
ನವದೆಹಲಿ – ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ಇದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ. ಈ ದಾಸ್ತಾನಿನಲ್ಲಿ ಪೆಟ್ರೋಲಿಯಂ ದಾಸ್ತಾನು, ರಿಫೈನರಿ ದಾಸ್ತಾನು ಮತ್ತು ವಾಣಿಜ್ಯ ದಾಸ್ತಾನುಗಳು ಸೇರಿವೆ. ಅವರು ಮಾತನಾಡುತ್ತಾ, ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೂ ದೇಶದ ತೈಲ ಪೂರೈಕೆ ಸಂಪೂರ್ಣ ಸುರಕ್ಷಿತವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ದೀರ್ಘಕಾಲದವರೆಗೆ ಗರಿಷ್ಠ ಮಟ್ಟದಲ್ಲಿ ಇರುವುದಿಲ್ಲ. ಆದಾಗ್ಯೂ ಮಧ್ಯಪ್ರಾಚ್ಯದ ಸಂಘರ್ಷವು ನಿರೀಕ್ಷೆಗಿಂತ ಹೆಚ್ಚು ಕಾಲ ಮುಂದುವರಿದರೆ, ಸವಾಲುಗಳು ಬದಲಾಗಬಹುದು. ಆದ್ದರಿಂದ ಸರಕಾರಿ ತೈಲ ಸಂಸ್ಥೆಗಳು ದೀರ್ಘಾವಧಿಯ ಸುರಕ್ಷತೆಗಾಗಿ ಕ್ರಮಗಳನ್ನು ಕೈಗೊಳ್ಳಲು ಕೆಲಸ ಮಾಡುತ್ತಿದ್ದು, ಇದರಿಂದ ಇಂಧನದ ಮೇಲಿನ ನಮ್ಮ ಅವಲಂಬನೆ ಕಡಿಮೆಯಾಗಲಿದೆ.
ತೈಲ ಸಂಸ್ಥೆಗಳಿಗೆ ಪ್ರತಿದಿನ 600 ರಿಂದ 700 ಕೋಟಿ ರೂಪಾಯಿಗಳ ನಷ್ಟವಾಗುತ್ತಿದೆ! – ಪ್ರವೀಣ್ ಖನೂಜಾ
ಇನ್ನೊಂದೆಡೆ ಪೆಟ್ರೋಲಿಯಂ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪ್ರವೀಣ್ ಖನೂಜಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಲ್.ಪಿ.ಜಿ. ಹೊರತುಪಡಿಸಿ, ತೈಲ ಕಂಪನಿಗಳಿಗೆ ಪ್ರಸ್ತುತ ಡೀಸೆಲ್ ಮೇಲೆ ಪ್ರತಿ ಲೀಟರ್‌ಗೆ 30 ರೂಪಾಯಿ ಮತ್ತು ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 6 ರೂಪಾಯಿ (ಒಟ್ಟು 600 ರಿಂದ 700 ಕೋಟಿ ರೂಪಾಯಿ) ನಷ್ಟ ಉಂಟಾಗುತ್ತಿದೆ ಎಂದು ತಿಳಿಸಿದರು.
ಎಲ್.ಪಿ.ಜಿ. ಸಂಪರ್ಕಗಳು 14 ಕೋಟಿಯಿಂದ 33 ಕೋಟಿಗಿಂತಲೂ ಅಧಿಕವಾಗಿವೆ!
ಪೆಟ್ರೋಲಿಯಂ ಸಚಿವರು ಮಾತನಾಡಿ, ದೇಶದಲ್ಲಿ 2014 ನೇ ವರ್ಷದಲ್ಲಿ ಅಂದಾಜು 14 ಕೋಟಿ ಎಲ್.ಪಿ.ಜಿ. ಸಂಪರ್ಕಗಳು ಇದ್ದವು, ಅವು ಈಗ ಹೆಚ್ಚಾಗಿ 33 ಕೋಟಿಗಿಂತಲೂ ಅಧಿಕವಾಗಿವೆ. ದೇಶದ ಮೂಲಭೂತ ಇಂಧನ ಮೂಲಸೌಕರ್ಯಗಳನ್ನು ಸಕ್ಷಮಗೊಳಿಸಲು ಎಲ್.ಪಿ.ಜಿ. ಸಂಗ್ರಹಣಾ ಸಾಮರ್ಥ್ಯ ಮತ್ತು ದೇಶೀಯ ತೈಲ ಪರಿಶೋಧನೆ ಮೇಲಿನ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಇದರೊಂದಿಗೆ ಅಂಡಮಾನ್ ಬೆಸಿನ್ ಒಳಗೊಂಡಂತೆ ವಿವಿಧ ದೇಶೀಯ ಉತ್ಖನನ ಯೋಜನೆಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಲಾಗಿದೆ.
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