ಕೊಯಂಬತ್ತೂರು (ತಮಿಳುನಾಡು) ಇಲ್ಲಿ ಅಜ್ಞಾತರಿಂದ ೩ ದೇವಸ್ಥಾನಗಳನ್ನು ಒಡೆದು ಸುಟ್ಟರು

ತಥಾಕಥಿತ ಸುಧಾರಣಾವಾದಿ ಹಾಗೂ ಹಿಂದೂವಿರೋಧಿ ಪೇರಿಯಾರನ ಪ್ರತಿಮೆಯನ್ನು ಒಡೆದುದಕ್ಕಾಗಿ ಸೇಡು ತೀರಿಸಿದ್ದೆಂದು ಚರ್ಚೆ

  • ತಮಿಳುನಾಡಿನಲ್ಲಿ ಅಣ್ಣಾದ್ರಮುಕ ಪಕ್ಷ ಅಧಿಕಾರದಲ್ಲಿದೆ. ಯಾವ ಪಕ್ಷವು ಶಂಕರಾಚಾರ್ಯ ಸ್ವಾಮಿ ಜಯೇಂದ್ರ ಸರಸ್ವತಿಯವರನ್ನು ಸುಳ್ಳು ಆರೋಪದಲ್ಲಿ ಬಂಧಿಸಿ ಸೆರೆಮನೆಯಲ್ಲಿ ಹಾಕಿದ್ದರೋ, ಆ ಪಕ್ಷದ ರಾಜ್ಯದಲ್ಲಿ ಹಿಂದೂ ಹಾಗೂ ಹಿಂದೂಗಳ ದೇವಸ್ಥಾನಗಳು ಸುರಕ್ಷಿತವಾಗಿರಲು ಹೇಗೆ ಸಾಧ್ಯ ?
  • ಹಿಂದೂ ಧರ್ಮದ ಮೇಲೆ ಅತ್ಯಂತ ಕೀಳು ಮಟ್ಟಕ್ಕೆ ಹೋಗಿ ಟೀಕಿಸುವ, ದ್ರಾವಿಡರ ವಿರುದ್ಧ ಆರ್ಯ ಎಂಬ ಅಸ್ತಿತ್ವದಲ್ಲಿ ಇಲ್ಲದಿರುವ ವಾದವನ್ನು ಸೃಷ್ಟಿಸಿ ತಮಿಳಿಯರನ್ನು ಭಾರತದಿಂದ ಬೇರ್ಪಡಿಸಿ ಅವರಲ್ಲಿ ವಿಭಜನೆಯ ಬೀಜವನ್ನು ಬಿತ್ತುವ ಪೆರಿಯಾರನ ಪ್ರತಿಮೆಯನ್ನು ಒಡೆದಿದಕ್ಕೆ ಅದರ ಸೇಡು ತೀರಿಸಲು ಯಾರಾದರು ಹಿಂದೂಗಳ ದೇವಸ್ಥಾನವನ್ನು ಗುರಿ ಮಾಡಿದ್ದರೆ, ಅದು ಖಂಡನೀಯ ! ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಿದೆ.

ಕೋಯಂಬತ್ತೂರು (ತಮಿಳುನಾಡು) – ಇಲ್ಲಿ ಜುಲೈ ೧೭ ರ ರಾತ್ರಿ ಅಜ್ಞಾತರು ಟೌನ್ ಹಾಲ್‌ನ ಹತ್ತಿರ ಇರುವ ಮಗಾಲಿಯಮ್ಮನ್ ದೇವಸ್ಥಾನ, ರೈಲು ನಿಲ್ದಾಣದ ಬಳಿ ಇರುವ ವಿನಯನಗರ ದೇವಸ್ಥಾನ ಹಾಗೂ ನಲ್ಲಮಪಲಾಯಮ್‌ನ ಸೆಲವಾ ಪ್ರದೇಶದ ವಿನಯಗರ ದೇವಸ್ಥಾನ ಈ ೩ ಹಿಂದೂ ದೇವಸ್ಥಾನಗಳನ್ನು ಒಡೆದು ಬೆಂಕಿ ಹಚ್ಚಿದರು. ಒಡೆಯುವವರು ಇಲ್ಲಿಯ ಒಂದು ದೇವಸ್ಥಾನದಲ್ಲಿರುವ ತ್ರಿಶೂಲಕ್ಕೂ ಹಾನಿ ಮಾಡಿದ್ದಾರೆ. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಮಾಡುತ್ತಿದ್ದಾರೆ.

