ಗುಜರಾತ್‌ನಲ್ಲಿ ಸತತ ೪ ವರ್ಷ ಲೈಂಗಿಕ ಶೋಷಣೆಯನ್ನು ಮಾಡಿದ ಮದರಸಾದ ಮೌಲಾನಾನ ಬಂಧನ

‘ಇಂತಹವರಿಗೆ ಶರಿಯತ್ ಕಾನೂನಿಗನುಸಾರ ಕೈ-ಕಾಲು ಮುರಿಯುವ ಅಥವಾ ನಡುರಸ್ತೆಯಲ್ಲಿ ಗಲ್ಲಿಗೇರಿಸುವ ಶಿಕ್ಷೆಯನ್ನು ನೀಡಿ’, ಎಂದು ಯಾರಾದರು ಒತ್ತಾಯಿಸಿದರೆ ಆಶ್ಚರ್ಯವೆನಿಲ್ಲ !

ಕಚ್ಛ (ಗುಜರಾತ) – ಇಲ್ಲಿಯ ನಖತರಾಣಾ ತಾಲೂಕಿನ ನಾರಾ ಗ್ರಾಮದಲ್ಲಿಯ ಮದರಸಾದ ಶಿಕ್ಷಕ ಮೌಲಾನಾ ಸಮದುದ್ದೀನ ಹಾಜಿ ಸುಲೆಮಾನ ಜಾಟ ಈತನು ಓರ್ವ ವಿದ್ಯಾರ್ಥಿನಿಯನ್ನು ಸತತ ೪ ವರ್ಷಗಳಿಂದ ಲೈಂಗಿಕ ಶೋಷಣೆಯನ್ನು ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದೆ. ಸದ್ಯ ೧೯ ವರ್ಷದ ವಿಧ್ಯಾರ್ಥಿನಿಯ ವಿವಾಹವಾಯಿತು. ಆಕೆಯ ಗಂಡನಿಗೆ ಇದರ ಬಗ್ಗೆ ತಿಳಿದಾಗ ಆತ ಆಕೆಗೆ ಪೊಲೀಸರಲ್ಲಿ ದೂರನ್ನು ದಾಖಲಿಸಲು ಹೇಳಿದನು. ತದನಂತರ ಮೌಲಾನಾನನ್ನು ಬಂಧಿಸಲಾಯಿತು.