ಶೀಘ್ರದಲ್ಲೇ ರಾಜ್ಯದಲ್ಲಿ ಕಾನೂನು ರೂಪಿಸಲಾಗುವುದು!
ಬೆಂಗಳೂರು – ಲವ್ ಜಿಹಾದ್ ಮೂಲಕ ಆಗುವ ಮತಾಂತರದ ಸುದ್ದಿಗಳನ್ನು ನಾವು ದಿನಪತ್ರಿಕೆಗಳು ಮತ್ತು ಮಾಧ್ಯಮಗಳ ಮೂಲಕ ಓದಿದ್ದೇವೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ನನಗೆ ಇತರ ರಾಜ್ಯಗಳ ಬಗ್ಗೆ ತಿಳಿದಿಲ್ಲ; ಆದರೆ ನಾವು ಈ ಕೃತ್ಯವನ್ನು ಕೊನೆಗೊಳಿಸುತ್ತೇವೆ. ಹಣದ ಆಮಿಷವನ್ನು ತೋರಿಸುವ ಮೂಲಕ ಯುವತಿಯರನ್ನು ಪ್ರೀತಿಯ ಬಲೆಗೆ ಸೆಳೆಯುವ ಪ್ರಕರಣಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಅದನ್ನು ನಿರ್ಮೂಲನೆ ಮಾಡಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾಧ್ಯಮಗಳೊಂದಿಗೆ ಮಾತನಾಡುವಾಗ ತಿಳಿಸಿದರು. ಉತ್ತರ ಪ್ರದೇಶ, ಹರಿಯಾಣ ಮತ್ತು ಮಧ್ಯಪ್ರದೇಶದ ನಂತರ ಕರ್ನಾಟಕವೂ ಈಗ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲಿದೆ. ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ಹಿಂದೆ ಲವ್ ಜಿಹಾದ್ ಅನ್ನು ’ಸಾಮಾಜಿಕ ರಾಕ್ಷಸ’ ಎಂದು ಕರೆದಿದ್ದರು.