‘ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ !

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ಡೋವಲ್ ಇವರು ಚೀನಾದ ವಿದೇಶಾಂಗ ಸಚಿವರೊಂದಿಗೆ ಚರ್ಚಿಸಿದ ನಂತರ ಕಳೆದ ಒಂದು ತಿಂಗಳಿಂದ ಗಡಿಯಲ್ಲಿ ಸಂಘರ್ಷ ಮಾಡುತ್ತಿದ್ದ ಚೀನಾ ತನ್ನ ಸೈನ್ಯವನ್ನು ೨ ಕಿಲೋಮೀಟರ್ ಹಿಂದಕ್ಕೆ ಸರಿಸಿದೆ. ಆದರೂ ವಿಸ್ತಾರವಾದಿ ಹಾಗೂ ಕಪಟಿ ಚೀನಾದ ಈ ಕೃತಿಯಿಂದ ಯಾರೂ ಸಮಾಧಾನ ಪಡುವ ಹಾಗಿಲ್ಲ. ಭಾರತ ಮತ್ತು ಸಂಪೂರ್ಣ ಜಗತ್ತು ಚೀನಾವನ್ನು ಎಲ್ಲ ದಿಕ್ಕುಗಳಲ್ಲಿ ಮುತ್ತಿಗೆ ಹಾಕಿರುವುದರಿಂದ ಅದು ಬೇರೆ ಪರ್ಯಾಯವಿಲ್ಲದೆ ಮಾಡಿದ ತಾತ್ಕಾಲಿಕ ಕೃತಿ ಇದು; ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ. ಜಗತ್ತು ಮೂರನೆ ಮಹಾಯುದ್ಧದ ಹೊಸ್ತಿಲಿನಲ್ಲಿ ನಿಂತಿದೆ ಹಾಗೂ ಜಗತ್ತಿನ ಎಲ್ಲ ದೇಶಗಳೊಂದಿಗೆ ಗಡಿಯಲ್ಲಿ ಜಗಳವಾಡುವ ಚೀನಾ ಇಂದು ಅದರ ಕೇಂದ್ರ ಬಿಂದುವಾಗಿದೆ.

ವಿಸ್ತಾರವಾದಿ ಮತ್ತು ವಿಶ್ವಾಸಘಾತಕ

ಭಾರತ ಸ್ವತಂತ್ರವಾದಾಗ, ಚೀನಾ ಮತ್ತು ನಮ್ಮ ಗಡಿಯಲ್ಲಿ ಟಿಬೇಟ್, ಭೂತಾನ, ನೇಪಾಳ ಮುಂತಾದ ಪ್ರಾಚೀನ ಕಾಲದಿಂದಲೂ ಹಿಂದೂ ಸಂಸ್ಕೃತಿಯನ್ನು ಪಾಲಿಸುವ ರಾಷ್ಟ್ರಗಳಿದ್ದವು. ೧೯೫೯ ರಲ್ಲಿ ಚೀನಾ ಭಾರತದ ಮಿತ್ರರಾಷ್ಟ್ರವಾಗಿರುವ ಟಿಬೇಟ್ ತನ್ನ ಪ್ರದೇಶವೆಂದು ಘೋಷಿಸಿತು. ೧೯೬೨ ರಲ್ಲಿ ಚೀನಾ ಭಾರತದ ಇನ್ನೊಂದು ಪ್ರದೇಶವನ್ನು ವಶಪಡಿಸಿಕೊಂಡು ಅದನ್ನು ‘ಅಕ್ಸಾಯೀ ಚೀನಾವೆಂದು ಹೇಳಿತು. ೨೦೧೭ ರಲ್ಲಿ ಡೋಕ್ಲಾಮ್‌ಅನ್ನು ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿತು. ಅರುಣಾಚಲ ಪ್ರದೇಶದ ತವಾಂಗ ಪ್ರದೇಶವನ್ನು ಚೀನಾ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಮೇಲಿನ ಎಲ್ಲ ಪ್ರದೇಶಗಳು ಕೆಲವೊಮ್ಮೆ ನಮಗೆ ಚೀನಾದ ನಕಾಶೆಯಲ್ಲಿ ನೋಡಲು ಸಿಗುತ್ತವೆ. ನೇಪಾಳದಲ್ಲಿಯೂ ಬಿರುಕುಂಟು ಮಾಡಿ ಅದು ಒಂದು ಗುಂಪನ್ನು ಸಂಪೂರ್ಣ ತನ್ನ ವಶದಲ್ಲಿಟ್ಟುಕೊಂಡಿರುವುದರಿಂದ ನೇಪಾಳ ಕೂಡ ಈಗ ನಮ್ಮೊಂದಿಗೆ ವೈರಿಗಳ ಹಾಗೆ ವರ್ತಿಸುತ್ತಿದೆ. ಈಗ ಭಾರತದ ಲಡಾಖ್‌ನ ಮೇಲೆ ಕಣ್ಣಿಟ್ಟಿದೆ. ಅಲ್ಲಿನ ಗಲ್ವಾನ ಕಣಿವೆಯಲ್ಲಿ ಮೋಸದಿಂದ ಮಾಡಿದ ಆಕ್ರಮಣದಲ್ಲಿ ನಮ್ಮ ೨೦ ಸೈನಿಕರ ಬಲಿದಾನದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗಡಿಪ್ರದೇಶಕ್ಕೆ ಹೋಗಿ ‘ಈಗ ವಿಸ್ತಾರವಾದದ ಯುಗ ಮುಗಿಯಿತು ಎಂದು ಎಚ್ಚರಿಕೆ ಕೊಟ್ಟು ಎಲ್ಲರಲ್ಲಿ ಒಂದು ರೀತಿಯ ಆತ್ಮವಿಶ್ವಾಸವನ್ನು ನಿರ್ಮಾಣ ಮಾಡಿದರು; ಆದರೆ ‘ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ ಎನ್ನುವ ಗಾದೆಯ ಹಾಗೆ ಚೀನಾಗೆ ದೊಡ್ಡ ಪೆಟ್ಟು ಕೊಡದೆ ಅದರ ಕಿರುಕುಳ ನಿಲ್ಲುವುದಿಲ್ಲ. ಆದ್ದರಿಂದ ಗಡಿಯಲ್ಲಿ ಸೈನಿಕರು ಸ್ಥೂಲದಲ್ಲಿ ವೀರತ್ವವನ್ನು ತೋರಿಸಿ ಹಾಗೂ ಸರಕಾರವನ್ನು ಮುತ್ಸದ್ದಿತನದಿಂದ ಅಂತರರಾಷ್ಟ್ರೀಯ ಧೋರಣೆಯನ್ನು ಅವಲಂಬಿಸಿ ಸರಕಾರ ಅದನ್ನು ದಂಡಿಸಬೇಕಾಗಿದೆ, ಅದೇ ರೀತಿ ಜನಸಾಮಾನ್ಯರು ಕೂಡ ಅವರ ತಮ್ಮ ತಮ್ಮ ಕೃತಿಯಿಂದಲೂ ಸರಕಾರಕ್ಕೆ ಬೆಂಬಲ ನೀಡಬೇಕಾಗಿದೆ. ‘ವಿಜಯವೇ ಎಲ್ಲ ಯುದ್ಧಗಳ ಅಂತಿಮ ಧ್ಯೇಯವಾಗಿರುತ್ತದೆ, ಎಂದು ಧರ್ಮಶಾಸ್ತ್ರ ಹೇಳುತ್ತದೆ. ಆದ್ದರಿಂದ ಸೈನ್ಯ ಮತ್ತು ಸರಕಾರದ ಪ್ರಯತ್ನದಲ್ಲಿ ಜನರು ಸಹ ಭಾಗವಹಿಸುವುದು ಮಹತ್ವದ್ದಾಗಿದೆ. ಅಮೇರಿಕಾ ಸಹಿತ ಸಂಪೂರ್ಣ ಜಗತ್ತಿನ ಕೋಪ ಚೀನಾದ ಮೇಲಿರುವಾಗ ಅದನ್ನು ಸಂಪೂರ್ಣವಾಗಿ ಅಡಕತ್ತರಿಯಲ್ಲಿ ಸಿಲುಕಿಸಲು ಭಾರತಕ್ಕೆ ಸಾಧ್ಯವಿದೆ, ಮಾತ್ರವಲ್ಲದೇ  ಅದಕ್ಕಾಗಿ ಸೂಕ್ತ ಸಮಯವಾಗಿದೆ.

