ಜಗತ್ತಿನ ೮೧ ದೇಶಗಳಲ್ಲಿ ಕೊರೋನಾದ ೨ ನೇ ಅಲೆ ಬರಲಿದೆ ! – ಜಾಗತಿಕ ಆರೋಗ್ಯ ಸಂಸ್ಥೆ

ಜಗತ್ತಿನ ೨೦೦ ಕ್ಕೂ ಹೆಚ್ಚು ದೇಶಗಳಲ್ಲಿ ಕೊರೋನಾದ ಸಂಕ್ರಮಣವಾಗಿದೆ. ಇದರಲ್ಲಿ ಹೆಚ್ಚಿನ ದೇಶದಲ್ಲಿ ಕೊರೋನಾದ ಮೊದಲನೇ ಅಲೆ ಬಂದಿರುವಗಲೇ ಈಗ ೮೧ ದೇಶದಲ್ಲಿ ಎರಡನೇಯ ಅಲೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ, ಎಂದು ಜಾಗತಿಕ ಆರೋಗ್ಯ ಸಂಸ್ಥೆಯು ಎಚ್ಚರಿಕೆ ನೀಡಿದೆ.

ಕಾಶ್ಮೀರದಲ್ಲಿ ೪ ಭಯೋತ್ಪಾದಕರ ಹತ್ಯೆ

ಕಾಶ್ಮೀರದಲ್ಲಿ ನಡೆದ ೨ ಚಕಮಕಿಗಳಲ್ಲಿ ೪ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಶೋಪಿಯಾಂನ ಲಕೀರಪುರದಲ್ಲಿ ನಡೆದ ಚಕಮಕಿಯಲ್ಲಿ ಓರ್ವ ಭಯೋತ್ಪಾದಕನನ್ನು ಹತ್ಯೆ ಮಾಡಿದರೆ, ಶ್ರೀನಗರದ ಜಾದಿಬಲನಲ್ಲಿ ಶೋಧ ಕಾರ್ಯಾಚರಣೆಯ ಸಮಯದಲ್ಲಾದ ಚಕಮಕಿಯಲ್ಲಿ ೩ ಭಯೋತ್ಪಾದಕರ ಹತ್ಯೆ ಮಾಡಲಾಯಿತು.

ಚೀನಾದ ೧೮ ಸೈನಿಕರ ಕತ್ತು ಮುರಿದು ಹತ್ಯೆ ಮಾಡಿದ ಭಾರತೀಯ ಸೈನಿಕರು !

ಜೂನ್ ೧೫ ರ ರಾತ್ರಿಯಂದು ಗಲವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರು ಹಾಗೂ ಚೀನಾದ ಸೈನಿಕರ ನಡುವೆ ನಡೆದ ಕಾಳಗದಲ್ಲಿ ತೋರಿದ ಪರಾಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಯು ಈಗ ಬಹಿರಂಗವಾಗುತ್ತಿದೆ. ಆರಂಭದಲ್ಲಿ ಚೀನಾವು ಭಾರತೀಯ ಸೈನ್ಯದ ಕಮಾಂಡಿಗ್ ಆಫಿಸರ್ ಕರ್ನಲ ಬಿ. ಸಂತೋಷ ಬಾಬುರವರ ಮೇಲೆ ದಾಳಿ ಮಾಡಿದರು.

ಯೋಗ ಮಾಡುವ ಸಾಧಕನು ಆಪತ್ಕಾಲದಲ್ಲಿ ಎಂದಿಗೂ ಧೈರ್ಯಗೆಡುವುದಿಲ್ಲ ! – ಪ್ರಧಾನಮಂತ್ರಿ ನರೇಂದ್ರ ಮೋದಿ

ಯೋಗ ಮಾಡುವ ಸಾಧಕನು ಆಪತ್ಕಾಲದಲ್ಲಿ ಎಂದಿಗೂ ಧೈರ್ಯಗೆಡುವುದಿಲ್ಲ, ಎಂದು ಪ್ರಧಾನಮಂತ್ರಿ ಮೋದಿಯವರು ಪ್ರತಿಪಾದಿಸಿದರು. ಅವರು ೬ ನೇ ಅಂತರರಾಷ್ಟ್ರೀಯ ಯೋಗದಿನದ ನಿಮಿತ್ತ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ವಿಶ್ವ ಯೋಗ ದಿನ ೨೧ ಜೂನ್ ೨೦೨೦

ಶರೀರವನ್ನು ಸದೃಢವಾಗಿಸಲು ಮಾಡಲಾಗುವ ‘ಆರೋಬಿಕ್ಸ್ನಂತಹ ವ್ಯಾಯಾಮ ಪ್ರಕಾರಗಳಿಂದ ಕೇವಲ ಶಾರೀರಿಕ ವ್ಯಾಯಾಮ ಮತ್ತು ಹೆಚ್ಚಾಗಿ ಮನೋರಂಜನೆಯಾಗುತ್ತದೆ. ಪ್ರಾಚೀನ ಋಷಿಮುನಿಗಳ ಕೊಡುಗೆಯಾಗಿರುವ ಯೋಗಾಸನದಿಂದ ಎಷ್ಟೋ ವರ್ಷ ಆರೋಗ್ಯವಂತ ಮತ್ತು ದೀರ್ಘಾಯುಷ್ಯರಾಗಿರಲು ಸಾಧ್ಯವಾಗುತ್ತದೆ.

ಮನೋರೋಗ ತಜ್ಞರೇ, ಡಾಕ್ಟರರೇ ಮತ್ತು ವೈದ್ಯರೇ, ಮನೋರೋಗಿಗಳು ಆಪತ್ಕಾಲವನ್ನು ಎದುರಿಸುವಂತಾಗಲು ಅವರಿಂದ ಮುಂದಿನಂತೆ ಸಿದ್ಧತೆಗಳನ್ನು ಮಾಡಿಸಿಕೊಳ್ಳಿ !

ತೀವ್ರ ಸ್ವಭಾವದೋಷ ಮತ್ತು ತೀವ್ರ ಪ್ರಾರಬ್ಧವೇ ಹೆಚ್ಚು ಕಡಿಮೆ ಎಲ್ಲ ಮಧ್ಯಮ ಮತ್ತು ತೀವ್ರ ಮನೋರೋಗಗಳಿಗೆ ಕಾರಣವಾಗಿವೆ. ಆಪತ್ಕಾಲದಲ್ಲಿ ಚಿಂತೆಯನ್ನು ಕಡಿಮೆ ಮಾಡಲು, ನಿರಾಶೆಯನ್ನು ಕಡಿಮೆ ಮಾಡಲು, ನಿದ್ರೆ ಬರಲು ಇತ್ಯಾದಿಗಳಿಗೆ ವಿವಿಧ ರೀತಿಯ ಮಾತ್ರೆಗಳು ಸಿಗುವುದಿಲ್ಲ.

ಭಾರತದ ಇನ್ನೊಂದು ಭಾಗವನ್ನು ತನ್ನದೆಂದು ಹೇಳಿದ ನೇಪಾಳ

ಇಲ್ಲಿಯ ಮೋತಿಹಾರಿಯಲ್ಲಿನ ಕೆಲವು ಪ್ರದೇಶಗಳನ್ನು ತನ್ನದೆಂದು ನೇಪಾಳವು ಹೇಳಿಕೊಂಡಿದೆ. ನೇಪಾಳವು ಇಲ್ಲಿಯ ಢಾಕಾ ಬ್ಲಾಕ್‌ನಲ್ಲಿನ ಲಾಲ್ ಬಕೈಯಾ ನದಿಯ ಮೇಲಿನ ತಡೆಗೋಡೆಯ ಕೆಲಸವನ್ನು ನಿಲ್ಲಿಸಿದೆ. ಅವರ ಪ್ರಕಾರ, ‘ಈ ತಡೆಗೋಡೆಯ ಕೆಲವು ಪ್ರದೇಶಗಳನ್ನು ತನ್ನ ಗಡಿಯಲ್ಲಿ ಬರುತ್ತದೆ ಎಂದು ಹೇಳಿದೆ.

