀಟ್), ‘ಸೀಟ್ ಬೆಲ್ಟ್’, ‘ಸ್ಟೇರಿಂಗ್ ವೀಲ್’, ‘ಗೇರ್’, ‘ಹ್ಯಾಂಡ್‌ಬ್ರೇಕ್’ ಇತ್ಯಾದಿಗಳನ್ನು ಮೊದಲು ಸಾಬೂನಿನ ನೀರಿನಿಂದ ನಂತರ ಸಾದಾ ನೀರಿನಿಂದ ಒರೆಸಬೇಕು. ನಂತರ ಆ ಭಾಗಗಳನ್ನು ಒಣ ಬಟ್ಟೆಯಿಂದ ಒರೆಸಬೇಕು. ಯಾವ ಭಾಗವನ್ನು ನಾವು ಸ್ಪಶಿಸುವುದಿಲ್ಲವೋ ಆ ಭಾಗವನ್ನೂ (ಉದಾ. ಗಾಜು, ‘ಡ್ಯಾಶ್‌ಬೋರ್ಡ್’) ಈ ಮೇಲಿನಂತೆ ಒರೆಸಬೇಕು. ಒರೆಸಲು ಮೃದುವಾದ ಬಟ್ಟೆಯನ್ನು ಉಪಯೋಗಿಸಬೇಕು.

ಆ. ಸುರಕ್ಷೆಯ ದೃಷ್ಟಿಯಿಂದ ಚಾಲಕನು ವಾಹನವನ್ನು ನಡೆಸುವ ಮೊದಲು ಹಾಗೂ ನಂತರ ತಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.

ಇ. ವಾಹನದಲ್ಲಿ ‘ಸ್ಯಾನಿಟೈಝರ’ನ (ರೋಗಾಣು ನಿರೋಧಕ) ಬಾಟಲಿಯನ್ನು ಇಡಬೇಕು, ಇದರಿಂದ ಅವಶ್ಯಕತೆಗನುಸಾರ ಅದನ್ನು ಉಪಯೋಗಿಸಬಹುದು.

೨. ವಾಹನದ ಸುತ್ತಲು ಊದುಬತ್ತಿಯಿಂದ ನಿವಾಳಿಸಿ ಅದನ್ನು ನಿಯಮಿತ ಶುದ್ಧಿ ಸಹ ಮಾಡಬೇಕು. ಶುದ್ಧಿಗಾಗಿ ಸಾತ್ತ್ವಿಕ ಊದುಬತ್ತಿಯನ್ನು ಉಪಯೋಗಿಸಬೇಕು.

‘ಕೊರೋನಾ’ದ ಸೋಂಕನ್ನು ತಡೆಗಟ್ಟಲು ವಾಹನಗಳನ್ನು ಈ ಮೇಲಿನಂತೆ ಸ್ಯಾನಿಟೈಸ್ ಮಾಡುವುದು ಆವಶ್ಯಕವಿದೆ !