ಆದಾಯ ತೆರಿಗೆ ವಂಚನೆ ಕುರಿತು ಬಿಲೀವರ್ಸ್ ಈಸ್ಟರ್ನ್ ಚರ್ಚ್‌ನ ಆಸ್ತಿಗಳ ಮೇಲೆ ಆದಾಯ ತೆರಿಗೆ ದಾಳಿ

ವಿದೇಶದಿಂದ 1 ಸಾವಿರ ಕೋಟಿ ರೂಪಾಯಿ ದೇಣಿಗೆ ತೆಗೆದುಕೊಂಡಿದೆ !

  • ಇಂತಹ ಚರ್ಚ್ ನ ಸರಕಾರೀಕರಣದ ಧೈರ್ಯವನ್ನು ಸರಕಾರ ಏಕೆ ತೋರಿಸುವುದಿಲ್ಲ ?
  • ಯಾವಾಗಲು ಹಿಂದೂ ಧರ್ಮ, ಸಂತರು, ಸಂಸ್ಕೃತಿ, ದೇವಾಲಯಗಳಿಗೆ ಸಂಬಂಧಿಸಿದಂತೆ ಏನಾದರೂ ಅನುಚಿತ ಘಟನೆ ನಡೆದಿದೆ ಎಂಬ ವದಂತಿಯಿದ್ದರೂ, ಆಕಾಶ ಪಾತಾಳ ಒಂದು ಮಾಡುವಂತೆ ‘ಬ್ರೇಕಿಂಗ್ ನ್ಯೂಸ್’ ನೀಡುವ ಮಾಧ್ಯಮಗಳು ಮೌನವಾಗಿವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ, ಪ್ರಸಾರ ಮಾಧ್ಯಮಗಳ ಈ ಹಿಂದೂದ್ವೇಷ ತಿಳಿಯಿರಿ!

ಕೊಚ್ಚಿ (ಕೇರಳ) – ನವೆಂಬರ್ 5 ರಂದು ಕೇರಳ ಮತ್ತು ಇತರ ರಾಜ್ಯಗಳಲ್ಲಿ ಆದಾಯ ತೆರಿಗೆ ಇಲಾಖೆಯು ಯೋಹಾನ್ನನ ‘ಬಿಲಿವರ್ಸ್ ಈಸ್ಟರ್ನ್ ಚರ್ಚ್’ಗೆ ಸಂಬಂಧಿಸಿದವರ ಕಚೇರಿ ಮತ್ತು ನಿವಾಸಗಳ ಮೇಲೆ ಏಕಕಾಲಿಕ ದಾಳಿ ನಡೆಸಿದೆ. ತಿರುವಲ್ಲಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಚರ್ಚ್ ನಿಂದ ತೆರಿಗೆ ವಂಚನೆ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆಗಳ ಬಗ್ಗೆ ಮಾಹಿತಿಯ ಆಧಾರದ ಮೇಲೆ ಈ ದಾಳಿಗಳು ನಡೆದಿವೆ.

1. ತಿರುವಲ್ಲಾದ ಚರ್ಚ್ ನಡೆಸುತ್ತಿರುವ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಬಗ್ಗೆಯೂ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ. ಈ ದಾಳಿಗಳ ವಿವರಗಳು ಇನ್ನೂ ಬೆಳಕಿಗೆ ಬಂದಿಲ್ಲ.

2. 2017 ರಲ್ಲಿ ಗೃಹ ಸಚಿವಾಲಯವು ‘ಬಿಲೀವರ್ಸ್ ಈಸ್ಟರ್ನ್ ಚರ್ಚ್’ ಮತ್ತು ಅದರ ಮೂರು ಸ್ವಯಂಸೇವಿ ಸಂಸ್ಥೆಗಳು ವಿದೇಶಿ ಹಣವನ್ನು ಸ್ವೀಕರಿಸುವುದನ್ನು ನಿಷೇಧಿಸಿದ ನಂತರವೂ, ಬಿಲೀವರ್ಸ್ ಚರ್ಚ್ ವಿದೇಶದಿಂದ ಹಣವನ್ನು ಸಂಗ್ರಹಿಸುವ ಅಪರಾಧವನ್ನು ಮಾಡಿತ್ತು. ಇಲ್ಲಿಯವರೆಗೆ, ಚರ್ಚಿಗೆ 18 ವರ್ಷಗಳ ಅವಧಿಯಲ್ಲಿ 1,000 ಕೋಟಿ ರೂಪಾಯಿ ವಿದೇಶಿ ಹಣ ಹರಿದು ಬಂದಿದೆ.