ಸಾವಿರಾರು ಭಾರತೀಯರಿಗೆ ಇದರ ಲಾಭ!

ವಾಷಿಂಗ್ಟನ್ (ಅಮೆರಿಕ) – ಉನ್ನತ ಕೌಶಲ್ಯ ಹೊಂದಿದ ವಿದೇಶಿ ಉದ್ಯೋಗಿಗಳ ಹೊಸ ‘ಎಚ್-೧ಬಿ ವೀಸಾ’ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ೧ ಲಕ್ಷ ಡಾಲರ್ (ಸುಮಾರು ೯೫ ಲಕ್ಷ ರೂಪಾಯಿ) ಶುಲ್ಕವನ್ನು ಅಮೆರಿಕದ ಕೇಂದ್ರ ನ್ಯಾಯಾಲಯವೊಂದು ಇತ್ತೀಚೆಗೆ ರದ್ದುಗೊಳಿಸಿದೆ. ಇದೊಂದು ಕಾನೂನುಬಾಹಿರ ತೆರಿಗೆಯಾಗಿದ್ದು, ಇದಕ್ಕೆ ಅಮೆರಿಕನ್ ಕಾಂಗ್ರೆಸ್ (ಸಂಸತ್ತು) ಎಂದಿಗೂ ಅನುಮೋದನೆ ನೀಡಿರಲಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
Big updates on US immigration: The court has officially blocked the $100k H-1B visa fee! 🛑
While this brings massive immediate relief to skilled workers & global tech firms, the broader landscape stays uncertain.
#H1B #Immigration #TechTalent
PC: @airnewsalerts pic.twitter.com/I7wfoXTw5U— Sanatan Prabhat (@SanatanPrabhat) June 9, 2026
೧. ಸೆಪ್ಟೆಂಬರ್ ೨೦೨೫ ರಲ್ಲಿ ೨೦ ರಾಜ್ಯಗಳ ಅಟಾರ್ನಿ ಜನರಲ್‌ಗಳು ಟ್ರಂಪ್ ಅವರ ಈ ನಿರ್ಧಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಬೋಸ್ಟನ್‌ನ ಅಮೆರಿಕನ್ ಜಿಲ್ಲಾ ನ್ಯಾಯಾಧೀಶರಾದ ಲಿಯೋ ಸೊರೊಕಿನ್ ಅವರು ತಮ್ಮ ತೀರ್ಪಿನಲ್ಲಿ ಅಟಾರ್ನಿ ಜನರಲ್ ಗಳ ವಾದವನ್ನು ಎತ್ತಿಹಿಡಿದಿದ್ದಾರೆ.
೨. ಟ್ರಂಪ್ ಅವರ ಈ ನೀತಿಯಿಂದಾಗಿ, ವಿದೇಶಗಳಿಂದ ಉನ್ನತ ಕೌಶಲ್ಯದ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ತಗಲುತ್ತಿದ್ದ ೮,೦೦೦ ಡಾಲರ್ (ಸುಮಾರು ೭ ಲಕ್ಷದ ೬೦ ಸಾವಿರ ರೂಪಾಯಿ) ಪ್ರಮಾಣಿತ ಶುಲ್ಕಕ್ಕಿಂತ ಗಣನೀಯವಾಗಿ ಹೆಚ್ಚಾಗಿತ್ತು.
೩. ‘ಎಚ್-೧ಬಿ’ ಗೆ ಸಂಬಂಧಿಸಿದ ಈ ತೀರ್ಪಿನಿಂದಾಗಿ ಅಮೆರಿಕದ ತಂತ್ರಜ್ಞಾನ, ಆರೋಗ್ಯ ಸೇವೆ ಮತ್ತು ಇತರ ಕ್ಷೇತ್ರಗಳಿಗೆ ದೊಡ್ಡ ಸಮಾಧಾನ ಸಿಕ್ಕಂತಾಗಿದೆ. ಏಕೆಂದರೆ ಅಮೆರಿಕದಲ್ಲಿ ಕೆಲಸ ಮಾಡಲು ವಿದೇಶಗಳಿಂದ ಬರುವ ಉನ್ನತ ಕೌಶಲ್ಯದ ಉದ್ಯೋಗಿಗಳ ಮೇಲೆಯೇ ಈ ಕ್ಷೇತ್ರಗಳು ಅವಲಂಬಿತವಾಗಿವೆ. ‘ಎಚ್-೧ಬಿ’ ಕಾರ್ಯಕ್ರಮದಡಿಯಲ್ಲಿ ವಾರ್ಷಿಕ ೮೫,೦೦೦ ವೀಸಾಗಳ ಮಿತಿ ಇರುತ್ತದೆ.
೪. ಈ ನಿರ್ಧಾರದಿಂದ ಭಾರತೀಯರಿಗೆ ಗಮನಾರ್ಹ ಲಾಭವಾಗಲಿದೆ; ಏಕೆಂದರೆ ‘ಎಚ್-೧ಬಿ’ ವೀಸಾ ಹೊಂದಿರುವವರಲ್ಲಿ ಭಾರತೀಯರ ಪ್ರಮಾಣವೇ ಸುಮಾರು ಶೇ. ೬೦% ರಿಂದ ೭೦% ರಷ್ಟಿದೆ. ಈ ಹೊಸ ಶುಲ್ಕದ ನಿಯಮದಿಂದಾಗಿ ಸಾವಿರಾರು ಭಾರತೀಯ ಇಂಜಿನಿಯರ್‌ಗಳ, ವಿಶೇಷವಾಗಿ ಮಾಹಿತಿ ತಂತ್ರಜ್ಞಾನ (ಐ.ಟಿ.) ವೃತ್ತಿಪರರ ಅವಕಾಶಗಳಿಗೆ ಅಡ್ಡಿ ಉಂಟಾಗುವ ಸಾಧ್ಯತೆಯಿತ್ತು.
೫. ಈ ವೀಸಾಗಳಿಗೆ ಭಾರೀ ಪ್ರಾಯೋಜಕತ್ವ (Sponsorship) ನೀಡುವ ಟಿಸಿಎಸ್ (TCS), ಇನ್ಫೋಸಿಸ್ (Infosys), ವಿಪ್ರೋ (Wipro) ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ (HCL Technologies) ನಂತಹ ಭಾರತೀಯ ಕಂಪನಿಗಳು ಶತಕೋಟಿ ಡಾಲರ್‌ಗಳ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತಿತ್ತು.
೬. ಅದೇ ರೀತಿ ಗೂಗಲ್, ಅಮೆಜಾನ್, ಮೆಟಾ, ಐಬಿಎಂ, ಮೈಕ್ರೋಸಾಫ್ಟ್, ಆಪಲ್ ಮುಂತಾದ ಅಮೆರಿಕದ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿಗಳಿಗೂ ಇದರಿಂದ ದೊಡ್ಡ ಹೊಡೆತ ಬೀಳುತ್ತಿತ್ತು; ಏಕೆಂದರೆ ಈ ಕಂಪನಿಗಳು ಭಾರತ ಮತ್ತು ಇತರ ದೇಶಗಳಿಂದ ಕೌಶಲ್ಯಯುತ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಈ ವೀಸಾ ಪದ್ಧತಿಯನ್ನೇ ಅವಲಂಬಿಸಿವೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation