ಯೋಗ ಮಾಡುವ ಸಾಧಕನು ಆಪತ್ಕಾಲದಲ್ಲಿ ಎಂದಿಗೂ ಧೈರ್ಯಗೆಡುವುದಿಲ್ಲ ! – ಪ್ರಧಾನಮಂತ್ರಿ ನರೇಂದ್ರ ಮೋದಿ

ನವ ದೆಹಲಿ – ಯೋಗ ಮಾಡುವ ಸಾಧಕನು ಆಪತ್ಕಾಲದಲ್ಲಿ ಎಂದಿಗೂ ಧೈರ್ಯಗೆಡುವುದಿಲ್ಲ, ಎಂದು ಪ್ರಧಾನಮಂತ್ರಿ ಮೋದಿಯವರು ಪ್ರತಿಪಾದಿಸಿದರು. ಅವರು ೬ ನೇ ಅಂತರರಾಷ್ಟ್ರೀಯ ಯೋಗದಿನದ ನಿಮಿತ್ತ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಪ್ರಧಾನಮಂತ್ರಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ,

೧. ಯಾವುದು ನಮ್ಮನ್ನು ಒಗ್ಗೂಡಿಸುತ್ತದೆಯೋ ಹಾಗೂ ನಮ್ಮೊಳಿನ ಅಂತರವನ್ನು ಕಡಿಮೆ ಮಾಡುತ್ತದೆಯೋ, ಅದೇ ‘ಯೋಗ’ ಆಗಿದೆ.

೨. ಕೊರೋನಾದ ಈ ಸಂಕಟದಲ್ಲಿ ಈ ಬಾರಿ ಯೋಗದಿನವನ್ನು ಮನೆಯಲ್ಲೇ ಆಚರಿಸಲಾಗುತ್ತಿರುವುದರಿಂದ ಇದು ಕುಟುಂಬದವರಲ್ಲಿ ಪ್ರೀತಿಯನ್ನು ಹೆಚ್ಚಿಸುವ ದಿನವಾಗಲಿದೆ. ಸಣ್ಣ ಮಕ್ಕಳು, ಯುವಕರು, ಹಿರಿಯರು, ಕುಟುಂಬದ ಹಿರಿಯರೊಂದಿಗೆ ಒಂದೇ ಸಮಯದಲ್ಲಿ ಯೋಗದ ಮಾಧ್ಯಮದಿಂದ ಜೋಡಿಸಲ್ಪಟ್ಟಿದ್ದರಿಂದ ಸಂಪೂರ್ಣ ಮನೆಯಲ್ಲಿ ಒಂದು ಶಕ್ತಿಯ ಸಂಚಾರವಾಗುತ್ತಿರುತ್ತದೆ. ಇದರಿಂದ ಈ ಸಲದ ಯೋಗದಿನ ಭಾವನಾತ್ಮಕ ಯೋಗದ ದಿನವಾಗಿದೆ. ನಮ್ಮ ಕುಟುಂಬಿಕ ಪ್ರೀತಿಯನ್ನು ಹೆಚ್ಚಿಸುವ ದಿನವಾಗಿದೆ.

೩. ಕೊರೋನಾದ ವಿಷಾಣು ಅದು ವಿಶೇಷವಾಗಿ ಶ್ವಾಸಕೋಶದ ಮೇಲೆ ಆಕ್ರಮಣ ಮಾಡುತ್ತದೆ. ಪ್ರಾಣಾಯಾಮ ಮಾಡುವುದರಿಂದ ನಮ್ಮ ಶ್ವಾಸಕೋಶ ಸದೃಢವಾಗಲು ಸಹಾಯವಗುತ್ತದೆ. ನೀವು ಪ್ರಾಣಾಯಾಮವನ್ನು ಪ್ರತಿದಿನ ಮಾಡಬೇಕು, ಅದೇರೀತಿ ಅನುಲೋಮ-ಪ್ರತಿಲೋಮನೊಂದಿಗೆ ಇತರ ಪ್ರಾಣಾಯಾಮಗಳನ್ನು ಕಲಿತುಕೊಳ್ಳಬೇಕು.

೪. ಯಾವ ವ್ಯಕ್ತಿಯು ಏಕಾಂತದಲ್ಲಿಯೂ ಕ್ರಿಯಾಶೀಲವಾಗಿರುತ್ತಾರೆಯೋ ಅವರೇ ಆದರ್ಶವ್ಯಕ್ತಿಯಾಗಿದ್ದಾರೆ. ಈ ವ್ಯಕ್ತಿ ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಸಂಪೂರ್ಣ ಶಾಂತಿಯ ಆನಂದ ಪಡೆಯುತ್ತಾನೆ. ಯಾವುದೇ ವ್ಯಕ್ತಿಗಾಗಿ ಒಂದು ದೊಡ್ಡ ಕ್ಷಮತೆ ಇರುತ್ತದೆ ಹಾಗೂ ಯೋಗವು ಅದಕ್ಕೆ ಸಹಾಯ ಮಾಡುತ್ತದೆ. ಅನುಕೂಲತೆ-ಅನಾನುಕೂಲತೆ, ಯಶಸ್ಸು-ಸೋಲು, ಸುಖ-ದುಃಖ, ಹೀಗೆ ಪ್ರತಿಯೊಂದು ಪರಿಸ್ಥಿತಿಯಲ್ಲಿ ಇಂತಹ ವ್ಯಕ್ತಿ ನಿಶ್ಚಲವಾಗಿರುತ್ತಾರೆ. ಇದರ ಹೆಸರೇ ‘ಯೋಗ’ ಆಗಿದೆ.