ಸಾಧಕರಿಗೆ ಸೂಚನೆ ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ವಿನಂತಿ !

ಆಧುನೀಕರಣದಿಂದ ಸದ್ಯ ಎತ್ತಿನಗಾಡಿ ಅಥವಾ ಕುದುರೆ ಗಾಡಿ ತಯಾರಿಸುವ ಪ್ರಮಾಣವು ಕಡಿಮೆಯಾಗಿದ್ದರೂ, ಹಿಂದೆ ಎತ್ತಿನಗಾಡಿ ಅಥವಾ ಕುದುರೆಗಾಡಿ ತಯಾರಿಸಿದ ಅನೇಕ ಕುಶಲಕರ್ಮಿಗಳು ಇಂದಿಗೂ ಹಳ್ಳಿಗಳಲ್ಲಿದ್ದಾರೆ. ಅದರಲ್ಲಿ ನಿರ್ವಹಣೆ-ದುರುಸ್ತಿ ಮಾಡುವವರೂ ಒಳಗೊಂಡಿದ್ದಾರೆ. ತಮಗೆ ಇಂತಹ ಕುಶಲಕರ್ಮಿಗಳ ಪರಿಚಯವಿದ್ದಲ್ಲಿ ಅವರ ಮಾಹಿತಿಯನ್ನು ಕೆಳಗೆ ನೀಡಿದಂತೆ ಸ್ಥಳೀಯ ಸಾಧಕರಿಗೆ ತಿಳಿಸಬೇಕು.

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

ಮೃತ್ಯುಪತ್ರವನ್ನು ತಯಾರಿಸಿ ತಮ್ಮ ಆಸ್ತಿಯನ್ನು ಒಬ್ಬರ ಹೆಸರಿಗೆ ಮಾಡುವುದಕ್ಕಿಂತ ಬದುಕಿರುವಾಗಲೇ ಆಸ್ತಿಯನ್ನು ಅರ್ಪಿಸುವುದು ಹೆಚ್ಚು ಅನುಕೂಲಕರವಾಗಿದೆ. ಏಕೆಂದರೆ ವ್ಯಕ್ತಿಯ ಮೃತ್ಯುವಿನ ನಂತರ ಅವರ ಮೃತ್ಯುಪತ್ರದಲ್ಲಿ ಉಲ್ಲೇಖಿಸಿದಂತೆ ಅವರು ಸತ್ ಕಾರ್ಯಕ್ಕೆ ಅರ್ಪಣೆ ಮಾಡಿದ ಆಸ್ತಿಯನ್ನು ಸನಾತನ ಸಂಸ್ಥೆಗೆ ದೊರಕಿಸಿಕೊಳ್ಳಲು ಮಾಡಬೇಕಾದ ಕಾನೂನುಬದ್ಧ ಮತ್ತು ನ್ಯಾಯಾಂಗ ಪ್ರಕ್ರಿಯೆಯು ಅತ್ಯಂತ ಜಟಿಲವಿದೆ.

ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಲ್ಲಿ ವಿನಂತಿ !

ಈ ಸೇವೆಗಾಗಿ ಅನೇಕ ಗಣಕೀಯ ಪ್ರತಿಗಳನ್ನು (ಪ್ರಿಂಟ್) ತೆಗೆಯಬೇಕಾಗುತ್ತಿದೆ. ಇದಕ್ಕಾಗಿ ಪ್ರತಿ ತಿಂಗಳಿಗೆ A4 ಆಕಾರದ 40 ಸಾವಿರ ಕಾಗದಗಳ (80 ರಿಮ್‌ಗಳ) ಅವಶ್ಯಕತೆಯಿದೆ. ಈ ಕಾಗದ 70 ಜಿಎಸ್‌ಎಮ್ ಇರಬೇಕು. ಅಂತಹ ಕಾಗದ ಇಲ್ಲವೆಂದಾದರೆ ಲಭ್ಯವಿರುವ ಕಾಗದವನ್ನು ನೀಡಬಹುದು.

ಜಾತ್ಯತೀತವಾದಿಗಳು ಮತ್ತು ಪ್ರಗತಿ (ಅಧೋಗತಿ) ಪರರು ಈಗೇಕೆ ಮೌನವಾಗಿದ್ದಾರೆ ?

ಬಂಗಾಲದ ತೃಣಮೂಲ ಕಾಂಗ್ರೆಸ್ ಸಂಸದೆ ಮತ್ತು ನಟಿ ನುಸರತ್ ಜಹಾನ್ ಅವರು ಸ್ವತಃ ಶ್ರೀ ದುರ್ಗಾದೇವಿಯ ವೇಷ ತೊಟ್ಟ ಫೋಟೋ ಮತ್ತು ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಮತಾಂಧರು ನುಸರತ್ ಜಹಾನ್‌ಗೆ ಜೀವಬೆದರಿಕೆಯೊಡ್ಡಿದ್ದಾರೆ.

ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು ಈ ಬೇಡಿಕೆಗಾಗಿ ಇಂದಿನಿಂದ ಉಪವಾಸ

ಇಲ್ಲಿಯ ತಪಸ್ವೀ ಆಖಾಡಾದ ಮಹಂತ ಪರಮಹಂಸ ದಾಸ ಇವರು ಅಕ್ಟೋಬರ್ ೧೨ ರಂದು ಮುಂಜಾನೆ ೫ ರಿಂದ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕೆಂಬ ಬೇಡಿಕೆಗಾಗಿ ಉಪವಾಸವನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ಇದಕ್ಕೂ ಮೊದಲು ಅವರು ಶ್ರೀ ರಾಮ ಜನ್ಮಭೂಮಿಗಾಗಿ ಅನೇಕ ದಿನಗಳ ಕಾಲ ಉಪವಾಸ ಮಾಡಿದ್ದರು.

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿಯವರಿಂದ ಮುಖ್ಯ ನ್ಯಾಯಮೂರ್ತಿ ಶರದ್ ಬೊಬಡೆ ಅವರಿಗೆ ಪತ್ರ

ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಎನ್.ವಿ. ರಮಣ ಇವರು ತೆಲುಗುದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡುರವರ ನಿಕಟವರ್ತಿಯಾಗಿದ್ದಾರೆ ಹಾಗೂ ಅವರು ನಾಯ್ಡುರವರ ಹೇಳಿಕೆಗನುಸಾರ ನಮ್ಮ ಸರಕಾರವನ್ನು ಉರುಳಿಸಲು ಇಚ್ಛಿಸುತ್ತಿದ್ದಾರೆ.

ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರಸಮಿತಿ ಸರಕಾರವು ಅಲ್ಪಸಂಖ್ಯಾತರಿಗೆ ನಾಗರಿಕ ಸೇವಾ ಪರೀಕ್ಷೆಗಳಿಗೆ ಉಚಿತವಾಗಿ ಬೋಧನೆ ನೀಡಲಿದೆ

ರಾಜ್ಯದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಉಚಿತವಾಗಿ ಶಿಕ್ಷಣ ನೀಡುವಂತೆ ಘೋಷಣೆ ಮಾಡಿದೆ.

ಭರತಪುರ (ರಾಜಸ್ಥಾನ)ದಲ್ಲಿ ಗೋಕಳ್ಳಸಾಗಾಣಿಕೆಯಾಗುತ್ತಿದ್ದ ಬಗ್ಗೆ ಮಾಹಿತಿ ನೀಡಿಯೂ ಕಾರ್ಯಾಚರಿಸದ ನಿಷ್ಕ್ರೀಯ ಪೊಲೀಸರು

ಇಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಚತುಷ್ಚಕ್ರ ವಾಹನದಲ್ಲಿ ದನಗಳ ಕಳ್ಳಸಾಗಣೆಯಾಗುತ್ತಿದೆ ಎಂಬ ಮಾಹಿತಿಯನ್ನು ನೀಡಿದರು; ಆದರೆ ಪೊಲೀಸರು ಅದರತ್ತ ದುರ್ಲಕ್ಷ ಮಾಡಿದ್ದರಿಂದ ಗೋ ಕಳ್ಳಸಾಗಣೆ ಮಾಡುವವರು ಹಸುವನ್ನು ತೆಗೆದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

‘ಝಿ ೫’ ಈ ಒಟಿಟಿ ಆಪ್‌ನಿಂದ ಪ್ರಸಾರವಾಗಲಿರುವ ‘ಕಾಮಿಡಿ ಕಪಲ್’ ಈ ವೆಬ್‌ಸಿರಿಸ್‌ನಲ್ಲಿ ಗೋ ಮೂತ್ರದ ಅವಮಾನ

ಒಟಿಟಿ ಆಪ್ ‘ಝೀ ೫’ ನಿಂದ ಪ್ರಸಾರವಾಗಲಿರುವ ಮುಂಬರುವ ವೆಬ್ ಸಿರಿಸ್ ‘ಕಾಮಿಡಿ ಕಪಲ್’ನಲ್ಲಿ ಗೋಮೂತ್ರವನ್ನು ಅವಮಾನಿಸಲಾಗಿದೆ. ಈ ವೆಬ್‌ಸಿರಿಸ್ ಅಕ್ಟೋಬರ್ ೨೧ ರಿಂದ ಪ್ರಸಾರವಾಗಲಿದೆ.

ಬಾಗ್‌ಪತ್‌ನಲ್ಲಿ (ಉತ್ತರ ಪ್ರದೇಶ) ಯಮುನಾ ನದಿಯಲ್ಲಿ ಶರೀರದ ಮೇಲೆ ಅನೇಕ ಕಡೆಗಳಲ್ಲಿ ಗಾಯಗಳಾಗಿರುವ ಅಪರಿಚಿತ ಸಾಧುವಿನ ಶವ ಪತ್ತೆ

ಬಾಗಪತ್ ನಗರದ ಮೂಲಕ ಹರಿಯುವ ಯಮುನಾ ನದಿಯಲ್ಲಿ ಒಬ್ಬ ಸಾಧುವಿನ ಶವ ಪತ್ತೆಯಾಗಿದೆ. ಅವರನ್ನು ಇನ್ನೂ ಗುರುತಿಸಲಾಗಿಲ್ಲ. ಈ ಶವದ ಮೇಲೆ ಅನೇಕ ಗಾಯಗಳಿವೆ. ಅವರನ್ನು ಥಳಿಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.