ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು
‘ಹಿಂದೂಗಳನ್ನು ಬಿಟ್ಟು ಬೇರೆ ಧರ್ಮದ ಒಬ್ಬ ವ್ಯಕ್ತಿಯೂ ‘ಸರ್ವ ಧರ್ಮಸಮಭಾವ ಎಂದು ಹೇಳುವು ದಿಲ್ಲ. ‘ಸರ್ವಧರ್ಮಸಮಭಾವ ಎಂದು ಹೇಳುವ ಹಿಂದೂಗಳ ಸ್ಥಿತಿ ದಯನೀಯವಾಗಿದ್ದರೆ, ಹೇಳದಿರುವ ಇತರ ಧರ್ಮದಲ್ಲಿನ ಎಲ್ಲರ ಸ್ಥಿತಿ ಹಿಂದೂಗಳಿಗಿಂತ ತುಂಬಾ ಉತ್ತಮವಾಗಿದೆ.
‘ಸಮಸ್ತ ರೋಗಗಳಿಗೆ ಒಂದೇ ಔಷಧಿ ಇರುವುದಿಲ್ಲ ಅಥವಾ ಎಲ್ಲ ಅಪರಾಧಕ್ಕೂ ಒಂದೇ ಕಾನೂನು ಇರುವುದಿಲ್ಲ; ಆದರೆ ರಾಷ್ಟ್ರ ಮತ್ತು ಧರ್ಮ ಇವುಗಳ ಎಲ್ಲ ಸಮಸ್ಯೆಗಳಿಗೆ ಮಾತ್ರ ಒಂದೇ ಉತ್ತರ ಇದೆ ಮತ್ತು ಅದೆಂದರೆ ಹಿಂದೂ ರಾಷ್ಟ್ರದ ಸ್ಥಾಪನೆ !
ಪಾಶ್ಚಾತ್ಯರ ಹಾಸ್ಯಾಸ್ಪದವಾದ ಶಿಕ್ಷಣ ಪದ್ಧತಿ !
‘ಪಾಶ್ಚಾತ್ಯರ ಶಿಕ್ಷಣವು ಯಾವುದೇ ಸಮಸ್ಯೆಯ ಮೂಲ ಕಾರಣದವರೆಗೆ, ಉದಾ. ಪ್ರಾರಬ್ಧ, ಕೆಟ್ಟ ಶಕ್ತಿ, ಕಾಲಮಹಾತ್ಮೆ ಇವುಗಳ ತನಕ ತಲುಪುವುದಿಲ್ಲ. ಕ್ಷಯ ರೋಗಿಗೆ ಕ್ಷಯರೋಗದ ಜಂತುಗಳನ್ನು ನಾಶಗೊಳಿಸುವ ಔಷಧಿಯನ್ನು ನೀಡದೇ ಕೇವಲ ಕೆಮ್ಮಿನ ಔಷಧಿಯನ್ನು ಕೊಡುವಂತೆ ಅವರ ಉಪಾಯಗಳಿರುತ್ತವೆ !
‘ಅನಂತಕೋಟಿ ಬ್ರಹ್ಮಾಂಡನಾಯಕನ ಬಗ್ಗೆ ಇತರ ಪಂಥಗಳಲ್ಲಿರುತ್ತದೆ, ಹಾಗೆ ಕೇವಲ ಒಂದು ಪುಸ್ತಕದಲ್ಲಿ ವರ್ಣಿಸಲು ಸಾಧ್ಯವಿದೆಯೇ ? ಅಂತೆಯೇ ಹಿಂದೂ ಧರ್ಮದಲ್ಲಿ ಸಾವಿರಾರು ಗ್ರಂಥಗಳಿರುತ್ತವೆ. ಅವುಗಳಲ್ಲಿಂದ ಸಂಪೂರ್ಣ ಮಾಹಿತಿ ದೊರಕುತ್ತದೆ.
ಢೋಂಗಿ ಬುದ್ಧಿಜೀವಿಗಳು !
