ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!

ಕೊಳಚೆ ನೀರು ನಿರ್ವಹಣೆಯಲ್ಲಿ ವಿಫಲವಾದ ಪುರಸಭೆ: ಹಿಂದೂಗಳ ಆಕ್ರೋಶ

(ಈ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜಸ್ಥಿತಿ ತಿಳಿಸುವುದಾಗಿದೆ ! – ಸಂಪಾದಕರು)

ಕಾರವಾರ – ‘ದಕ್ಷಿಣ ಕಾಶಿ’ ಎಂದೇ ಜಗತ್ಪ್ರಸಿದ್ಧವಾಗಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ತೀರ್ಥಕ್ಷೇತ್ರದಲ್ಲಿ ಅನಾಹುತ ಸಂಭವಿಸಿದೆ. ಇಲ್ಲಿನ ಶ್ರೀ ಮಹಾಬಲೇಶ್ವರ ದೇವಸ್ಥಾನದ ‘ಆತ್ಮಲಿಂಗ’ ಇರುವ ಗರ್ಭಗುಡಿಗೆ ಕೊಳಚೆ ನೀರು ನುಗ್ಗಿದೆ. ಧಾರಾಕಾರ ಮಳೆಯಿಂದಾಗಿ ಪವಿತ್ರ ಆತ್ಮಲಿಂಗದ ಜಾಗ ಸಂಪೂರ್ಣವಾಗಿ ದುರ್ವಾಸನೆಯಿಂದ ಕೂಡಿದ ಕಪ್ಪು ನೀರಿನಿಂದ ತುಂಬಿಕೊಂಡಿತ್ತು. ಅರ್ಚಕರು ಬಕೆಟ್ ಗಳ ಸಹಾಯದಿಂದ ತಕ್ಷಣವೇ ಎಲ್ಲಾ ನೀರನ್ನು ಹೊರಹಾಕಲು ಹರಸಾಹಸ ಪಟ್ಟರು. ಅರ್ಚಕರು, ಸ್ಥಳೀಯರು ಹಾಗೂ ಸಾವಿರಾರು ಭಕ್ತರು ‘ದೇವಸ್ಥಾನದ ಇತಿಹಾಸದಲ್ಲಿ ಇಂತಹ ಕೆಟ್ಟ ಪರಿಸ್ಥಿತಿ ಎಂದೂ ಬಂದಿರಲಿಲ್ಲ’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ದೇವಸ್ಥಾನದಿಂದ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದ್ದರೂ ಕೊಳಚೆ ನೀರನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದ ಪುರಸಭೆ ಹಾಗೂ ಅದರ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಕೇವಲ ತಾಂತ್ರಿಕ ದೋಷವಲ್ಲ, ದೇವಸ್ಥಾನದ ಇತಿಹಾಸದಲ್ಲಿಯೇ ನಡೆದ ದೊಡ್ಡ ಅನಾಹುತ. ಪವಿತ್ರ ಕ್ಷೇತ್ರವನ್ನು ಈ ರೀತಿ ನಿರ್ಲಕ್ಷಿಸಿರುವುದಕ್ಕೆ ಆಡಳಿತಾಧಿಕಾರಿಗಳೇ ನೇರ ಹೊಣೆ. ಇದಕ್ಕೆ ತಕ್ಷಣ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ಅರ್ಚಕರು ಎಚ್ಚರಿಕೆ ನೀಡಿದ್ದಾರೆ.

ಗರ್ಭಗುಡಿಯಿಂದ ಕೊಳಚೆ ನೀರನ್ನು ಹೊರತೆಗೆದು ತಾತ್ಕಾಲಿಕವಾಗಿ ಗರ್ಭಗುಡಿಯನ್ನು ಸ್ವಚ್ಛಗೊಳಿಸಲಾಗಿದೆ. ಆದರೆ, ಮಳೆ ಹೀಗೆಯೇ ಮುಂದುವರಿದರೆ ಮತ್ತೆ ಇದೇ ಪರಿಸ್ಥಿತಿ ನಿರ್ಮಾಣವಾಗುವ ಆತಂಕ ವ್ಯಕ್ತವಾಗುತ್ತಿದೆ.

ಸಂಪಾದಕೀಯ ನಿಲುವು

  • ಹಿಂದೂಗಳ ಶ್ರದ್ಧಾಕೇಂದ್ರವಾದ ದೇವಸ್ಥಾನಗಳಲ್ಲಿ ಇಂತಹ ಅನಾಹುತ ನಡೆಯುತ್ತಿರುವುದು ಆಕ್ರೋಶದ ಸಂಗತಿಯೇ ಸರಿ, ಇದರ ಜೊತೆಗೆ ಇದು ಆಡಳಿತಾತ್ಮಕ ನಿರ್ಲಕ್ಷ್ಯದ ಪರಮಾವಧಿಯಾಗಿದೆ. ಈ ಪ್ರಮಾದಕ್ಕೆ ಹೊಣೆಗಾರಿಕೆ ನಿಗದಿಪಡಿಸಿ ಸಂಬಂಧಪಟ್ಟವರನ್ನು ವಜಾಗೊಳಿಸಬೇಕು.
  • ಇಂತಹ ಘಟನೆ ಯಾವುದಾದರೂ ಮಸೀದಿಗೆ ಸಂಬಂಧಿಸಿದಂತೆ ನಡೆದಿದ್ದರೆ, ಈ ಹೊತ್ತಿಗೆ ಅಲ್ಲಿನ ಆಡಳಿತಾಧಿಕಾರಿಗಳ ವಿರುದ್ಧ ಫತ್ವಾ ಹೊರಡಿಸಲಾಗುತ್ತಿತ್ತು ಮತ್ತು ಸರಕಾರಿ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗುತ್ತಿತ್ತು!