ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !
ಅಧ್ಯಾತ್ಮದ ಜಿಜ್ಞಾಸುಗಳು, ವಿವಿಧ ಯೋಗಮಾರ್ಗಗಳಿಗನುಸಾರ ಸಾಧನೆ ಮಾಡುವ ಸಾಧಕರು ಮತ್ತು ಧರ್ಮಪ್ರೇಮಿಗಳಿಗೆ ಆಧ್ಯಾತ್ಮಿಕ ಪ್ರಗತಿಗಾಗಿ ಮಾರ್ಗದರ್ಶನವಾಗ ಬೇಕು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು ಎಂಬುದಕ್ಕಾಗಿ ಸನಾತನವು ಆಚಾರಧರ್ಮ, ಧಾರ್ಮಿಕ ಕೃತಿ, ದೇವತೆಗಳು, ಸಾಧನೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ಗ್ರಂಥ ಮತ್ತು ಕಿರುಗ್ರಂಥಗಳನ್ನು ಪ್ರಕಾಶಿಸಿದೆ.