ಮಥುರಾದಲ್ಲಿ ೨೦೦೦ ವರ್ಷಗಳಷ್ಟು ಹಳೆಯದಾದ ಅಗ್ನಿದೇವತೆಯ ವಿಗ್ರಹ ಪತ್ತೆ

ಮಥುರಾ (ಉತ್ತರ ಪ್ರದೇಶ) – ಇಲ್ಲಿಯ ಡಿಗ ಗೇಟ್ ಪ್ರದೇಶದಲ್ಲಿ ನೀರು ಸರಬರಾಜು ಇಲಾಖೆಯಿಂದ ಚರಂಡಿಗಾಗಿ ಭೂಮಿಯನ್ನು ಅಗೆಯುವಾಗ ೨೦೦೦ ವರ್ಷಗಳಷ್ಟು ಹಳೆಯ ಅಗ್ನಿದೇವತೆಯ ವಿಗ್ರಹ ಪತ್ತೆಯಾಗಿದೆ; ಆದರೆ ಪುರಾತತ್ವ ಇಲಾಖೆ ಅದನ್ನು ವಶಕ್ಕೆ ತೆಗೆದುಕೊಳ್ಳಲು ನಿರಾಕರಿಸಿದ್ದರಿಂದ ಅದನ್ನು ವಸ್ತುಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಗುವುದು. (ಪುರಾತತ್ವ ಇಲಾಖೆ ಅದನ್ನು ಸ್ವೀಕರಿಸಲು ಏಕೆ ನಿರಾಕರಿಸಿತು ? ‘೨ ಸಾವಿರ ವರ್ಷಗಳ ಹಿಂದಿನ ವಿಗ್ರಹ ಸಿಕ್ಕಿದ ನಂತರ ಅದರ ಬಗ್ಗೆ ಸಂಶೋಧನೆಯನ್ನು ಮಾಡಬೇಕು’, ಎಂದು ಪುರಾತತ್ವ ಇಲಾಖೆಗೆ ಏಕೆ ಅನಿಸುವುದಿಲ್ಲ ? ಇದರಿಂದ ಪುರಾತತ್ವ ಇಲಾಖೆಯ ಹಿಂದೂದ್ವೇಷ ಕಾಣಿಸುತ್ತದೆ. ಇಂತಹ ಪುರಾತತ್ವ ಇಲಾಖೆಯನ್ನು ವಿಸರ್ಜಿಸಬೇಕು ! – ಸಂಪಾದಕರು)