ಸಾಧಕರೇ, ಬೇರೆ ಸ್ಥಳದಲ್ಲಿ ಮನೆ ಅಥವಾ ಸ್ಥಳವನ್ನು ಖರೀದಿಸುವಾಗ ಅಥವಾ ಮನೆ ಬಾಡಿಗೆಗೆ ಪಡೆಯುವಾಗ ಮೋಸಕ್ಕೊಳಗಾಗದಂತೆ ಎಚ್ಚರ ವಹಿಸಿ !

ಆಪತ್ಕಾಲದ ಪೂರ್ವಸಿದ್ಧತೆಯ ದೃಷ್ಟಿಯಿಂದ ಸದ್ಯ ಕೆಲವು ಸಾಧಕರು ಬೇರೆ ಸ್ಥಳಗಳಲ್ಲಿ ಮನೆ ಅಥವಾ ಸ್ಥಳವನ್ನು ಖರೀದಿಸಲು ಪ್ರಯತ್ನಿಸುತ್ತಿದ್ದಾರೆ, ಹಾಗೆಯೇ ಕೆಲವು ಸಾಧಕರು ಮನೆಯನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ. ಕೆಲವು ಸಾಧಕರು ತಮಗೆ ಪರಿಚಯವಿಲ್ಲದ ಸ್ಥಳದಲ್ಲಿ ಮನೆ ಅಥವಾ ಸ್ಥಳವನ್ನು ಖರೀದಿಸುವಾಗ ಸ್ಥಿರಾಸ್ತಿ ಖರೀದಿಯ ಪ್ರಕ್ರಿಯೆಯಲ್ಲಿರುವ ಕೆಲವು ಜನರು ದುಪ್ಪಟ್ಟು ಬೆಲೆಯನ್ನು ಹೇಳಿ ಸಾಧಕರನ್ನು ಮೋಸಗೊಳಿಸುತ್ತಿರುವುದು ಗಮನಕ್ಕೆ ಬಂದಿದೆ. ಇದೇ ರೀತಿ ಬಾಡಿಗೆ ಮನೆಗೂ ಸೂಕ್ತವಲ್ಲದ ಮೊತ್ತವನ್ನು ಹೇಳಲಾಗುತ್ತಿದೆ. ಅಪರಿಚಿತ ಸ್ಥಳದಲ್ಲಿ ಮನೆ ಅಥವಾ ಸ್ಥಳವನ್ನು ಖರೀದಿಸುವಾಗ ಸಾಧಕರು ಪರಿಚಿತ ಸ್ಥಳೀಯ ಸಾಧಕರಿಂದ ಪರಸ್ಪರ ಸಹಾಯವನ್ನು ಪಡೆಯುತ್ತಾರೆ; ಆದರೆ ಸಹಾಯ ಮಾಡುವ ಸಾಧಕರಿಗೂ ಈ ಕ್ಷೇತ್ರದಲ್ಲಿ ಅನುಭವವಿಲ್ಲದಿದ್ದರೆ, ಅವರೂ ಮೋಸ ಹೋಗುತ್ತಾರೆ ಎಂದು ಗಮನಕ್ಕೆ ಬಂದಿದೆ.

ಸಾಧಕರು ಮನೆ ಅಥವಾ ಸ್ಥಳ ಇವುಗಳನ್ನು ಖರೀದಿಸುವಾಗ ಅಥವಾ ಮನೆಯನ್ನು ಬಾಡಿಗೆ ತೆಗೆದುಕೊಳ್ಳುವಾಗ ಮೋಸಕ್ಕೊಳಗಾಗದಿರಲು ತಾವು ಯಾವ ಸ್ಥಳದಲ್ಲಿ ಸ್ಥಳಾಂತರಗೊಳ್ಳಲಿದ್ದೇವೆ ಅದರ ವಿವರಗಳನ್ನು ತಮ್ಮ ಜವಾಬ್ದಾರ ಸಾಧಕರಿಗೆ ತಿಳಿಸಬೇಕು. ಜವಾಬ್ದಾರ ಸಾಧಕರು ಇಂತಹ ಸಾಧಕರಿಂದ ದೊರೆತ ಮಾಹಿತಿಯನ್ನು ಆ ಸಾಧಕರು ಯಾವ ಜಿಲ್ಲೆಗೆ ಸ್ಥಳಾಂತರಗೊಳ್ಳಲು ಇಚ್ಛಿಸುವರೋ, ಆ ಜಿಲ್ಲೆಯ ಜವಾಬ್ದಾರ ಸಾಧಕರಿಗೆ ತಿಳಿಸಬೇಕು.

ಸಾಧಕರು ಸ್ಥಳಾಂತರಗೊಳ್ಳುವಾಗ ಬೇರೆ ಬೇರೆ ಗ್ರಾಮಗಳಲ್ಲಿ ಅಥವಾ ತಾಲೂಕುಗಳಲ್ಲಿ ಒಬ್ಬಂಟಿಯಾಗಿರದೇ ಸಾಧನೆಯ ದೃಷ್ಟಿಯಿಂದ ಪರಸ್ಪರರಿಗೆ ಪೂರಕವಾಗಿರಲು ಅನುಕೂಲವಾಗಿರುವಂತಹ ಯಾವುದಾದರೊಂದು ಗ್ರಾಮದಲ್ಲಿ ಅಥವಾ ತಾಲೂಕಿನ ಅಕ್ಕಪಕ್ಕದಲ್ಲಿರುವ ಮನೆಗಳನ್ನು ಖರೀದಿಸಿ ವಾಸಿಸಲು ನಿಯೋಜನೆ ಮಾಡುತ್ತಿದ್ದಾರೆ, ಈ ರೀತಿ ಒಟ್ಟಿಗೆ ವಾಸಿಸುವ ನಿಯೋಜನೆ ಮಾಡುವ ಸಾಧಕರ ಸಮೂಹದೊಂದಿಗೆ ಈ ಮೇಲೆ ಹೇಳಿದಂತಹ ಸಾಧಕರನ್ನು ಸೇರಿಸುವ ನಿಯೋಜನೆಯನ್ನು ಜವಾಬ್ದಾರ ಸಾಧಕರು ಮಾಡಬೇಕು.

ಅ. ಸ್ಥಳಾಂತರಗೊಳ್ಳುತ್ತಿರುವ ಜಿಲ್ಲೆಯ ಜವಾಬ್ದಾರ ಸಾಧಕರ ಜವಾಬ್ದಾರಿ

೧. ಜಿಲ್ಲೆಯಲ್ಲಿ ಯಾವ ಯಾವ ಭಾಗಗಳಲ್ಲಿ ಸಾಧಕರು ಸಮೂಹದಲ್ಲಿ ವಾಸಿಸಲಿದ್ದಾರೆ, ಎಂಬ ಮಾಹಿತಿಯನ್ನು ಸ್ಥಳಾಂತರಗೊಳ್ಳಲು ಇಚ್ಛಿಸುವ ಸಾಧಕರಿಗೆ ಕೊಡಬೇಕು. ಅಲ್ಲದೇ ಇಂತಹ ಸಮೂಹದ ಸ್ಥಳದಲ್ಲಿ ಅವರು ಆಯ್ಕೆ ಮಾಡಿದ ಮನೆ ಅಥವಾ ಜಮೀನು ಇವುಗಳ ದರವು ಸ್ಥಳೀಯ ದರಕ್ಕನುಸಾರ ಯೋಗ್ಯವಾಗಿದೆಯೋ ಅಥವಾ ಇಲ್ಲವೋ ಎಂದು ನಿರ್ಧರಿಸಲು ಅವರಿಗೆ ಜಿಲ್ಲೆಯಲ್ಲಿ ಈ ಕ್ಷೇತ್ರದ ಬಗ್ಗೆ ಅನುಭವವಿರುವ ಸಾಧಕರು ಅಥವಾ ಹಿತಚಿಂತಕರ ಪರಿಚಯ ಮಾಡಿಕೊಡಬೇಕು.

೨. ಸ್ಥಳಾಂತರಿತಗೊಳ್ಳಲು ಇಚ್ಛಿಸುವ ಸಾಧಕರಿಗೆ ಬಾಡಿಗೆ ಮನೆ ಬೇಕಾಗಿದ್ದರೆ, ಅವರಿಗೂ ಮೇಲಿನಂತೆ ಸಹಾಯ ಮಾಡಬೇಕು.

ಆ. ಸ್ಥಳಾಂತರಗೊಳ್ಳಲು ಬಯಸುವ ಸಾಧಕರಿಗೆ ಸೂಚನೆ

೧. ಸ್ಥಳಾಂತರಗೊಳ್ಳಲು ಇಚ್ಛಿಸುವ ಜಿಲ್ಲೆಯಲ್ಲಿ ಎಷ್ಟು ಸ್ಥಳಗಳಲ್ಲಿ ಸಾಧಕರು ಸಮೂಹದಲ್ಲಿ ವಾಸಿಸಲಿದ್ದಾರೆ ಎನ್ನುವ ಮಾಹಿತಿಯನ್ನು ಆಯಾ ಜಿಲ್ಲೆಯ ಜವಾಬ್ದಾರ ಸಾಧಕರಿಂದ ಪಡೆಯಬೇಕು. ಆ ಜಿಲ್ಲೆಯಲ್ಲಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಸಾಧಕರು ಸಮೂಹದಲ್ಲಿ ವಾಸಿಸುವವರಿದ್ದರೆ, ಅವುಗಳಲ್ಲಿ ಯಾವ ಸ್ಥಳದಲ್ಲಿ ನೆಲೆಸಬೇಕಾಗಿದೆ, ಎಂದು ಸ್ವತಃ  ನಿರ್ಧರಿಸಬೇಕು.

ಆ ಜಿಲ್ಲೆಯ ಜವಾಬ್ದಾರ ಸಾಧಕರು ಕೇವಲ ಸ್ಥಳೀಯ ಬೆಲೆಯಂತೆ ಆ ಆಸ್ತಿಪಾಸ್ತಿಯ ಬೆಲೆಯು ಸೂಕ್ತವಾಗಿದೆಯೋ ಇಲ್ಲವೋ, ಎಂದು ನಿರ್ಧರಿಸಲು ಈ ಕ್ಷೇತ್ರದ ಅನುಭವಿ ಸಾಧಕರ ಅಥವಾ ಹಿತಚಿಂತಕರನ್ನು ಜೋಡಿಸಿಕೊಡುವರು.

೨. ಸ್ಥಳಾಂತರಗೊಳ್ಳುತ್ತಿರುವ ಸಾಧಕರು ಜಿಲ್ಲೆಯ ಜವಾಬ್ದಾರ ಸಾಧಕರನ್ನು ಹೊರತುಪಡಿಸಿ ಇನ್ನಿತರ ಸಾಧಕರನ್ನು ಪರಸ್ಪರ ಸಂಪರ್ಕಿಸಿ ಯಾವುದೇ ವ್ಯವಹಾರ ಮಾಡುವುದನ್ನು ತಡೆಗಟ್ಟಬೇಕು, ಇಷ್ಟಾಗಿಯೂ ಅದೇ ರೀತಿ ಮಾಡಿದರೆ ಅದು ಸಾಧಕರ ವೈಯಕ್ತಿಕ ಜವಾಬ್ದಾರಿಯಾಗಿರುತ್ತದೆ.

೩. ಮನೆ ಅಥವಾ ಜಮೀನು ಇವುಗಳ ಖರೀದಿ ಅಥವಾ ಬಾಡಿಗೆಯ ಆಧಾರದ ಮೇಲೆ ತೆಗೆದುಕೊಳ್ಳಲು ಆವಶ್ಯಕವಿರುವ ಎಲ್ಲ ಕಾನೂನುಬದ್ಧ ಅಂಶಗಳ ಬಗ್ಗೆ ಸ್ವತಃ ಖಚಿತ ಪಡಿಸಿಕೊಳ್ಳಬೇಕು.

೪. ಸ್ಥಳಾಂತರಿತಗೊಳ್ಳುತ್ತಿರುವ ಜಿಲ್ಲೆಯ ಜವಾಬ್ದಾರ ಸಾಧಕರು ಸಹಾಯಕ್ಕಾಗಿ ಜೋಡಿಸಿಕೊಟ್ಟಿರುವ ಸಾಧಕರ ಅಥವಾ ಇತರ ಬೇರೆ ಯಾರದೋ ಮಾಹಿತಿಯ ಮೇಲೆ ಅವಲಂಬಿಸಿರಬಾರದು. ಆ ಮಾಹಿತಿಯನ್ನು ಸ್ವತಃ ಪರಿಶೀಲಿಸಿ ದೃಢಪಡಿಸಿಕೊಳ್ಳಬೇಕು. ಖರೀದಿಯ ಸಂಪೂರ್ಣ ಪ್ರಕ್ರಿಯೆಯ ನಿರ್ಣಯದ ಜವಾಬ್ದಾರಿಯು ಸ್ವತಃ ಸಾಧಕರದ್ದಾಗಿರುತ್ತದೆ.

೫. ಬಾಡಿಗೆ ಮನೆಯನ್ನು ತೆಗೆದುಕೊಳ್ಳುವ ಸಂಪೂರ್ಣ ಪ್ರಕ್ರಿಯೆಯ ನಿರ್ಣಯದ ಜವಾಬ್ದಾರಿಯು ಸ್ವತಃ ಸಾಧಕರದ್ದೇ ಆಗಿರುತ್ತದೆ.