ಬುದ್ಧಿಜೀವಿಗಳು ‘ಡಾಕ್ಟರರು, ನ್ಯಾಯವಾದಿಗಳು ಹೇಳುವುದನ್ನು ತಕ್ಷಣ ಕೇಳುತ್ತಾರೆ. ಅವರಿಗೆ ‘ಏಕೆ ? ಹೇಗೆ ? ಎಂದು ಕೇಳುವುದಿಲ್ಲ; ಆದರೆ ಸಂತರು ಏನಾದರೂ ಹೇಳಿದರೆ ಮಾತ್ರ ಬುದ್ದಿಜೀವಿಗಳಿಗೆ ಮನಸ್ಸಿನಲ್ಲಿ ‘ಏಕೆ ? ಹೇಗೆ ?, ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ !
ರಾಜಕೀಯ ಪಕ್ಷದ ನೇತಾರರು ಮತ್ತು ಕಾರ್ಯಕರ್ತರು ಯಾರೇ ಹಣ ಅಥವಾ ಹುದ್ದೆಯನ್ನು ನೀಡಿದರೆ ಇನ್ನೊಂದು ಪಕ್ಷಕ್ಕೆ ಹೋಗುತ್ತಾರೆ. ತದ್ವಿರುದ್ಧ ಭಕ್ತನು ದೇವರ ಪಕ್ಷವನ್ನು ಬಿಟ್ಟು, ದೇವರ ಚರಣದಲ್ಲಿರುವ ಜಾಗವನ್ನು ಬಿಟ್ಟು ಬೇರೆಕಡೆ ಎಲ್ಲಿಯೂ ಹೋಗುವುದಿಲ್ಲ.
ಯಾವುದಾರೊಂದು ರೋಗವು ಬರಬಾರದೆಂದು ಲಸಿಕೀಕರಣ (ವ್ಯಾಕ್ಸಿನೇಶನ್) ಮಾಡಲಾಗುತ್ತದೆ. ಹಾಗೆಯೇ ಮೂರನೇ ಮಹಾ ಯುದ್ಧದಲ್ಲಿ ಉಳಿಯುವುದಕ್ಕಾಗಿ ಸಾಧನೆಯೇ ಲಸಿಕೆಯಾಗಿದೆ.
ಮೊದಲು ಮೊಗಲರು ನಂತರ ಆಂಗ್ಲರು ಮತ್ತು ಈಗ ರಾಷ್ಟ್ರಪ್ರೇಮವಿಲ್ಲದ ವಿವಿಧ ರಾಜಕೀಯ ಪಕ್ಷ ಇವುಗಳಿಂದ ದೇಶವು ರಸಾತಳಕ್ಕೆ ಹೋಗಿದೆ.
ಹಿಂದೂ ರಾಷ್ಟ್ರದಲ್ಲಿ ‘ತನ್ನಲ್ಲಿಯೇ ಅಧಿಕಾರವಿರಬೇಕು, ಎಂಬ ವಿಚಾರದ ಸ್ವಾರ್ಥಿ ಮತ್ತು ಅಹಂಭಾವದ ರಾಜಕಾರಣಿಗಳು ಇರುವುದಿಲ್ಲ, ಮನುಕುಲಕ್ಕೆ ಸಾಧನೆಯನ್ನು ಮಾಡಿ ಈಶ್ವರಪ್ರಾಪ್ತಿ ಮಾಡಲಿ, ಈ ವಿಚಾರದ ಧರ್ಮಸೇವಕರು ಮತ್ತು ರಾಷ್ಟ್ರಸೇವಕರು ಇರುವರು.
ರಾಜಕೀಯ ಪಕ್ಷ ಅಥವಾ ಯಾವುದಾದರೊಂದು ದೊಡ್ಡ ಸಂಘಟನೆಯ ಹುದ್ದೆಯನ್ನು ಪಡೆಯುವುದಕ್ಕಿಂತ ಭಗವಂತನ ಭಕ್ತನಾಗುವುದು ಒಳ್ಳೆಯದು.
– (ಪರಾತ್ಪರ ಗುರು) ಡಾ. ಆಠವಲೆ