ಕೊರೋನಾದಿಂದ ಪಾರಾಗಲು ಗೋಮೂತ್ರ ಸೇವಿಸಿ ! – ಭಾಜಪ ಶಾಸಕರ ಸಲಹೆ

ದಿಲೀಪ ಘೋಷ

ಕೊಲಕಾತಾ – ‘ಕೊರೋನಾದಿಂದ ಪಾರಾಗಲು ಗೋಮೂತ್ರ ಸೇವಿಸಿ’, ಎಂದು ಪಶ್ಚಿಮ ಬಂಗಾಲದ ಭಾಜಪ ಶಾಸಕ ಹಾಗೂ ಬಂಗಾಲ ಪ್ರದೇಶಾಧ್ಯಕ್ಷ ದಿಲೀಪ ಘೋಷ ಇವರು ಸಲಹೆ ನೀಡಿದ್ದಾರೆ. ಈ ಬಗ್ಗೆ ಒಂದು ‘ವಿಡಿಯೋ’ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ. ಈ ‘ವಿಡಿಯೋ’ದಲ್ಲಿ ಶಾಸಕ ಘೋಷ ಇವರು ಒಂದು ಸಭೆಯಲ್ಲಿ ಆರೋಗ್ಯಕ್ಕಾಗಿ ಮನೆಮದ್ದಿನ ಬಗ್ಗೆ ತಿಳುವಳಿಕೆ ನೀಡುತ್ತಿರುವಂತೆ ಕಂಡುಬರುತ್ತಿದೆ. ಅದರಲ್ಲಿ ಅವರು ‘ಗೋಮೂತ್ರ ಸೇವನೆಯಿಂದ ಜನರ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ, ಅದೇ ರೀತಿ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ’, ಎಂದು ಹೇಳಿದ್ದಾರೆ.

ಘೋಷ ಅವರು ತಮ್ಮ ಮಾತನ್ನು ಮುಂದುವರಿಸುತ್ತ, ‘ನಾನು ಗೋಮಾತೆಯ ಬಗ್ಗೆ ಹೇಳಲು ಆರಂಭಿಸಿದರೆ, ಅನೇಕರಿಗೆ ಹಿಡಿಸುವುದಿಲ್ಲ. ಕತ್ತೆಯು ಎಂದಿಗೂ ಗೋಮಾತೆಯ ಮಹಾತ್ಮೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇದು ಭಾರತವಾಗಿದೆ. ಇದು ಭಗವಾನ ಶ್ರೀಕೃಷ್ಣನ ಭೂಮಿಯಾಗಿದೆ. ಇಲ್ಲಿ ನಾವು ಗೋಮಾತೆಯನ್ನು ಪೂಜಿಸುತ್ತೇವೆ. ನಮ್ಮ ಆರೋಗ್ಯ ಸುಧಾರಣೆಗಾಗಿ ಗೋಮೂತ್ರ ಸೇವಿಸುವುದು ಅಗತ್ಯವಿದೆ. ಸರಾಯಿ ಕುಡಿಯುವವರಿಗೆ ಗೋಮಾತೆಯ ಮಹತ್ವ ಹೇಗೆ ಗಮನಕ್ಕೆ ಬರುವುದು ?’