ಪಂಜಾಬನಲ್ಲಿ ವಿದೇಶಿ ಶಸ್ತ್ರ ಸಂಗ್ರಹಗಳೊಂದಿಗೆ ಇಬ್ಬರು ಖಲಿಸ್ತಾನಿ ಭಯೋತ್ಪಾದಕರ ಬಂಧನ

ಪಂಜಾಬ ಪೊಲೀಸರು ಇಲ್ಲಿಯ ಗುರುಮಿತ ಸಿಂಗ್ ಹಾಗೂ ಬಿಕ್ರಮ ಸಿಂಗ್ ಈ ಇಬ್ಬರು ಖಲಿಸ್ತಾನಿ ಭಯೋತ್ಪಾದಕರನ್ನು ವಿದೇಶಿ ಶಸ್ತ್ರಸಂಗ್ರಹ ಸಹಿತ ಬಂಧಿಸಲಾಗಿದೆ. ಇವರಿಬ್ಬರು ಪಂಜಾಬನಲ್ಲಿ ದೊಡ್ಡಪ್ರಮಾಣದಲ್ಲಿ ದಾಳಿ ಮಾಡುವ ಸಂಚನ್ನು ರೂಪಿಸುತ್ತಿದ್ದರು.

ಪುರಿಯಲ್ಲಿ ಭಗವಾನ ಜಗನ್ನಾಥನ ರಥಯಾತ್ರೆಗೆ ಅನುಮತಿ ನಿರಾಕರಿಸಿದ ತೀರ್ಪಿನ  ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಮರುವಿಚಾರಣೆ ಅರ್ಜಿ ಸಲ್ಲಿಕೆ

ಕೊರೋನಾದ ಹಾವಳಿಯಿಂದಾಗಿ ಸರ್ವೋಚ್ಚ ನ್ಯಾಯಾಲಯವು ಜೂನ್ ೨೩ ರಿಂದ ಆರಂಭವಾಗಲಿರುವ ಭಗವಾನ ಶ್ರೀ ಜಗನ್ನಾಥನ ರಥಯಾತ್ರೆಗೆ ಅನುಮತಿಯನ್ನು ನಿರಾಕರಿಸಿದೆ. ಇದರ ಬಗ್ಗೆ ಮರುವಿಚಾರಣೆ ಮಾಡುವಂತೆ ರಾಜ್ಯದ ಆಫತಾಬ ಹುಸೈನ್ ಇವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ರೋಗನಿರೋಧಕ ಶಕ್ತಿಯು ಉತ್ತಮವಾಗಿರಲು ‘ಆಯುಷ್’ ಸಚಿವಾಲಯವು ಸೂಚಿಸಿದ ‘ಆಯುರ್ವೇದದ ಕಷಾಯ’

ಒಬ್ಬ ವ್ಯಕ್ತಿಗಾಗಿ ಕಷಾಯವನ್ನು ತಯಾರಿಸುವ ಪ್ರಮಾಣ – ನೀರು ೧೦೦ ಮಿ.ಲೀ. (ಸಾಧಾರಣ ೨ ಕಪ್) ತುಳಸಿಯ ೫-೬ ಎಲೆಗಳು (ಒಣಗಿದ / ತಾಜಾ) ದಾಲ್ಚಿನಿ (ಪುಡಿ ಮಾಡುವುದು) ೧ ಚಿಟಿಕೆ ಪುಡಿ ಶುಂಠಿ ೧ ಚಿಟಿಕೆ ಪುಡಿ ಕರಿಮೆಣಸಿನ ೧/೨ ಚಿಟಿಕೆ ಪುಡಿ (ಪಿತ್ತದ ತೊಂದರೆ ಇದ್ದರೆ ಹಾಕಬಾರದು)