ಹಿಂದೂಗಳ ಧಾರ್ಮಿಕ ಸ್ಥಳದಲ್ಲಿ ಕಾನೂನುಬಾಹಿರ ಸ್ಮಶಾನ ಮತ್ತು ಮಟನ್ ಔತಣಕೂಟ!
ಆಡಳಿತ ಮಂಡಳಿಯಿಂದ ನಿರ್ಲಕ್ಷ್ಯ; ತಹಶೀಲ್ದಾರರ ಪತ್ರವನ್ನು ಕಸದ ಬುಟ್ಟಿಗೆ ಎಸೆದ ಗ್ರಾಮ ಪಂಚಾಯಿತಿ!

ಬೆಲಸರ (ಪುಣೆ ಜಿಲ್ಲೆ) – ಸ್ವರಾಜ್ಯ ಸಂಕಲ್ಪಕ ಶಹಾಜಿರಾಜೆ ಭೋಸಲೆ ಅವರ ವಿಶ್ವಾಸೂ ಸರದಾರ ಮಹಿಮಾಕಾರ ಖಂಡೋಜಿ ಪಾಟೀಲ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಪರಾಕ್ರಮಿ ಸರದಾರ ಕಾವಜಿ ಬಿನ್ ಮಲ್ಹಾರ್‌ಜಿ ಖಾಸನೀಸ್ (ಪಾಟೀಲ್-ಗರುಡ್) ಅವರ ಶೌರ್ಯದಿಂದ ಪವಿತ್ರವಾದ ಬೆಲಸರದ ಐತಿಹಾಸಿಕ ಕಂದಕದ ಜಾಗವನ್ನು ಮುಸ್ಲಿಂ ಸಮುದಾಯದವರು ಕಾನೂನುಬಾಹಿರವಾಗಿ ಅತಿಕ್ರಮಣ ಮಾಡಿದ್ದಾರೆ.

ಈ ಜಾಗವನ್ನು ಹಿಂದೂಗಳು ತಮ್ಮ ವಂಶಪಾರಂಪರ್ಯ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಬಳಸುತ್ತಿದ್ದು, ಇಲ್ಲಿ ಐತಿಹಾಸಿಕ ವಾರಸುದಾರರಿದ್ದಾಗಲೂ ಸಹ ಮತಾಂಧರು ಈ ಪವಿತ್ರ ಸ್ಥಳವನ್ನು ವಶಪಡಿಸಿಕೊಳ್ಳಲು ‘ಲ್ಯಾಂಡ್ ಜಿಹಾದ್’ ಮೂಲಕ ಸಂಚು ರೂಪಿಸಿದ್ದಾರೆ. ಈ ಸ್ಥಳದಲ್ಲಿ ಅನಧಿಕೃತವಾಗಿ ಮೃತದೇಹಗಳನ್ನು ಹೂಳಲಾಗುತ್ತಿದ್ದು, ಹೊರಗಿನಿಂದ ಬರುವ ಮುಸ್ಲಿಮರು ಇಲ್ಲಿ ಮಟನ್ ಔತಣಕೂಟಗಳನ್ನು ಆಯೋಜಿಸುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ.

1954 ರ ಕಂದಾಯ ಇಲಾಖೆಯ ಗೊಂದಲದ ದುರುಪಯೋಗವನ್ನು ಪಡೆದುಕೊಂಡು ಈ ಜಾಗವನ್ನು ಕಬಳಿಸುವ ಸಂಚು ನಡೆಯುತ್ತಿದೆ. ತಹಶೀಲ್ದಾರರು ನೀಡಿದ ಸರಕಾರಿ ಜಮೀನು ಅಳತೆಯ ಆದೇಶವನ್ನೂ ಸಹ ಆಡಳಿತ ಮಂಡಳಿ ಕಸದ ಬುಟ್ಟಿಗೆ ಎಸೆದಿದೆ.

ಈ ಹಿನ್ನೆಲೆಯಲ್ಲಿ ಪಾಟೀಲ್-ಗರುಡ್ ಅವರು ಜೇಜುರಿ ಪೊಲೀಸರಿಗೆ ಮತ್ತೊಮ್ಮೆ ಮನವಿ ಸಲ್ಲಿಸಿದ್ದಾರೆ. ಐತಿಹಾಸಿಕ ಸ್ಥಳದ ವಿರೂಪಗೊಳಿಸುವಿಕೆಯನ್ನು ತಡೆಯಲು ಮತ್ತು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಗೌರವಿಸಲು, ಈ ಸ್ಥಳದಲ್ಲಿರುವ ಕಾನೂನುಬಾಹಿರ ಕಬರಸ್ಥಾನ (ಸ್ಮಶಾನ)ಮತ್ತು ಅತಿಕ್ರಮಣಗಳನ್ನು ತಕ್ಷಣವೇ ತೆರವುಗೊಳಿಸಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ‘ಸಕಲ ಹಿಂದೂ ಸಂಘಟನೆ’ಯ ವತಿಯಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

(ಹಿಂದೂಗಳ ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳನ್ನು ವ್ಯವಸ್ಥಿತವಾಗಿ ನುಂಗಿಹಾಕುವ ‘ಲ್ಯಾಂಡ್ ಜಿಹಾದ್’ನ ಯೋಜಿತ ಸಂಚು ಇದಾಗಿದೆ. ಮೊದಲು ರಾತ್ರೋರಾತ್ರಿ ಗೋರಿ (ಕಬರ್) ನಿರ್ಮಿಸುವುದು, ನಂತರ ಅಲ್ಲಿ ಉರೂಸ್ ಆಚರಿಸುವುದು ಮತ್ತು ಮೆಲ್ಲನೆ ಆ ಇಡೀ ಜಾಗವನ್ನು ವಕ್ಫ್ ಬೋರ್ಡ್ ಅಥವಾ ಮುಸ್ಲಿಂ ಸಮುದಾಯದ ಹೆಸರಿಗೆ ಮಾಡಿಕೊಂಡು ಹಿಂದೂಗಳ ಪರಂಪರೆಯನ್ನು ಅಳಿಸಿಹಾಕುವುದು ಮತಾಂಧರ ನಿಶ್ಚಿತ ಕಾರ್ಯತಂತ್ರವಾಗಿದೆ. ಬೆಲಸರದಲ್ಲಿ ಇಂದು ಇದೇ ನಡೆಯುತ್ತಿದೆ. ಆಡಳಿತ ಮಂಡಳಿಯು ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸದೆ ಈ ಎಲ್ಲಾ ಅಕ್ರಮ ಅತಿಕ್ರಮಣಗಳನ್ನು ತಕ್ಷಣ ನೆಲಸಮ ಮಾಡಬೇಕು! – ಸಂಪಾದಕರು).
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University