- ಇಂತಹವರಿಗೆ ಜೀವಾವಾಧಿ ಸೆರೆಮನೆಯಲ್ಲಿರಿಸುವ ಶಿಕ್ಷೆಯನ್ನು ನೀಡಬೇಕು, ಇದರಿಂದ ಈ ರೀತಿಯಲ್ಲಿ ಯಾರೂ ಮಾಡಲು ಧೈರ್ಯ ತೋರುವುದಿಲ್ಲ !
- ಹಿಂದೂದ್ವೇಷಿ ಹಾಗೂ ತಥಾಕಥಿತ ಸುಧಾರಣಾವಾದಿ ಪೆರಿಯಾರನಿಂದಾಗಿ ತಮಿಳು ಸಮಾಜದಲ್ಲಿ ಹಿಂದೂ ಧರ್ಮ ಹಾಗೂ ಹಿಂದೂ ದೆವತೆಗಳ ಬಗ್ಗೆ ಎಷ್ಟು ದ್ವೇಷ ತುಂಬಿದೆ ಎಂಬುದು ಗಮನಕ್ಕೆ ಬರುತ್ತದೆ.
ಚೆನ್ನೈ (ತಮಿಳುನಾಡು) – ತಮಿಳುನಾಡು ಪೊಲೀಸರ ಸೈಬರ್ ಅಪರಾಧ ಶಾಖೆಯ ಅಧಿಕಾರಿಗಳು ಪೆರಿಯಾರವಾದಿ ಕಾರ್ಯಕರ್ತರಿಂದ ನಡೆಸಲಾಗುತ್ತಿರುವ ಯೂ ಟ್ಯೂಬ್ ಚಾನಲ್ ‘ಕರುಪ್ಪಾರ ಕುಟಮ’ನ (ಕಪ್ಪುವರ್ಣೀಯರ ಸಮೂಹ) ವಿರುದ್ಧ ಅಪರಾಧವನ್ನು ದಾಖಲಿಸಿ ಈ ಪ್ರಕರಣದಲ್ಲಿ ಎಮ್. ಸೆಂಥಿಲ ವಾಸನ ಹಾಗೂ ನಿರೂಪಕ ಸುರೇಂದ್ರನ್ ಇವರನ್ನು ಬಂಧಿಸಿದ್ದಾರೆ. ಈ ಚಾನೆಲ್‌ನಲ್ಲಿ ಭಗವಾನ ಕಾರ್ತಿಕೇಯ (ಮುರುಗನ್)ನನ್ನು ಸ್ತುತಿಸುವ ಸ್ತೋತ್ರವನ್ನು ಅವಮಾನಿಸಲಾಗಿತ್ತು.
ಈ ಚಾನೆಲ್‌ನ ಇನ್ನೋರ್ವ ನಿರೂಪಕ ಸುರೇಂದ್ರ ನಟರಾಜನ್‌ನು ತನ್ನ ಬಂಧನವನ್ನು ತಪ್ಪಿಸಲು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಬಂಧನ ಪೂರ್ವ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಅವಮಾನದ ಬಗ್ಗೆ ಭಾಜಪದ ರಾಜ್ಯ ಉಪಾಧ್ಯಕ್ಷ ಎಮ್.ಎನ್. ರಾಜಾ, ಭಾಜಪದ ರಾಜ್ಯ ಯುವ ಶಾಖೆಯ ನಾಯಕ ಪಿ. ಸೆಲ್ವಮ್ ಹಾಗೂ ರಾಜ್ಯ ನ್ಯಾಯವಾದಿ ಮಂಡಳಿಯ ಮುಖ್ಯಸ್ಥ ಆರ್.ಸಿ. ಪಾಲ್ ಕನಕರಾಜ ಇವರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಮೇಲಿನ ಕ್ರಮವನ್ನು ಕೈಗೊಂಡಿದ್ದಾರೆ.
Two members of Tamil YouTube channel Karuppar Koottam arrested after insulting Hindu God Murugan in a videohttps://t.co/gpliEzKzeW
— OpIndia.com (@OpIndia_com) July 17, 2020
೧. ಈ ಯೂ ಟ್ಯೂಬ್ ಚಾನಲ್ ನಿರ್ಮಿಸಿದ ಒಂದು ವಿಡಿಯೋದಲ್ಲಿ ಭಗವಾನ ಕಾರ್ತಿಕೇಯನ ಸ್ತೋತ್ರವಾಗಿರುವ ‘ಸ್ಕಂದ ಷಷ್ಠಿ ಕವಚಮ್’ ಬಗ್ಗೆ ಅವಮಾನಾತ್ಮಕ ಶಬ್ದಗಳನ್ನು ಉಪಯೋಗಿಸಿದ್ದಾರೆ. ಈ ವಿಡಿಯೋದಲ್ಲಿ ಏನು ವಿಡಂಬನೆಯಾಗಿದೆ ಎಂಬುದು ತಿಳಿದುಬಂದಿಲ್ಲ.
೨. ಸ್ಕಂದ ಷಷ್ಠಿ ಕವಚವನ್ನು ತಮಿಳು ಹಿಂದೂಗಳು ಪ್ರತಿದಿನ ಮನೆಯಲ್ಲಿ ಪಠಿಸುತ್ತಾರೆ. ಉತ್ತಮ ಆರೋಗ್ಯ, ಭಾಗ್ಯ ಹಾಗೂ ಮಾನಸಿಕ ಶಾಂತಿಗಾಗಿ ಇದರ ಪಠಣವನ್ನು ಮಾಡುತ್ತಾರೆ. ಉತ್ತರ ಭಾರತದಲ್ಲಿ ಹನುಮಾನ ಚಾಲೀಸಾದ ಪಠಣವನ್ನು ಮಾಡುವಂತೆಯೇ ದಕ್ಷಿಣ ಭಾರತದಲ್ಲಿ ಇದರ ಪಠಣವನ್ನು ಮಾಡುತ್ತಾರೆ.