|
ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿಯ ತಪಸ್ವೀ ಆಖಾಡಾದ ಮಹಂತ ಪರಮಹಂಸ ದಾಸ ಇವರು ಅಕ್ಟೋಬರ್ ೧೨ ರಂದು ಮುಂಜಾನೆ ೫ ರಿಂದ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕೆಂಬ ಬೇಡಿಕೆಗಾಗಿ ಉಪವಾಸವನ್ನು ಆರಂಭಿಸುವುದಾಗಿ ಘೋಷಿಸಿದ್ದಾರೆ. ಇದಕ್ಕೂ ಮೊದಲು ಅವರು ಶ್ರೀ ರಾಮ ಜನ್ಮಭೂಮಿಗಾಗಿ ಅನೇಕ ದಿನಗಳ ಕಾಲ ಉಪವಾಸ ಮಾಡಿದ್ದರು.
तपस्वी छावनी के महंत परमहंस दास ने 12 अक्टूबर से भारत को हिंदू राष्ट्र घोषित करने के लिए आमरण अनशन की घोषणा की है. #HindiNews https://t.co/fNzbhtrAWh
— News18 Uttar Pradesh (@News18UP) October 11, 2020
೧. ಮಹಂತ ಪರಮಹಂಸ ದಾಸ ಇವರು ಇದರ ಬಗ್ಗೆ ಹೇಳುವಾಗ ‘ಹಿಂದೂ ರಾಷ್ಟ್ರ ಘೋಷಣೆಯೊಂದಿಗೆ ಮುಸಲ್ಮಾನರ ಪೌರತ್ವವನ್ನು ಮುಕ್ತಾಯಗೊಳಿಸಬೇಕು, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ವಾಸಿಸುತ್ತಿರುವ ಹಿಂದೂಗಳನ್ನು ಭಾರತಕ್ಕೆ ಕರೆತರಬೇಕು ಹಾಗೂ ಭಾರತದಲ್ಲಿರುವ ಮುಸಲ್ಮಾನರನ್ನು ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಕಳುಹಿಸಬೇಕು ಎಂದು ಸಹ ಬೇಡಿಕೆಯನ್ನಿಟ್ಟಿದ್ದಾರೆ.
೨. ಮಹಂತ ಪರಮಹಂಸ ದಾಸ ಇವರು ತಮ್ಮ ಮಾತನ್ನು ಮುಂದುವರಿಸುತ್ತಾ, ಯಾವಾಗ ದೇಶದ ವಿಭಜನೆ ಆಯಿತೋ, ಆಗ ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಇಸ್ಲಾಮಿಕ್ ರಾಷ್ಟ್ರಗಳೆಂದು ಘೋಷಿಸಿಲಾಯಿತು, ಹಾಗಾಗಿ ಭಾರತವನ್ನೂ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು. ಎಲ್ಲಿ ಮುಸಲ್ಮಾನರ ಸಂಖ್ಯೆ ಹೆಚ್ಚಿದೆಯೋ ಅಲ್ಲಿ ಹಿಂದೂಗಳ ಮೇಲಿನ ಅತ್ಯಾಚಾರಗಳೂ ಹೆಚ್ಚಾಗುತ್ತಿವೆ. ಹಿಂದೂ ಮತ್ತು ಭಾರತವನ್ನು ಉಳಿಸುವ ಏಕೈಕ ಮಾರ್ಗವೆಂದರೆ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸುವುದು’ ಎಂದು ಹೇಳಿದರು.