ಭಾರತ ಮತ್ತು ಪಾಕಿಸ್ತಾನದೊಂದಿಗಿನ ವಿವಾದಗಳನ್ನು ಮಾತುಕತೆಯ ಮೂಲಕ ಪರಿಹರಿಸಲು ಮನವಿ

ಬೀಜಿಂಗ್ (ಚೀನಾ) – ಭಾರತ, ರಷ್ಯಾ ಮತ್ತು ಚೀನಾ ನಡುವಿನ ಬಲವಾದ ಸಂಬಂಧಗಳು ಜಾಗತಿಕ ಭದ್ರತೆ ಮತ್ತು ಸ್ಥಿರತೆಗೆ ಮುಖ್ಯವಾಗಿವೆ ಮತ್ತು ಮೂರೂ ದೇಶಗಳು ಇದನ್ನು ಒಪ್ಪುತ್ತವೆ ಎಂಬ ನಿಲುವನ್ನು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ನಿಯಮಿತ ಪತ್ರಿಕಾಗೋಷ್ಠಿಯಲ್ಲಿ ಮಂಡಿಸಿದರು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇತ್ತೀಚೆಗೆ ಭಾರತ, ರಷ್ಯಾ ಮತ್ತು ಚೀನಾ ನಡುವಿನ ಸಂಬಂಧಗಳ ಮಹತ್ವವನ್ನು ಒತ್ತಿ ಹೇಳಿದ್ದರು. ಆ ಹಿನ್ನೆಲೆಯಲ್ಲಿ ಚೀನಾ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಲಿನ್ ಜಿಯಾನ್ ಮಾತು ಮುಂದುವರಿಸುತ್ತಾ, ಭಾರತ, ರಷ್ಯಾ ಮತ್ತು ಚೀನಾ ಮೂರೂ ಉದಯೋನ್ಮುಖ ಆರ್ಥಿಕತೆಗಳಾಗಿದ್ದು, ಅವುಗಳ ನಡುವಿನ ಉತ್ತಮ ಸಂಬಂಧಗಳು ಸಂಬಂಧಿತ ದೇಶಗಳಿಗೆ ಮಾತ್ರವಲ್ಲದೆ ಪ್ರಾದೇಶಿಕ ಮತ್ತು ಜಾಗತಿಕ ಹಿತಾಸಕ್ತಿಗಳಿಗೂ ಅವಶ್ಯಕವಾಗಿವೆ ಎಂದರು. ತ್ರಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಚೀನಾವು ಭಾರತ ಮತ್ತು ರಷ್ಯಾದೊಂದಿಗೆ ಮಾತುಕತೆಯನ್ನು ಕಾಯ್ದುಕೊಳ್ಳಲು ಸಿದ್ಧವಾಗಿದೆ. ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ ಸಾಮಾನ್ಯವಾಗಿ ಸ್ಥಿರವಾಗಿದೆ. ಎರಡೂ ದೇಶಗಳ ನಡುವಿನ ಸಂವಹನ ಕಾರ್ಯವಿಧಾನವು ಕಾರ್ಯನಿರ್ವಹಿಸುತ್ತಿದ್ದು, ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬೇಕು. ಭಾರತ ಮತ್ತು ಚೀನಾ ಪರಸ್ಪರ ಸ್ಪರ್ಧಿಗಳಾಗಿ ನೋಡದೆ, ಸಹಕಾರ ಪಾಲುದಾರರಾಗಿ ನೋಡಬೇಕು. ಭಾರತ-ಪಾಕಿಸ್ತಾನ ನಡುವಿನ ಭಿನ್ನಾಭಿಪ್ರಾಯಗಳನ್ನು ಸಹ ಸಂವಾದ ಮತ್ತು ಚರ್ಚೆಯ ಮೂಲಕ ಪರಿಹರಿಸಬೇಕು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara