ಬಾಂಗ್ಲಾದೇಶದ ದೇವಾಲಯಗಳಲ್ಲಾದ ವಿಧ್ವಂಸದ ಘಟನೆಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ ! – ಭಾರತ ಸರಕಾರ
ಬಾಂಗ್ಲಾದೇಶದ ಹಿಂದೂ ದೇವಾಲಯಗಳ ಧ್ವಂಸದ ಘಟನೆಗಳನ್ನು ಭಾರತವು ಬಹಳ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಭಾರತ ಸರಕಾರವು ಹೇಳಿದೆ. ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿಯವರು ಬಾಂಗ್ಲಾದೇಶದ ೧೫ ಕ್ಕೂ ಹೆಚ್ಚು ಹಿಂದೂ ದೇವಾಲಯಗಳ ಮೇಲಿನ ದಾಳಿಯನ್ನು ಬಹಿರಂಗಪಡಿಸಿದ ನಂತರ ಇದು ಭಾರತ ಸರಕಾರವು ನೀಡಿದ ಮೊದಲ ಪ್ರತಿಕ್ರಿಯೆಯಾಗಿದೆ.