ಮೋದಿ-ಟ್ರಂಪ್ ನಡುವೆ 16 ತಿಂಗಳ ನಂತರ ಫ್ರಾನ್ಸ್‌ನಲ್ಲಿ ನಡೆಯಿತು ನೇರ ಮಾತುಕತೆ!
ಭಾರತೀಯ ನಾವಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು! - ಮೋದಿ

ಎವಿಯಾನ್ (ಫ್ರಾನ್ಸ್) – ಮೋದಿ ಮಾತುಕತೆ ನಡೆಸುವಲ್ಲಿ ಬಲಿಷ್ಠ ನಾಯಕರಾಗಿದ್ದಾರೆ. ಮೋದಿ ಪ್ರಧಾನಿ ಹುದ್ದೆಯಲ್ಲಿರುವವರೆಗೆ ಭಾರತವು ಜಾಗತಿಕ ಮಟ್ಟದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಮೋದಿ ಅತ್ಯಂತ ಶಾಂತ ಸ್ವಭಾವದವರಾಗಿದ್ದರೂ ಕಠಿಣ ನಿರ್ಧಾರ ತೆಗೆದುಕೊಳ್ಳುವ ನಾಯಕರಾಗಿದ್ದಾರೆ. ಉಭಯ ದೇಶಗಳು ಇದಕ್ಕಿಂತ ಹೆಚ್ಚಾಗಿ ಹತ್ತಿರ ಬರಲು ಸಾಧ್ಯವಿಲ್ಲ. ಭಾರತದ ಮೇಲೆ ದಾಳಿಯಾದರೆ ನಾವು ಭಾರತದೊಂದಿಗೆ ಇರುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಹತ್ವದ ಹೇಳಿಕೆ ನೀಡಿದರು. ಇಲ್ಲಿ ನಡೆದ ಜಿ-7 ಸಭೆಯ ಹಿನ್ನೆಲೆಯಲ್ಲಿ, ಟ್ರಂಪ್ ಮತ್ತು ಮೋದಿ ನಡುವೆ ಸುಮಾರು 16 ತಿಂಗಳ ನಂತರ, ಭಾರತೀಯ ಸಮಯದ ಪ್ರಕಾರ ಜೂನ್ 17 ರ ರಾತ್ರಿ 7:30 ರ ಸುಮಾರಿಗೆ ನೇರ ಮಾತುಕತೆ ನಡೆಯಿತು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಮಾತನಾಡಿ, ಇರಾನ್ ಯುದ್ಧದಲ್ಲಿ ಭಾರತೀಯ ನಾವಿಕರ ಸಾವು ದುಃಖಕರವಾಗಿದೆ. ಹಾರ್ಮುಜ್ ಜಲಸಂಧಿ ತೆರೆದಿರುವುದು ಜಾಗತಿಕ ಆರ್ಥಿಕತೆಗೆ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಿ ಹೇಳಿದರು.
ಲಕ್ಷಾಂತರ ಭಾರತೀಯ ನಾವಿಕರು ಇಂದು ಜಗತ್ತಿನಾದ್ಯಂತ ಕಾರ್ಯನಿರ್ವಹಿಸುತ್ತಿದ್ದು, ಜಾಗತಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. ಆದ್ದರಿಂದ ಅಮೆರಿಕ-ಇರಾನ್ ಒಪ್ಪಂದದಲ್ಲಿ ನಾವಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid