3 ಬಾರಿ ಗರ್ಭಪಾತಕ್ಕೆ ಒತ್ತಾಯ
60 ಲಕ್ಷ ರೂಪಾಯಿ ಸುಲಿಗೆ
ಮತಾಂತರಕ್ಕೆ ಒತ್ತಡ
(ಮಾಡೆಲ್ ಎಂದರೆ ಬಟ್ಟೆ, ಆಭರಣ ಅಥವಾ ಇತರ ಉತ್ಪನ್ನಗಳನ್ನು ಜಾಹೀರಾತು ಮಾಡಲು ಧರಿಸುವ ಅಥವಾ ಪ್ರದರ್ಶಿಸುವ ವ್ಯಕ್ತಿ)

ಮೀರತ್ (ಉತ್ತರ ಪ್ರದೇಶ) – ಇಲ್ಲಿನ ಹಿಂದೂ ಮಾಡೆಲ್ ಒಬ್ಬರು ಮೊಹಮ್ಮದ್ ವಸೀಮ್ ಮತ್ತು ಆತನ ಕುಟುಂಬದ ವಿರುದ್ಧ 10 ರಿಂದ 11 ವರ್ಷಗಳ ಅವಧಿಯಲ್ಲಿ ದೈಹಿಕ, ಮಾನಸಿಕ ಮತ್ತು ಆರ್ಥಿಕ ಶೋಷಣೆ ಮಾಡಿರುವ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಮೇಲೆ ‘ನಿಕಾಹ್’ (ಇಸ್ಲಾಮಿಕ್ ವಿವಾಹ) ಮಾಡಿಕೊಳ್ಳುವಂತೆ ಒತ್ತಡ ಹೇರಲಾಗಿತ್ತು ಎಂದು ಸಂತ್ರಸ್ತ ಹಿಂದೂ ಯುವತಿ ಹೇಳಿದ್ದಾರೆ. ಆಕೆಯ ದೂರಿನ ಮೇರೆಗೆ ಮೀರತ್ ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದ್ದಾರೆ.
1. ಸಂತ್ರಸ್ತ ಹಿಂದೂ ಯುವತಿ ಮೀರತ್ ನ ಸರ್ಧಾನ ನಿವಾಸಿಯಾಗಿದ್ದಾರೆ. 2015-16ರಲ್ಲಿ ದೆಹಲಿ ಮತ್ತು ಮುಂಬಯಿನಲ್ಲಿ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದಾಗ ಆಕೆ ವಸೀಮ್ ನನ್ನು ಭೇಟಿಯಾಗಿದ್ದಳು. ವಸೀಮ್ ಆಕೆಗೆ ಚಲನಚಿತ್ರ ನಟಿಯಾಗುವ ಆಮಿಷವೊಡ್ಡಿ ಸಂಬಂಧ ಬೆಳೆಸಿದ್ದನು.
2. ತಾನು 3 ಬಾರಿ ಗರ್ಭಿಣಿಯಾಗಿದ್ದೆ; ಆದರೆ ವಸೀಮ್ ಬಲವಂತವಾಗಿ ಗರ್ಭಪಾತಕ್ಕೆ ಒತ್ತಾಯಿಸಿದನು. ಅಲ್ಲದೆ ಮತಾಂತರಗೊಳ್ಳುವಂತೆಯೂ ಒತ್ತಡ ಹೇರಿದ್ದನು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
3. ಆಕೆಯ ವೃತ್ತಿಜೀವನವನ್ನು (ಕೆರಿಯರ್) ರೂಪಿಸಲು ಸಹಾಯ ಮಾಡುವ ಭರವಸೆ ನೀಡಿ ಆರೋಪಿ ಆಕೆಯ ಆರ್ಥಿಕ ಶೋಷಣೆಯನ್ನೂ ಮಾಡಿದ್ದಾನೆ. ಆತ ಆಕೆಯಿಂದ ಅಂದಾಜು 50 ರಿಂದ 60 ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾನೆ. ಸಂತ್ರಸ್ತೆ ಈ ಬಗ್ಗೆ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