೧. ಇಲ್ಲಿ ಹಿಂದುತ್ವನಿಷ್ಠ ಸಂಘಟನೆ ಹಿಂದೂ ಮುನ್ನಾನಿ, ಅದೇ ರೀತಿ ಭಾಜಪದ ಕಾರ್ಯಕರ್ತರು ಜುಲೈ ೧೯ ರಂದು ಸಂಘಟಿತರಾಗಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಈ ಸಮಯದಲ್ಲಿ ಭಾಜಪದ ಪ್ರದೇಶ ಉಪಾಧ್ಯಕ್ಷ ವನಾಥಿ ಶ್ರೀನಿವಾಸನ್ ಇವರು ಈ ಘಟನೆಯ ಬಗ್ಗೆ ಖಂಡಿಸುತ್ತ ‘ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು’, ಎಂದು ರಾಜ್ಯದ ಮುಖ್ಯಮಂತ್ರಿಯವರಿಗೆ ಒತ್ತಾಯಿಸಿದ್ದಾರೆ.

೨. ಸದ್ಯ ಪೊಲೀಸರು ಮುರೂ ದೇವಸ್ಥಾನಗಳಿಗೆ ರಕ್ಷಣೆ ನೀಡಿದ್ದಾರೆ. ಹಿಂದಿನ ದಿನ ಅಂದರೆ ಜುಲೈ ೧೬ ರಂದು ಇದೇ ಪಟ್ಟಣದಲ್ಲಿ ಪೆರಿಯಾರ (ತಮಿಳುನಾಡಿನ ದಿವಂಗತ ಹಿಂದುತ್ವವಿರೋಧಿ ಹಾಗೂ ತಥಾಕಥಿತ ಸುಧಾರಣಾವಾದಿ ನಾಯಕ) ಇವರ ಪ್ರತಿಮೆಯನ್ನು ಒಡೆಯಲಾಗಿತ್ತು. ತದನಂತರ ದೇವಸ್ಥಾನಗಳ ಮೇಲೆ ದಾಳಿಯಾಗಿವೆ. ಆದ್ದರಿಂದ ಪ್ರತಿಮೆಯನ್ನು ಒಡೆದ ಬಗ್ಗೆ ಸೇಡು ತೀರಿಸಲು ದೇವಸ್ಥಾನವನ್ನು ಒಡೆಯಲಾಗಿದೆ ಎಂದು ಚರ್ಚೆ ನಡೆಯುತ್ತಿದೆ, ಇದರ ಬಗ್ಗೆ ತನಿಖೆ ನಡೆಯುತ್ತಿದೆ.

೩. ದೇವಸ್ಥಾನದ ಹತ್ತಿರ ಹಾಕಲಾಗಿದ್ದ ಸಿಸಿಟಿವಿಯ ಚಿತ್ರೀಕರಣದ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಹುಡುಕುತ್ತಿದ್ದಾರೆ. ಇದರಲ್ಲಿ ದ್ವಿಚಕ್ರದಿಂದ ಬಂದ ವ್ಯಕ್ತಿಯೋರ್ವ ದೇವಸ್ಥಾನವನ್ನು ಒಡೆದು ಬೆಂಕಿ ಹಚ್ಚಿರುವುದು ಕಂಡುಬರುತ್ತಿದೆ.