ಪೊಲೀಸರ ಶಂಕಾಸ್ಪದ ಕಾರುಬಾರು!
ಹಿರಿಯ ಅಧಿಕಾರಿಗಳಿಂದ ತನಿಖೆ ಆರಂಭ!
ದೂರು ನೀಡಿದ ಹಿಂದುತ್ವನಿಷ್ಠರ ಮೇಲೆ ಹಲ್ಲೆ, ವಲಸಿಗರಿಗೆ ಬೆಂಬಲ!

ಮುಂಬಯಿ – ಕಳೆದ ಒಂದು ವರ್ಷದಲ್ಲಿ ಮುಂಬಯಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಾಂಗ್ಲಾದೇಶಿ ನುಸುಳುಕೋರರು ಪತ್ತೆಯಾಗಿದ್ದಾರೆ. ಆದರೆ ಇನ್ನೊಂದೆಡೆ, ಭಾಂಡುಪ್ (ಪಶ್ಚಿಮ) ವಲಯದ ಭಟ್ಟಿಪಾಡಾದಲ್ಲಿ ಬಾಂಗ್ಲಾದೇಶಿ ನುಸುಳುಕೋರರಿಂದ ಹಣ ಪಡೆದು ಪೊಲೀಸರು ಅವರಿಗೆ ರಕ್ಷಣೆ ನೀಡುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಕುರಿತು ಹಿಂದುತ್ವನಿಷ್ಠರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ, ೪-೫ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.
೧. ಭಟ್ಟಿಪಾಡಾದಲ್ಲಿ ಕೆಲವು ಬಾಂಗ್ಲಾದೇಶಿ ನುಸುಳುಕೋರರು ಹಣ್ಣು ಮತ್ತು ಮೀನು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿಯನ್ನು ಸ್ಥಳೀಯರು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಗೆ ನೀಡಿದ್ದರು. ಜೂನ್ ೭ ರಂದು ಹಿಂದುತ್ವನಿಷ್ಠ ಯುವಕರು ಈ ಮಾರಾಟಗಾರರ ಗುರುತಿನ ಚೀಟಿಗಳನ್ನು ಪರಿಶೀಲಿಸಿದರು.
೨. ಎಳನೀರು ಮಾರುತ್ತಿದ್ದ ಯುವಕನೊಬ್ಬ ತಾನು ಹಿಂದೂ ಎಂದು ಹೇಳಿಕೊಂಡಿದ್ದ; ಆದರೆ ಆನ್‌ಲೈನ್ ಮೂಲಕ ಹಣ ಪಾವತಿಸುವಾಗ ಆತ ಮುಸ್ಲಿಂ ಎಂಬುದು ಪತ್ತೆಯಾಗಿದೆ. ಹಿಂದುತ್ವನಿಷ್ಠರು ಗುರುತಿನ ಚೀಟಿಯನ್ನು ಕೇಳಿದಾಗ, ತಾನು ಬಾಂಗ್ಲಾದೇಶದಿಂದ ಬಂದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. (ಕುತಂತ್ರ ಬುದ್ಧಿಯ ಮುಸ್ಲಿಂ! – ಸಂಪಾದಕ). ನಂತರ ಆತ ಹಿಂದುತ್ವನಿಷ್ಠರೊಂದಿಗೆ ಜಗಳವಾಡಿದನು. ಆತ ಹಿಂದುತ್ವನಿಷ್ಠರ ಮೇಲೆ ಕತ್ತಿಯಿಂದ ಹಲ್ಲೆ ಮಾಡಲು ಯತ್ನಿಸಿದನು.
೩. ಸ್ಥಳದಿಂದ ತಪ್ಪಿಸಿಕೊಂಡ ಆತ ಭಾಂಡುಪ್ ಪೊಲೀಸ್ ಠಾಣೆಗೆ ತೆರಳಿದ. ಹಿಂದುತ್ವನಿಷ್ಠರು ಕೂಡ ಅಲ್ಲಿಗೆ ತಲುಪಿದರು. ಮುಸ್ಲಿಂ ಮಾರಾಟಗಾರರು ಬಾಂಗ್ಲಾದೇಶಿ ನುಸುಳುಕೋರರಾಗಿದ್ದು, ಅವರ ಬಗ್ಗೆ ತನಿಖೆ ನಡೆಸಬೇಕೆಂದು ಹಿಂದುತ್ವನಿಷ್ಠರು ಒತ್ತಾಯಿಸಿದರು; ಆದರೆ ಅದನ್ನು ನಿರ್ಲಕ್ಷಿಸಿದ ಪೊಲೀಸರು ಹಿಂದುತ್ವನಿಷ್ಠರ ಮೇಲೆಯೇ ಹಲ್ಲೆ ನಡೆಸಿದರು. ಇದರಿಂದ ಆಕ್ರೋಶಗೊಂಡ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಪೊಲೀಸ್ ಠಾಣೆಯ ಹೊರಗೆ ತಡರಾತ್ರಿಯವರೆಗೆ ಪ್ರತಿಭಟನೆ ನಡೆಸಿ, ಪೊಲೀಸರ ಕ್ರಮವನ್ನು ಖಂಡಿಸಿದರು. (ಹಿಂದೂ ಬಹುಸಂಖ್ಯಾತ ರಾಜ್ಯದಲ್ಲಿ ಹಿಂದುತ್ವನಿಷ್ಠರಿಗೆ ಇಂತಹ ಪರಿಸ್ಥಿತಿ ಬರುವುದು ದುರ್ದೈವದ ಸಂಗತಿ! – ಸಂಪಾದಕರು)
ಪೊಲೀಸರು ಬಾಂಗ್ಲಾದೇಶಿ ನುಸುಳುಕೋರರಿಂದ ಹಣ ಪಡೆಯುತ್ತಿದ್ದಾರೆಂದು ಹಿಂದುತ್ವನಿಷ್ಠರ ಆರೋಪ
ಭಟ್ಟಿಪಾಡಾದಲ್ಲಿ ವ್ಯಾಪಾರ ಮಾಡುವ ಬಾಂಗ್ಲಾದೇಶಿ ವಲಸಿಗರಿಂದ ಮಾಮೂಲಿ (ಹಫ್ತಾ) ಪಡೆದು ಪೊಲೀಸರು ಅವರಿಗೆ ರಕ್ಷಣೆ ನೀಡುತ್ತಿದ್ದಾರೆಂದು ಹಿಂದುತ್ವನಿಷ್ಠರು ಆರೋಪಿಸಿದ್ದಾರೆ. ಪೊಲೀಸರು ಅವರಿಂದ ಹಣ ವಸೂಲಿ ಮಾಡುತ್ತಿರುವ ಕೆಲವು ಚಿತ್ರಗಳು ಮತ್ತು ವಿಡಿಯೋಗಳನ್ನು ಹಿಂದುತ್ವನಿಷ್ಠರು ತೋರಿಸಿದ್ದಾರೆ.
ಈ ಕುರಿತು ‘ಸನಾತನ ಪ್ರಭಾತ’ದ ಪ್ರತಿನಿಧಿಗೆ ಮಾಹಿತಿ ನೀಡುತ್ತಾ ಬಜರಂಗದಳದ ಕೊಂಕಣ ಪ್ರಾಂತದ ಸಹ-ಸಂಯೋಜಕರಾದ ಶ್ರೀ ಗೌತಮ್ ರಾವರಿಯಾ ಅವರು, ‘‘ಪೊಲೀಸರು ಹಫ್ತಾ ಪಡೆದು ಬಾಂಗ್ಲಾದೇಶಿ ನುಸುಳುಕೋರರಿಗೆ ರಕ್ಷಣೆ ನೀಡುತ್ತಿರುವ ಬಗ್ಗೆ ಪೊಲೀಸ್ ಉಪ ಆಯುಕ್ತರಾದ (DCP) ಅಭಿನಯ್ ದೇಶಮುಖ್ ಅವರಿಗೆ ದೂರು ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಅವರು ಭರವಸೆ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಮುಖ್ಯಮಂತ್ರಿ ಮತ್ತು ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡಲಿದ್ದೇವೆ,’’ ಎಂದು ಗೌತಮ್ ಹೇಳಿದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