ಸಂಪೂರ್ಣ ಬಹಿಷ್ಕಾರದ ಪ್ರಕ್ರಿಯೆಯನ್ನು ಅವಲಂಬಿಸಿ !

ಯಾವಾಗ ಸಂಪೂರ್ಣ ದೇಶ ಒಗ್ಗಟ್ಟಾಗಿ ಅದರ ಮನಸ್ಸಿನಲ್ಲಿ ಶತ್ರುರಾಷ್ಟ್ರದ ವಿಷಯದಲ್ಲಿ ಅತಿಸಾಹಸದಿಂದ ವಿರೋಧವಾಗುತ್ತದೆಯೊ, ಆಗ ಶತ್ರುರಾಷ್ಟ್ರದ ಪರಾಭವ ಆರಂಭವಾಗಿರುತ್ತದೆ. ಆಂಗ್ಲರು ಭಾರತದಿಂದ ತೊಲಗಲುವಲ್ಲಿನ ಅನೇಕ ಕಾರಣಗಳಲ್ಲಿ ಭಾರತದಲ್ಲಿನ ಜನಸಾಮಾನ್ಯರ ಮನಸ್ಸಿನಲ್ಲಿ ಅವರ ವಿಷಯದಲ್ಲಿ ಉತ್ಪನ್ನವಾಗಿದ್ದ ಕ್ರೋಧವು ಒಂದಾಗಿತ್ತು. ಚೀನಾದ ವಸ್ತುಗಳ ಮೇಲಿನ ಬಹಿಷ್ಕಾರದ ಸ್ವರೂಪವು ಆ ದೃಷ್ಟಿಯಲ್ಲಿ ಹೆಚ್ಚು ವ್ಯಾಪಕವಾಗಿ ಹರಡಿತು, ಆದ್ದರಿಂದ ಅದರ ಪರಿಣಾಮವು ಹೆಚ್ಚಾಗುವುದು. ಸರಕಾರ ಚೀನಾ ಕಂಪನಿಗಳಿಗೆ ಹಾಕಿದ ನಿರ್ಬಂಧದ ಹೆಜ್ಜೆಯೂ ಸ್ವಾಗತಾರ್ಹವಾಗಿದೆ. ಈಗ ಜನರೇ ಅದಕ್ಕೆ ಹೆಚ್ಚೆಚ್ಚು ಬೆಂಬಲ ಕೊಟ್ಟು ಚೀನಾದ ವಸ್ತುಗಳನ್ನು ಕ್ರಮೇಣ ಸಂಪೂರ್ಣ ತ್ಯಜಿಸಿ ಚೀನಾವನ್ನು ಆರ್ಥಿಕ ದಿಗ್ಬಂಧನದಲ್ಲಿ ಸಿಲುಕಿಸುವ ಆಂದೋಲನವನ್ನು ಶೇ. ೧೦೦ ರಷ್ಟು ಯಶಸ್ವಿಗೊಳಿಸುವ ಅವಶ್ಯಕತೆಯಿದೆ. ಯಾರಿಗೆ ಚೀನಾದ ವಸ್ತುಗಳು ಅತ್ಯಾವಶ್ಯಕವೆನಿಸುತ್ತದೆಯೊ, ಅಂತಹ ‘ಬಜಾಜ್ ಅಥವಾ ‘ಮಾರುತಿಯಂತಹ ಉದ್ಯಮಿಗಳಿಗೂ ಗದರಿಸಿ ಹೇಳುವಷ್ಟು ಸಿದ್ಧತೆ ನಾಗರಿಕರಲ್ಲಿ ನಿರ್ಮಾಣವಾಗಬೇಕು. ಸರಕಾರ ಕೂಡ ನಾವು ಯಾವ ವಸ್ತುಗಳಿಗೆ ಚೀನಾವನ್ನು ಅವಲಂಬಿಸಿರುತ್ತೇವೆಯೊ, ಅವುಗಳ ಪರ್ಯಾಯವನ್ನು ಭಾರತದಲ್ಲಿ ಉತ್ಪನ್ನವಾಗುವಂತೆ ಮಾಡಲು ಪ್ರಯತ್ನಿಸಬೇಕು. ಕೋಲಕಾತಾದಲ್ಲಿ ಚೀನಾ ಕಂಪನಿಗೆ ಸಂಬಂಧಿಸಿದ ಇನ್ನೊಂದು ಕಂಪನಿಯು ‘ಝೊಮೆಟೋದಲ್ಲಿ ಹೂಡಿಕೆ ಮಾಡಿದ್ದಕ್ಕಾಗಿ ಝೊಮೆಟೋದ ಕಾರ್ಮಿಕರು ಝೊಮೆಟೋದ ಟೀ ಶರ್ಟ್‌ಗಳನ್ನು ಸುಟ್ಟು ಹಾಕಿದರು ಮತ್ತು ಗ್ರಾಹಕರಿಗೂ ಝೊಮೆಟೋದ ಪದಾರ್ಥಗಳನ್ನು ಖರೀದಿಸಬಾರದೆಂದು ಕರೆ ನೀಡಿದರು. ಈ ಕೃತಿಯು ಜನಸಾಮಾನ್ಯರಿಗೆ ಪ್ರೇರಣಾದಾಯಕವಾಗಿದೆ. ‘ಚೀನಾದ ಉತ್ಪಾದನೆಗಳನ್ನು ಕಸದ ಬುಟ್ಟಿಗೆ ಹಾಕಿರಿ ಈ ‘ಟ್ವಿಟರ್ ಟ್ರೆಂಡ್ ಭಾರತದಲ್ಲಿ ಮೊದಲ ಕ್ರಮಾಂಕಕ್ಕೆ ಹೋಯಿತು ಹಾಗೂ ಲಕ್ಷಗಟ್ಟಲೆ ರಾಷ್ಟ್ರಪ್ರೇಮಿಗಳು ಚೀನಾದ ವಸ್ತುಗಳ ಮೇಲಿನ ಬಹಿಷ್ಕಾರದ ಆಂದೋಲನವನ್ನು ದೇಶದಾದ್ಯಂತ ಹಮ್ಮಿಕೊಂಡರು. ಇದೇ ರೀತಿ ಚೀನಾ ದೀಪಗಳು, ಪಟಾಕಿಗಳು ಮತ್ತು ಅನೇಕ ರೀತಿಯ ಚೀನಾದ ಆಟಿಗೆಗಳು ಮತ್ತು ಗೃಹೋಪ ಯೋಗಿ ಉತ್ಪಾದನೆಗಳನ್ನು ನಿರಾಕರಿಸುವ ಮಾನಸಿಕತೆಯನ್ನು ಪ್ರತಿಯೊಬ್ಬ ಭಾರತೀಯನು ಅಂಗೀಕರಿಸಲು ಇದೀಗ ಆದ್ಯತೆಯನ್ನು ನೀಡಬೇಕು.

ಚೀನಾಬೆಂಬಲಿತ ಸಾಮ್ಯವಾದಿಗಳ ಷಡ್ಯಂತ್ರವನ್ನು ಬುಡಮೇಲು ಮಾಡಿ !

