ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court

  • ಮದ್ರಾಸ್ ಹೈಕೋರ್ಟ್ ನ ಮಹತ್ವದ ನಿರ್ಧಾರ

  • ಭೂಮಿಯ ಮೇಲಿನ ಮಾಲೀಕತ್ವವನ್ನು ಸಾಬೀತುಪಡಿಸಲು ಅಧಿಕೃತ ದಾಖಲೆಗಳನ್ನು ಸಲ್ಲಿಸುವುದು ಅಗತ್ಯ ಎಂಬ ಅಭಿಪ್ರಾಯ!

  • ಇಸ್ಲಾಮಿಕ್ ಧಾರ್ಮಿಕ ಕಾರ್ಯಗಳಿಗೆ ಸಂಬಂಧಿಸಿದ ವಾಸ್ತುಗಳ ಮೇಲೆ ವಕ್ಫ್ ಅಧಿಕಾರ ಚಲಾಯಿಸುವಂತಿಲ್ಲ ಎಂಬ ತೀರ್ಪು!

AI ರಚಿಸಿದ ಚಿತ್ರ

ಚೆನ್ನೈ (ತಮಿಳುನಾಡು) – ಪ್ರತಿಯೊಂದು ಕಬ್ರ ಅಥವಾ ದರ್ಗಾ ತನ್ನಿಂದ ತಾನೇ ‘ವಕ್ಫ್ ಬೋರ್ಡ್’ ಆಸ್ತಿಯಾಗುವುದಿಲ್ಲ ಎಂಬ ಮಹತ್ವದ ತೀರ್ಪನ್ನು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಕೆ. ಗೋವಿಂದರಾಜನ್ ತಿಲಕವಾಡಿ ಅವರು ಚೆನ್ನೈ ಸಮೀಪದ ಟ್ರಿಪ್ಲಿಕೇನ್ ಪ್ರದೇಶದಲ್ಲಿರುವ 240 ವರ್ಷಗಳ ಹಳೆಯ ದರ್ಗಾಕ್ಕೆ ಸಂಬಂಧಿಸಿದ ವಕ್ಫ್ ಬೋರ್ಡ್ ನ ಹಕ್ಕನ್ನು ತಳ್ಳಿಹಾಕುವಾಗ ನೀಡಿದರು. ಇದರೊಂದಿಗೆ ಈ ದರ್ಗಾದ ಮೇಲಿನ ವಕ್ಫ್ ಬೋರ್ಡ್ ನೋಂದಣಿಯ ‘ತಮಿಳುನಾಡು ವಕ್ಫ್ ಬೋರ್ಡ್’ ಆದೇಶವನ್ನೂ ನ್ಯಾಯಾಲಯ ರದ್ದುಗೊಳಿಸಿದೆ.

ಯಾವುದಾದರೂ ಸ್ಥಳವನ್ನು ಕೇವಲ ಇಸ್ಲಾಮಿಕ್ ಧಾರ್ಮಿಕ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ ಎಂಬ ಕಾರಣಕ್ಕೆ ವಕ್ಫ್ ಬೋರ್ಡ್ ಅದನ್ನು ವಶಪಡಿಸಿಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಭೂಮಿಯ ಮೇಲಿನ ಮಾಲೀಕತ್ವದ ಹಕ್ಕನ್ನು ಸಾಬೀತುಪಡಿಸಲು ವಕ್ಫ್ ಬೋರ್ಡ್ ಅಧಿಕೃತ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಮುಸ್ಲಿಂ ಕಾನೂನಿನ ಪ್ರಕಾರ, ಯಾವುದೇ ಮುಸ್ಲಿಂ ವ್ಯಕ್ತಿಯು ಧಾರ್ಮಿಕ ಬಳಕೆಗಾಗಿ ಶಾಶ್ವತವಾಗಿ ನೀಡಿದಾಗ ಮಾತ್ರ ಆಸ್ತಿಯು ವಕ್ಫ್ ಆಸ್ತಿಯಾಗಬಹುದು.

ಟ್ರಿಪ್ಲಿಕೇನ್ ನಲ್ಲಿರುವ ‘ಸೈಯದ್ ಹಬೀಬುಲ್ಲಾ ಶಾ ಖಾದ್ರಿ ಆರಿಫ್ ರಬ್ಬಾನಿ ಹಜರತ್ ದರ್ಗಾ’ಗೆ ‘ಮುತ್ತವಲ್ಲಿ’ (ವ್ಯವಸ್ಥಾಪಕ) ನೇಮಿಸುವ ತಮಿಳುನಾಡು ವಕ್ಫ್ ಬೋರ್ಡ್ ಪ್ರಸ್ತಾವನೆಯನ್ನೂ ನ್ಯಾಯಾಲಯ ರದ್ದುಗೊಳಿಸಿದೆ. ಕಡ್ಡಾಯ ಸಮೀಕ್ಷೆಯನ್ನು ಪೂರ್ಣಗೊಳಿಸದೆ ವಕ್ಫ್ ಕಾಯ್ದೆಯಡಿ ಈ ಆಸ್ತಿಯನ್ನು ನೋಂದಾಯಿಸಲು ಬೋರ್ಡ್ ಸೂಚನೆ ನೀಡಿತ್ತು.