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ (೩೧.೧೦.೨೦೨೦)ಮನೆ ಮತ್ತು ಸ್ಥಳ ಇವುಗಳ ಖರೀದಿ ಅಥವಾ

ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮೋಸಗೊಳಿಸುವ ಅಥವಾ ಹಾಗೆ ಮಾಡುತ್ತಿರುವ ಸಂಶಯಾಸ್ಪದ ವ್ಯಕ್ತಿಗಳ ಮಾಹಿತಿಯನ್ನು ತಿಳಿಸಿರಿ !

ಸಾಧಕರು ಬೇರೆ ಸ್ಥಳದಲ್ಲಿ ಮನೆ ಅಥವಾ ಸ್ಥಳವನ್ನು ಖರೀದಿಸುತ್ತಿರುವಾಗ ಅಥವಾ ಮನೆಯನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಿರುವಾಗ ಅವರಿಗೆ ವಿವಿಧ ಮಾಧ್ಯಮಗಳಿಂದ ಮೋಸವಾಗುತ್ತಿರುವುದು ಗಮನಕ್ಕೆ ಬಂದಿದೆ.

೧. ಮಾರುಕಟ್ಟೆಯ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಮನೆ ಅಥವಾ ಜಮೀನಿನ ಬೆಲೆಯನ್ನು ಹೇಳುವುದು.

೨. ಕಾನೂನುಬದ್ಧ ದೃಷ್ಟಿಯಿಂದ ಕಡ್ಡಾಯವಾಗಿರುವ ಕಾಗದಪತ್ರಗಳನ್ನು ಪೂರ್ಣಗೊಳಿಸದಿರುವುದು ಅಥವಾ ಆ ಬಗ್ಗೆ ಗೊಂದಲದಲ್ಲಿಡುವುದು.

೩. ಸಾಧಕರಿಗೆ ಮಾರಾಟಕ್ಕಾಗಿ ತೋರಿಸಲಾಗುವ ಸ್ಥಳದಲ್ಲಿ ಮನೆಯನ್ನು ಕಟ್ಟಲು ಕಾನೂನು ಪ್ರಕ್ರಿಯೆ ಅಪೂರ್ಣವಾಗಿರುವುದು.

೪. ವಿವಿಧ ಸೌಲಭ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಕೇಳುವುದು.

೫. ಮನೆಯನ್ನು ಕಟ್ಟುತ್ತಿರುವಾಗ ಚಾಲ್ತಿಯಲ್ಲಿರುವ ನಿಯಮಕ್ಕನುಸಾರ ಹಂತ ಹಂತವಾಗಿ ಹಣವನ್ನು ಪಡೆಯದೇ ಮುಂಚೆಯೇ ದೊಡ್ಡ ಮೊತ್ತವನ್ನು ಪಡೆಯುವುದು ಮತ್ತು ಮನೆಯನ್ನು ಸ್ವಾಧೀನಕ್ಕೆ ನೀಡುವ ಮೊದಲೇ ಎಲ್ಲ ಮೊತ್ತವನ್ನು ತೆಗೆದುಕೊಳ್ಳುವುದು.

ಹೀಗೆ ವಿವಿಧ ರೀತಿಯಲ್ಲಿ ಸಾಧಕರನ್ನು ಮೋಸಗೊಳಿಸಲಾಗುತ್ತಿದೆ. ಈ ರೀತಿ ಅಥವಾ ಇನ್ನಿತರ ಯಾವುದೇ ಮಾಧ್ಯಮದಿಂದ ಮೋಸಕ್ಕೊಳಗಾಗಿದ್ದರೆ ಅಥವಾ ಅಂತಹ ಪ್ರಯತ್ನವನ್ನು ಯಾರಾದರೂ ಮಾಡಿದ್ದರೆ ಸಾಧಕರು ಅದರ ಸವಿಸ್ತಾರ ಮಾಹಿತಿಯನ್ನು ಕೆಳಗಿನ ವಿಳಾಸಕ್ಕೆ ಲಿಖಿತ ರೂಪದಲ್ಲಿ ತಿಳಿಸಬೇಕು. ಆ ಮಾಹಿತಿಯ ಆಧಾರದಲ್ಲಿ ಇತರ ಸಾಧಕರು ಮೋಸ ಹೋಗುವುದನ್ನು ತಡೆಗಟ್ಟಲು ಪ್ರಯತ್ನಿಸಬಹುದು.

ಹೆಸರು ಮತ್ತು ಸಂಪರ್ಕ ಕ್ರಮಾಂಕ : ಸೌ. ಭಾಗ್ಯಶ್ರೀ ಸಾವಂತ – 7058885610

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ‘ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್- 403401

ಗಣಕೀಯ ವಿಳಾಸ : [email protected]