ಭಾರತದಲ್ಲಿ ಉಗ್ರವಾದಿಗಳ ಉತ್ತೇಜನದಿಂದ ಮತಾಂಧರು ಆರಂಭಿಸಿರುವ ಗೃಹಯುದ್ಧಕ್ಕೆ ಚೀನಾಬೆಂಬಲಿತ ದೇಶಗಳಲ್ಲಿನ ಸಾಮ್ಯವಾದಿಗಳಿಂದ ದೊಡ್ಡ ಬೆಂಬಲವಿದೆ. ಕಳೆದ ವರ್ಷ ದೆಹಲಿಯ ವಿದ್ಯಾಪೀಠಗಳು ಮತ್ತು ವಿದ್ಯಾರ್ಥಿಗಳ ಮೂಲಕ ರಾಷ್ಟ್ರವಿರೋಧಿ ಕಲಹಗಳನ್ನು ಹುಟ್ಟು ಹಾಕುವಲ್ಲಿ ಚೀನಾ ಬೆಂಬಲಿತ ಭಾರತದಲ್ಲಿನ ತಥಾಕಥಿತ ಸಾಮ್ಯವಾದಿ ವಿಚಾರವಂತರು ಯಶಸ್ವಿಯಾದರು. ಕಳೆದ ೪೦ ವರ್ಷಗಳಲ್ಲಿ ಸಾಮ್ಯವಾದಿ ವಿಚಾರವಂತರು ಭಾರತದ ಹಿಂದೂಗಳ ಬುದ್ಧಿಭ್ರಷ್ಟ ಮಾಡಿ ಅವರನ್ನು ಹಿಂದೂದ್ವೇಷಿ ಹಾಗೂ ಮುಸಲ್ಮಾನ ಪ್ರೇಮಿಗಳನ್ನಾಗಿ ಮಾಡಿದರು. ಇದೇ ಸಾಮ್ಯವಾದಿ ವಿಚಾರವಂತರು ಇನ್ನೊಂದು ನಗರನಕ್ಸಲರನ್ನಾಗಿ ಮಾಡಿ ನಕ್ಸಲ್‌ವಾದಿಗಳನ್ನು ಹೆಚ್ಚಿಸುತ್ತಿದ್ದಾರೆ. ‘ನಕ್ಸಲರಿಗೆ ನೇರವಾಗಿ ಚೀನಾದಿಂದ ಹಣ ಬರುತ್ತದೆ, ಎಂಬುದು ಈಗ ರಹಸ್ಯವಾಗಿ ಉಳಿದಿಲ್ಲ. ನಾಳೆ ಚೀನಾ ಭಾರತದ ಮೇಲೆ ದೊಡ್ಡ ಆಕ್ರಮಣ ಮಾಡಿದರೂ ಈ ಸಾಮ್ಯವಾದಿ ವಿಚಾರವಂತರಿಗೆ ಏನೂ ಅನಿಸುವುದಿಲ್ಲ; ಬಹುಶಃ ಅದೇ ಕೆಲವರ ಅಪೇಕ್ಷೆಯೂ ಆಗಿರಬಹುದು, ಇಂತಹ ಬಿಕ್ಕಟ್ಟಿನ ಸ್ಥಿತಿ ನಿರ್ಮಾಣ ಆಗಿದೆ. ದೇಶವಿರೋಧಿ ವಿಚಾರವನ್ನು ಹಬ್ಬಿಸುವ ಹಾಗೂ ದೇಶದ್ರೋಹಿ ಕಾರ್ಯಾಚರಣೆಯನ್ನು ಉತ್ತೇಜಿಸುವ ಈ ಸಾಮ್ಯವಾದಿ ವಿಚಾರವಾದಿಗಳನ್ನು ಸಾಮಾಜಿಕ ಮಾಧ್ಯಮಗಳಿಂದ ವೈಚಾರಿಕ ಪ್ರತಿವಾದ ಮಾಡಿ ಅವರಿಗೆ ಸರಿಯಾದ ಮಾರ್ಗದಲ್ಲಿ ಶಿಕ್ಷೆಯಾಗುವಂತೆ ಸರಕಾರವನ್ನು ಹುರಿದುಂಬಿಸಬೇಕು. ಜನಸಾಮಾನ್ಯರು ಈ ಮೇಲಿನ ಎರಡು ವಿಷಯಗಳನ್ನು ಮಾಡಿ ಚೀನಾದೊಂದಿಗೆ ಹೋರಾಡಲು ಸಾಧ್ಯವಿದೆ. ಗಡಿಯಲ್ಲಿ ಹೋರಾಡುವ ಸೈನಿಕರ ಬಗ್ಗೆ ಕೃತಜ್ಞತೆ ಮತ್ತು ದೇಶಪ್ರೇಮ ಇವೆರಡೂ ವಿಷಯಗಳಿಗೆ ಚಾಲನೆ ಸಿಗಲು ಇದರಿಂದ ಸಹಾಯವಾಗುವುದು !