ಜಗದ್ಗುರುಗಳ ಮಾರ್ಗದರ್ಶನದಲ್ಲಿ ಇದುವರೆಗೆ 1 ಲಕ್ಷ 54 ಸಾವಿರದ 766 ಕ್ಕೂ ಹೆಚ್ಚು ಜನರಿಂದ ‘ಘರ್ ವಾಪಸಿ’!
(ಘರ್ ವಾಪಸಿ ಎಂದರೆ ಹಿಂದೂ ಧರ್ಮಕ್ಕೆ ಪುನರ್ಪ್ರವೇಶ)

ದುರ್ಗ (ಛತ್ತೀಸಗಡ) – ಪರಧರ್ಮದ ಧರ್ಮಪ್ರಚಾರಕರ ಸುಳ್ಳು ಭರವಸೆಗಳು ಮತ್ತು ಆಮಿಷಗಳಿಗೆ ಒಳಗಾಗಿ ಮೂಲ ಸನಾತನ ಹಿಂದೂ ಧರ್ಮದಿಂದ ದೂರ ಹೋಗಿದ್ದ 175 ಜನರು ಜೂನ್ 4 ರಂದು ದುರ್ಗ ಜಿಲ್ಲೆಯ ಪುಲಗಾವನಲ್ಲಿ ಹಿಂದೂ ಧರ್ಮಕ್ಕೆ ಪುನರ್ಪ್ರವೇಶಿಸಿದರು. ಜಗದ್ಗುರು ಶ್ರೀಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಮಹಾರಾಜರ ಪ್ರೇರಣಾದಾಯಿ ವಿಚಾರಗಳಿಂದ ಪ್ರಭಾವಿತರಾದ ಈ ಸಹೋದರರು, ಶಾಸ್ತ್ರೋಕ್ತ ವಿಧಿವಿಧಾನಗಳು ಮತ್ತು ವೈದಿಕ ಮಂತ್ರೋಚ್ಚಾರಗಳ ಸಾಕ್ಷಿಯೊಂದಿಗೆ ಸ್ವಧರ್ಮವನ್ನು ಸ್ವೀಕರಿಸಿದರು. ವಿವಿಧ ಸಂತ-ಮಹಂತರ ವಂದನೀಯ ಉಪಸ್ಥಿತಿಯಲ್ಲಿ ಈ ಸಮಾರಂಭವು ಅತ್ಯಂತ ಉತ್ಸಾಹಭರಿತ ಹಾಗೂ ಧಾರ್ಮಿಕ ವಾತಾವರಣದಲ್ಲಿ ಸಂಪನ್ನಗೊಂಡಿತು. ಈ ಕಾರ್ಯಕ್ರಮದಲ್ಲಿ ಲೋಕತಂತ್ರ ಸೇನಾನಿ ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾದ ಸಚ್ಚಿದಾನಂದ ಉಪಾಸನೆ, ಭಾಜಪದ ಪ್ರದೇಶ ಉಪಾಧ್ಯಕ್ಷರಾದ ಪ್ರಬಲ ಪ್ರತಾಪ ಸಿಂಗ ಜುದೇವ, ಹಾಗೂ ದುರ್ಗ ಜಿಲ್ಲೆಯ ಮಾಜಿ ಶಾಸಕರಾದ ಅರುಣ ವೋರಾ ರವರು ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು.

ದೇಶಾದ್ಯಂತ ಅವಿರತವಾಗಿ ನಡೆಯುತ್ತಿರುವ ಧರ್ಮಕಾರ್ಯ!![]() ಜಗದ್ಗುರು ಶ್ರೀಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಯವರ ಮಾರ್ಗದರ್ಶನದಲ್ಲಿ ಇದುವರೆಗೆ ದೇಶಾದ್ಯಂತ 1 ಲಕ್ಷ 54 ಸಾವಿರದ 766 ಕ್ಕೂ ಹೆಚ್ಚು ಬಂಧುಗಳು ವಿಧ್ಯುಕ್ತವಾಗಿ ಮತ್ತು ಕಾನೂನುಬದ್ಧವಾಗಿ ಹಿಂದೂ ಧರ್ಮಕ್ಕೆ ಮರುಸೇರ್ಪಡೆಯಾಗಿದ್ದಾರೆ. ಈ ಧರ್ಮಕಾರ್ಯವು ದೇಶಾದ್ಯಂತ ಅವಿರತವಾಗಿ ಸಾಗುತ್ತಿದ್ದು, ಸಮಾಜ ಜಾಗೃತಿ, ಧರ್ಮ ಸಂವರ್ಧನೆ ಮತ್ತು ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ಅತ್ಯಂತ ಮಹತ್ವದ್ದಾಗಿದೆ. ಪರಧರ್ಮಕ್ಕೆ ಹೋಗಿದ್ದ ಹಿಂದೂ ಸಹೋದರರನ್ನು ಗೌರವಪೂರ್ವಕವಾಗಿ ಮರುಸೇರಿಸಿಕೊಳ್ಳುವ ಈ ಉಪಕ್ರಮದ ಮೂಲಕ ಜಗದ್ಗುರು ಶ್ರೀಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಅವರು ಸಮಾಜದ ಮುಂದೆ ಒಂದು ಆದರ್ಶವನ್ನು ಸೃಷ್ಟಿಸಿದ್ದಾರೆ ಎಂಬ ಭಾವನೆಯನ್ನು ಉಪಸ್ಥಿತರು ವ್ಯಕ್ತಪಡಿಸಿದರು. |

ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!