ಪುಲ್ವಾಮಾದಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ, ಒಬ್ಬ ಸೈನಿಕ ಹುತಾತ್ಮ

ಇಲ್ಲಿ ನಡೆದ ಚಕಮಕಿಯಲ್ಲಿ ರಕ್ಷಣಾ ಪಡೆಯು ಇಬ್ಬರು ಭಯೋತ್ಪಾದಕರನ್ನು ಕೊಂದು ಹಾಕಿದ್ದಾರೆ, ಇದರಲ್ಲಿ ಕೇಂದ್ರೀಯ ಮೀಸಲು ಪಡೆಯ ಸೈನಿಕ ಸುನೀಲ್ ಕಾಳೆಯವರು ಹುತಾತ್ಮರಗಿದ್ದಾರೆ. ಅವರು ಸೊಲ್ಲಾಪುರದ ಪಾನಗಾವನಲ್ಲಿ ನಿವಾಸಿಯಾಗಿದ್ದರು.

ಆಂಧ್ರಪ್ರದೇಶದಲ್ಲಿ ೨೦ ಲಕ್ಷ ರೂಪಾಯಿ ಬೆಲೆಯ ೨೬ ಸಾವಿರ ಕೆಜಿ ಗೋಮಾಂಸ ವಶಕ್ಕೆ

ಆಂಧ್ರಪ್ರದೇಶ-ಓಡಿಶಾ ಗಡಿಭಾಗದ ಶ್ರೀಕಾಕುಲಮ್‌ನಲ್ಲಿಯ ಪುರುಷೋತ್ತಮಪುರಮ್ ತಪಾಸಣಾ ಕೇಂದ್ರದಲ್ಲಿ ಜೂನ್ ೨೧ ರಂದು ಆಂಧ್ರಪ್ರದೇಶದ ಪೊಲೀಸರು ಸರಿಸುಮಾರು ೨೬ ಸಾವಿರ ಕೆಜಿ ಗೋಮಾಂಸ ವಶಪಡಿಸಿಕೊಂಡಿದ್ದಾರೆ. ಈ ಗೋಮಾಂಸವನ್ನು ಲಾರಿಯ ಮೂಲಕ ಬಂಗಾಲದಿಂದ ತಮಿಳುನಾಡು ರಾಜ್ಯಕ್ಕೆ ಸಾಗಿಸಲಾಗುತ್ತಿತ್ತು.

ಕಾಂಗ್ರೆಸ್‌ನ ಕಾಲದಲ್ಲಿ ಜೈಲಿನಲ್ಲಾದ ಚಿತ್ರಹಿಂಸೆಯಿಂದಾಗಿ ನನ್ನ ದೃಷ್ಟಿ ಕ್ಷೀಣಿಸಿದೆ ಮತ್ತು ನನ್ನ ಮೆದುಳು ಊದಿಕೊಂಡಿದೆ ! – ಭಾಜಪ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರ ಆರೋಪ

ಕಾಂಗ್ರೆಸ್ ಸರಕಾರದ ಕಾಲದಲ್ಲಿ ಸೆರೆಮನೆಯಲ್ಲಿದ್ದಾಗ ನನ್ನನ್ನು ಹಿಂಸಿಸಲಾಯಿತು. ಆದ್ದರಿಂದ ನಾನು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದು ನನ್ನ ದೃಷ್ಟಿ ಕ್ಷೀಣಿಸಿದೆ. ಅದರೊಂದಿಗೆ ನನ್ನ ಮೆದುಳಿನಲ್ಲಿ ಊತವಿದೆ ಎಂದು ಭೋಪಾಲ್‌ನ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಆರೋಪಿಸಿದ್ದಾರೆ. ಅಂತರರಾಷ್ಟ್ರೀಯ ಯೋಗ ದಿನದ ನಿಮಿತ್ತ ಇಲ್ಲಿನ ಭಾಜಪ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಜಮ್ಮು – ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್.ಪಿ. ವೇದ ಇವರ ಸಲಹೆ

ಭಯೋತ್ಪಾದನೆ ವಿರುದ್ಧ ಹೋರಾಡಲು ಕಾಶ್ಮೀರ ಕಣಿವೆಯಲ್ಲಿರುವ ಹಿಂದೂ ಅಲ್ಪಸಂಖ್ಯಾತರಿಗೆ ತಮ್ಮ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಪೂರೈಸಬೇಕು, ಎಂದು ಜಮ್ಮು ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್.ಪಿ. ವೇದ ಇವರು ಆಂಗ್ಲ ಸುದ್ದಿವಾಹಿನಿಯೊಂದರಲ್ಲಿ ಮಾತನಾಡುತ್ತಾ ಹೇಳಿದರು

ಜಪಾನಿ ನಾಗರಿಕರ ಉದ್ಯಮಶೀಲತೆ !

ಖರೀದಿಗೆ ಬರುವ ಜನರೂ ಅತ್ಯಂತ ಪ್ರಾಮಾಣಿಕತೆಯಿಂದ ತಮ್ಮ ಆಕಾರದ ಪಾದರಕ್ಷೆಗಳನ್ನು ಖರೀದಿಸಿ ಅದರ ಹಣವನ್ನು ಪಕ್ಕದ ಡಬ್ಬದಲ್ಲಿಡುತ್ತಿದ್ದರು. ಇದರಿಂದ ಒಂದೇ ಸಮಯದಲ್ಲಿ ಒಂದು ವ್ಯವಸಾಯವು ಮನುಷ್ಯನ ಸಮಯ ತಗಲದೇ ಹಣದ ಚಲನ-ವಲನದಿಂದ ಆಗುತ್ತಿತ್ತು.

ನೇಪಾಳದ ರುಯಿ ಗ್ರಾಮದ ಮೇಲೆ ಚೀನಾದಿಂದ ಅಕ್ರಮ ನಿಯಂತ್ರಣ

ನೇಪಾಳವು ಭಾರತದ ೩ ಪ್ರದೇಶಗಳನ್ನು ತನ್ನದೆಂದು ಹೇಳಿಕೊಳ್ಳುತ್ತ ಸ್ವಂತದ ನಕ್ಷೆಯಲ್ಲಿ ಬದಲಾವಣೆ ಮಾಡಿದೆ; ಆದರೆ ಇನ್ನೊಂದೆಡೆ ಚೀನಾವು ನೇಪಾಳಕ್ಕೂ ವಿಶ್ವಾಸಘಾತ ಮಾಡುತ್ತ ಅದರ ಉತ್ತರ ಗೊರಖಾದಲ್ಲಿಯ ರುಯಿ ಗ್ರಾಮದ ಮೇಲೆ ನಿಯಂತ್ರಣ ಸಾಧಿಸಿದೆ. ನೇಪಾಳದ ಕಮ್ಯುನಿಸ್ಟ್ ಪಕ್ಷದ ಸರಕಾರವು ಚೀನಾದ ಈ ಕುಕೃತ್ಯವನ್ನು ಮುಚ್ಚಿಡಲು ಭಾರತದ ೩ ಪ್ರದೇಶಗಳನ್ನು ತನ್ನದೆಂದು ಹೇಳಿಕೊಂಡಿದೆ,

ಭಾರತದ ಇನ್ನೊಂದು ಭಾಗವನ್ನು ತನ್ನದೆಂದು ಹೇಳಿದ ನೇಪಾಳ

ಮೋತಿಹಾರಿಯಲ್ಲಿನ ಕೆಲವು ಪ್ರದೇಶಗಳನ್ನು ತನ್ನದೆಂದು ನೇಪಾಳವು ಹೇಳಿಕೊಂಡಿದೆ. ನೇಪಾಳವು ಇಲ್ಲಿಯ ಢಾಕಾ ಬ್ಲಾಕ್‌ನಲ್ಲಿನ ಲಾಲ್ ಬಕೈಯಾ ನದಿಯ ಮೇಲಿನ ತಡೆಗೋಡೆಯ ಕೆಲಸವನ್ನು ನಿಲ್ಲಿಸಿದೆ. ಅವರ ಪ್ರಕಾರ, ‘ಈ ತಡೆಗೋಡೆಯ ಕೆಲವು ಪ್ರದೇಶಗಳನ್ನು ತನ್ನ ಗಡಿಯಲ್ಲಿ ಬರುತ್ತದೆ ಎಂದು ಹೇಳಿದೆ.

ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ನೀಡಲು ಧರ್ಮಪ್ರೇಮಿಗಳು ಟ್ವಿಟರ್ ಮೂಲಕ ನಡೆಸಿದ ‘ಟ್ರೆಂಡ್’ ಒಮ್ಮೆಲೆ ನಿಂತಿತು !

ಜೂನ್ ೨೦ ಈ ಅಂತರರಾಷ್ಟ್ರೀಯ ನಿರಾಶ್ರಿತದಿನ ನಿಮಿತ್ತ ಜೂನ್ ೨೧ ರಂದು ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ನ್ಯಾಯಸಿಗಲೆಂದು ಧರ್ಮಪ್ರೇಮಿಗಳಿಂದ #KashmiriHinduLivesMatter ಈ ಹ್ಯಾಶ್‌ಟ್ಯಾಗ್(ಒಂದೇ ವಿಷಯದ ಮೇಲೆ ಟ್ವಿಟರನಲ್ಲಿ ಚರ್ಚೆ ಮಾಡುವುದು) ಟ್ರೆಂಡ್ ಮಾಡಲಾಗಿತ್ತು.

ಜಗನ್ನಾಥ ರಥಯಾತ್ರೆಗೆ ಸರ್ವೋಚ್ಚ ನ್ಯಾಯಾಲಯದಿಂದ ದೊರೆತ ಅನುಮತಿ, ಇದು ಹಿಂದೂಗಳ ಗೆಲುವು!

ಪುರಿಯ ಜಗನ್ನಾಥ ರಥಯಾತ್ರೆ ಶತಮಾನಗಳಿಂದ ನಡೆಯುತ್ತಿದ್ದು ಇತಿಹಾಸವಿದೆ. ಅರ್ಜಿಯೊಂದರ ವಿಚಾರಣೆಯ ಸಂದರ್ಭದಲ್ಲಿ, ಸರ್ವೋಚ್ಚ ನ್ಯಾಯಾಲಯವು ಕರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಯಾತ್ರೆಯ ಆಯೋಜನೆಯನ್ನು ೧೮.೬.೨೦೨೦ ರಂದು ತಡೆ ನೀಡಿತ್ತು. ಇದರ ನಂತರ ಹಿಂದೂ ಜನಜಾಗೃತಿ ಸಮಿತಿಯು ಈ ತೀರ್ಪನ್ನು ಬದಲಾಯಿಸುವಂತೆ ಕೋರಿ ಸರ್ವೋಚ್ಛ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿತ್ತು.

ಓಡಿಶಾದ ಪಾರಾದೀಪ ಬಂದರಿನಿಂದ ಚೀನಾಗೆ ಕಬ್ಬಿಣದ ಅದಿರನ್ನು ಸಾಗಿಸುವ ೨೦ ನೌಕೆಗಳ ಸಾಗಾಟವನ್ನು ತಡೆಗಟ್ಟಿರಿ !

ಚೀನಾವು ಭಾರತೀಯ ಸೈನಿಕರ ಮೇಲೆ ಮಾಡಿದ ಆಕ್ರಮಣವನ್ನು ಖಂಡಿಸಲು ‘ಭಾರತ ರಕ್ಷಾ ಮಂಚ್’ ಈ ಹಿಂದುತ್ವನಿಷ್ಠ ಸಂಘಟನೆಯು ಇಲ್ಲಿಯ ಸ್ಟೇಶನ್ ಚೌಕಿಯಲ್ಲಿ ಸಭೆಯ ಆಯೋಜನೆಯನ್ನು ಮಾಡಿತ್ತು. ಈ ಸಭೆಯಲ್ಲಿ ‘ಪಾರಾದೀಪ ಬಂದರಿನಲ್ಲಿ ನಿಂತಿರುವ ಹಾಗೂ ಚೀನಾಗೆ ಕಬ್ಬಿಣದ ಅದಿರನ್ನು ಸಾಗಿಸುವ ೨೦ ನೌಕೆಗಳ ಸಾಗಾಟವನ್ನು ರದ್ದುಪಡಿಸೇಕು’, ‘ಚೀನಾದೊಂದಿಗಿನ ಎಲ್ಲ ವ್ಯಾಪಾರಗಳನ್ನು ನಿಲ್ಲಿಸಬೇಕು’, ಎಂದು ಆಗ್ರಹಿಸಲಾಯಿತು