ಹಿಂದೂ ವಿಧಿಜ್ಞ ಪರಿಷತ್ತು ಆಯೋಜಿಸಿದ ೩ ದಿನಗಳ ‘ಆನ್‌ಲೈನ್’ ರಾಷ್ಟ್ರೀಯ ನ್ಯಾಯವಾದಿ ಅಧಿವೇಶನ’ ಪ್ರಾರಂಭ !

ಸಂಸತ್ತಿನಂತೆ ನ್ಯಾಯಾಂಗದಲ್ಲಿಯೂ ‘ವೀಡಿಯೊ ಕಾನ್ಫರೆನ್ಸಿಂಗ್’ ಮೂಲಕ ಎಲ್ಲ ಮೊಕದ್ದಮೆಗಳ ಕಾರ್ಯಕಲಾಪ ನಡೆಯಲಿ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಸುಭಾಷ ಝಾ ಇವರ ಆಗ್ರಹ

ಒಂದು ಮೊಕದ್ದಮೆಯನ್ನು ೧೦ ನಿಮಿಷಗಳಲ್ಲಿ ಪೂರ್ಣಗೊಳಿಸಬಹುದಾದರೂ, ಅದು ಪೂರ್ಣಗೊಳ್ಳಲು ೧೦-೧೦ ದಿನಗಳನ್ನು ತೆಗೆದುಕೊಳ್ಳಲಾಗುತ್ತದೆ. ಮತ್ತೊಂದೆಡೆ ನಿಜವಾಗಿಯೂ ಸಮಯ ನೀಡಬೇಕಾದ ಪ್ರಕರಣಗಳನ್ನು ೨ ನಿಮಿಷಗಳಲ್ಲಿ ಇತ್ಯರ್ಥಪಡಿಸಲಾಗುತ್ತದೆ. ನನ್ನ ೩೩ ವರ್ಷಗಳ ಅನುಭವದಿಂದ ನಮ್ಮ ನ್ಯಾಯ ವ್ಯವಸ್ಥೆಯನ್ನು ಸುಧಾರಿಸುವ ಅವಶ್ಯಕತೆಯಿದೆ ಎಂಬುದು ಗಮನಕ್ಕೆ ಬಂದಿದೆ. ರಾಜ್ಯಸಭೆ ಮತ್ತು ಲೋಕಸಭೆಯು ಗೌಪ್ಯ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರೂ, ಅಲ್ಲಿ ‘ವಿಡಿಯೋ ಕಾನ್ಫರೆನ್ಸಿಂಗ್’ಗೆ ಅವಕಾಶವಿದೆ. ಇಂತಹ ಸಮಯದಲ್ಲಿ ನ್ಯಾಯದಾನವನ್ನು ‘ವೀಡಿಯೊ ಕಾನ್ಫರೆನ್ಸಿಂಗ್’ಗೆ ಏಕೆ ಅವಕಾಶವಿಲ್ಲ ? ಜಗತ್ತಿನ ಅನೇಕ ದೇಶಗಳಲ್ಲಿ ಸಂಪೂರ್ಣ ನ್ಯಾಯಾಂಗ ಪ್ರಕ್ರಿಯೆಯನ್ನು ಸಾರ್ವಜನಿಕರು ಯಾವುದೇ ಸಮಯದಲ್ಲಿ ‘ವೀಡಿಯೊ ಕಾನ್ಫರೆನ್ಸಿಂಗ್’ ಮೂಲಕ ವೀಕ್ಷಿಸಬಹುದು. ಭಾರತದಲ್ಲಿ ಮಾತ್ರ ಕೊರೋನಾದ ಹಿನ್ನಲೆಯಲ್ಲಿ ಸಂಚಾರ ನಿಷೇಧ ಜಾರಿಯಾದ ನಂತರ ‘ವೀಡಿಯೊ ಕಾನ್ಫರೆನ್ಸಿಂಗ್’ ಮೂಲಕ ನ್ಯಾಯದಾನ ಪ್ರಾರಂಭವಾಗಿದೆ; ಆದರೆ ನ್ಯಾಯಾಂಗವು ಈ ಪ್ರಕ್ರಿಯೆಯನ್ನು ಇನ್ನಷ್ಟು ಸಕ್ಷಮ ಮಾಡಬೇಕಾಗಿದೆ. ಒಂದು ವೇಳೆ ನ್ಯಾಯವ್ಯವಸ್ಥೆಯು ‘ವಿಡಿಯೋ ಕಾನ್ಫರೆನ್ಸಿಂಗ್’ ಅನ್ನು ಶಾಶ್ವತವಾಗಿ ಸ್ವೀಕರಿಸದಿದ್ದರೆ, ಕೇಂದ್ರ ಸರಕಾರವು ಮಧ್ಯಪ್ರವೇಶಿಸಿ ಸುಗ್ರೀವಾಜ್ಞೆಯನ್ನು ಹೊರಡಸಿ ‘ಎಲ್ಲಾ ಪ್ರಕರಣಗಳ ವಿಚಾರಣೆಗಳು ಧ್ವನಿಚಿತ್ರೀಕರಣ ಮಾಡುವುದು ಕಡ್ಡಾಯಗೊಳಿಸಬೇಕು ಎಂಬ ಕಾನೂನನ್ನು ರೂಪಿಸಬೇಕು’, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಸುಭಾಷ ಝಾ ಒತ್ತಾಯಿಸಿದ್ದಾರೆ. ಹಿಂದೂ ವಿಧಿಜ್ಞ ಪರಿಷತ್ತಿನ ವತಿಯಿಂದ ಹಿಂದೂ ರಾಷ್ಟ್ರ ಸ್ಥಾಪಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ೩ ದಿನಗಳ ‘ಆನ್‌ಲೈನ್’ ರಾಷ್ಟ್ರೀಯ ನ್ಯಾಯವಾದಿ ಅಧಿವೇಶನದಲ್ಲಿ ‘ಕೊರೋನಾ ಸಾಂಕ್ರಾಮಿಕ – ನ್ಯಾಯವ್ಯವಸ್ಥೆಯ ಸದ್ಯದ ಸ್ಥಿತಿ ಮತ್ತು ಉಪಾಯೋಜನೆ’ ಈ ವಿಷಯದ ಕುರಿತು ನ್ಯಾಯವಾದಿ ಝಾ ಅವರು ಮಾತನಾಡುತ್ತಿದ್ದರು.

ದೆಹಲಿಯಿಂದ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ) ಚಾರುದತ್ತ ಪಿಂಗಳೆಯವರ ಹಸ್ತದಿಂದ ದೀಪ ಬೆಳಗಿಸುವುದರೊಂದಿಗೆ ಈ ಅದಿವೇಶನವನ್ನು ಪ್ರಾರಂಭಿಸಲಾಯಿತು. ಸದ್ಗುರು (ಡಾ.) ಪಿಂಗಳೆಯವರು ‘ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ನ್ಯಾಯವಾದಿಗಳು ಸಾಧನೆ ಎಂದು ಹೇಗೆ ಯೋಗದಾನ ನೀಡಬೇಕು? ’ ಈ ಬಗ್ಗೆ ಮಾರ್ಗದರ್ಶನ ಮಾಡಿದರು. ಅವರು ಮಾತನ್ನು ಮುಂದುವರಿಸುತ್ತ, “ಅಧಿವೇಶನದ ಮಾಧ್ಯಮದಿಂದ ನಮಗೆ ರಾಷ್ಟ್ರ ಮತ್ತು ಧರ್ಮನಿಷ್ಠ ನ್ಯಾಯವಾದಿಗಳ ಸಂಘಟನೆಯನ್ನು ಮಾಡಬೇಕಿದೆ. ಸಮಾಜವ್ಯವಸ್ಥೆಯು ಕಾನೂನನ್ನು ಅವಲಂಬಿಸಿರುತ್ತದೆ. ಆದ್ದರಿಂದ ರಾಷ್ಟ್ರ ನಿರ್ಮಾಣದಲ್ಲಿ ನ್ಯಾಯವಾದಿಗಳ ಕೊಡುಗೆ ಅಮೂಲ್ಯವಾಗಿದೆ. ಹಿಂದೂ ಸಮಾಜದ ಮೇಲಿನ ಅನ್ಯಾಯದ ವಿರುದ್ಧ ನ್ಯಾಯವಾದಿಗಳು ಕೆಲಸ ಮಾಡಬೇಕು”, ಎಂದರು. ಈ ಸಂದರ್ಭದಲ್ಲಿ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್ ಅವರು ‘ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿ ನ್ಯಾಯವಾದಿಗಳ ಕೊಡುಗೆ’ ಈ ವಿಷಯದ ಕುರಿತು ಮಾತನಾಡಿದರು.

ರಾಮಮಂದಿರ ಮೊಕದ್ದಮೆಯ ಬಗ್ಗೆ ಹೋರಾಡುತ್ತಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ಮಾತನಾಡುತ್ತಾ, ‘ನ್ಯಾಯಾಲಯದಲ್ಲಿ ಅರ್ಜಿಗಳ ಮೂಲಕ ರಾಷ್ಟ್ರ ಮತ್ತು ಧರ್ಮ ಇವುಗಳ ರಕ್ಷಣೆಗಾಗಿ ಮಾಡಿದ ಕಾರ್ಯ’; ಜಮ್ಮುವಿನ ನ್ಯಾಯವಾದಿಗಳಾದ ಅಂಕುರ್ ಶರ್ಮಾ ಇವರು, ‘ಜಮ್ಮುವಿನಲ್ಲಿನ ‘ಲ್ಯಾಂಡ್ ಜಿಹಾದ್’ ವಿರುದ್ಧ ಮಾಡಿದ ನ್ಯಾಯಾಂಗ ಹೋರಾಟ’; ‘ಹಿಂದೂ ಜಾಗರಣ ಮಂಚ್’ ಇದರ ಅಸ್ಸಾಂನ ನ್ಯಾಯವಾದಿ ರಾಜೀಬ್ ನಾಥ್ ಅವರು ‘ಲವ್ ಜಿಹಾದ್ ಮತ್ತು ಮತಾಂತರವನ್ನು ನಿಲ್ಲಿಸಲು ಮಾಡಿದ ನ್ಯಾಯಾಂಗ ಮತ್ತು ಸಂಘಟನಾತ್ಮಕ ಕಾರ್ಯಗಳು’ ಹಾಗೂ ಮಡಿಕೇರಿಯ ನ್ಯಾಯವಾದಿ ಕೃಷ್ಣಮೂರ್ತಿಯವರು ‘ಕೊರೋನಾ ಸಾಂಕ್ರಾಮಿಕ ಹಾವಳಿ ಸಮಯದಲ್ಲಿ ಸಾಮಾಜದ ರಕ್ಷಣೆಗಾಗಿ ಮಾಡಿದ ಕಾರ್ಯ’ದ ಕುರಿತು ಮಾತನಾಡಿದರು. ಅಧಿವೇಶನದಲ್ಲಿ ಕಾಶ್ಮೀರಿ ಹಿಂದೂ ಪಂಚಾಯತದ ಅಧ್ಯಕ್ಷ ಅಜಯ್ ಪಂಡಿತಾ ಅವರನ್ನು ಜಿಹಾದಿ ಉಗ್ರರು ಹತ್ಯೆಗೈದಿರುವುದನ್ನು ಖಂಡಿಸಿ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.