ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿಯವರಿಂದ ಮುಖ್ಯ ನ್ಯಾಯಮೂರ್ತಿ ಶರದ್ ಬೊಬಡೆ ಅವರಿಗೆ ಪತ್ರ

ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಎನ್.ವಿ. ರಮಣ ಇವರು ನಮ್ಮ ಸರಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ !

ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಮತ್ತು ನ್ಯಾಯಾಧೀಶ ಎನ್.ವಿ. ರಮಣ

ಅಮರಾವತಿ (ಆಂಧ್ರಪ್ರದೇಶ) – ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಎನ್.ವಿ. ರಮಣ ಇವರು ತೆಲುಗುದೇಶಂ ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡುರವರ ನಿಕಟವರ್ತಿಯಾಗಿದ್ದಾರೆ ಹಾಗೂ ಅವರು ನಾಯ್ಡುರವರ ಹೇಳಿಕೆಗನುಸಾರ ನಮ್ಮ ಸರಕಾರವನ್ನು ಉರುಳಿಸಲು ಇಚ್ಛಿಸುತ್ತಿದ್ದಾರೆ, ಎಂದು ಆರೋಪಿಸುವ ಎಂಟು ಪುಟಗಳ ಪತ್ರವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನಮೋಹನ ರೆಡ್ಡಿಯವರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಶರದ ಬೊಬಡೆ ಅವರಿಗೆ ಕಳುಹಿಸಿದ್ದಾರೆ.