ವಿಶ್ವ ಯೋಗ ದಿನ ೨೧ ಜೂನ್ ೨೦೨೦

ಸೂರ್ಯ ನಮಸ್ಕಾರದ ಮಹತ್ವ ಮತ್ತು ಅದನ್ನು ಮಾಡುವುದರಿಂದ ಆಗುವ ಲಾಭಗಳು

ಶರೀರವನ್ನು ಸದೃಢವಾಗಿಸಲು ಮಾಡಲಾಗುವ ‘ಆರೋಬಿಕ್ಸ್ನಂತಹ ವ್ಯಾಯಾಮ ಪ್ರಕಾರಗಳಿಂದ ಕೇವಲ ಶಾರೀರಿಕ ವ್ಯಾಯಾಮ ಮತ್ತು ಹೆಚ್ಚಾಗಿ ಮನೋರಂಜನೆಯಾಗುತ್ತದೆ. ಪ್ರಾಚೀನ ಋಷಿಮುನಿಗಳ ಕೊಡುಗೆಯಾಗಿರುವ ಯೋಗಾಸನದಿಂದ ಎಷ್ಟೋ ವರ್ಷ ಆರೋಗ್ಯವಂತ ಮತ್ತು ದೀರ್ಘಾಯುಷ್ಯರಾಗಿರಲು ಸಾಧ್ಯವಾಗುತ್ತದೆ. ಭಾರತಮಾತೆಯನ್ನು ಪರಕೀಯದಾಸ್ಯದಿಂದ ಮುಕ್ತ ಮಾಡಲು ಆತ್ಯಾಚಾರಿ ಆಂಗ್ಲರ ಮೇಲೆ ಗುಂಡು ಹೊಡೆಯುವ ಚಾಪೇಕರ ಬಂಧು ಕ್ರಾಂತಿಕಾರ್ಯಕ್ಕೆ ಅವಶ್ಯಕತೆಯೆಂದು ಪ್ರತಿದಿನ ೧೨೦೦ ಸೂರ್ಯನಮಸ್ಕಾರ ಹಾಕುತ್ತಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಗುರು ಸಮರ್ಥ ರಾಮದಾಸಸ್ವಾಮಿಯವರು ಬ್ರಾಹ್ಮಿ ಮುಹೂರ್ತದಲ್ಲಿ ಪ್ರತಿದಿನ ೧೨೦೦ ಸೂರ್ಯನಮಸ್ಕಾರ ಹಾಕುತ್ತಿದ್ದರು. ಈಗ ನಾವು ‘ಅಂತಾರಾಷ್ಟ್ರೀಯ ಯೋಗದಿನದ ನಿಮಿತ್ತ ಸೂರ್ಯ ನಮಸ್ಕಾರದ ಲಾಭವನ್ನು ಅರಿತುಕೊಳ್ಳೋಣ !

ಸೂರ್ಯನಮಸ್ಕಾರವನ್ನು ಬೆಳಗಿನ ಜಾವ ಸೂರ್ಯೋದಯದ ಸಮಯದಲ್ಲಿ ಪೂರ್ವಕ್ಕೆ ಮುಖ ಮಾಡಿ ಮಾಡಬೇಕು.

ಸೂರ್ಯನಮಸ್ಕಾರದ ಮಹತ್ವ

ಆದಿತ್ಯಸ್ಯ ನಮಸ್ಕಾರಂ ಯೇ ಕುರ್ವಂತಿ ದಿನೇ ದಿನೇ |

ಜನ್ಮಾಂತರಸಹಸ್ರೇಷು ದಾರಿದ್ರವು ನೋಪಜಾಯತೇ ||

ಅರ್ಥ : ಸೂರ್ಯನಮಸ್ಕಾರವನ್ನು ಮಾಡುವ ವ್ಯಕ್ತಿಗೆ ಅವನ ಸಹಸ್ರ ಜನ್ಮಗಳಲ್ಲಿಯೂ ದಾರಿದ್ರವು ಬರುವುದಿಲ್ಲ.

೩. ಸೂರ್ಯನಮಸ್ಕಾರದ ಸಮಯದಲ್ಲಿ ಮಾಡುವಾಗ ಶ್ವಸನ ಕ್ರಿಯೆಯ ಅರ್ಥ

 ಅ. ಪೂರಕ ಅಂದರೆ ದೀರ್ಘವಾದ ಉಸಿರನ್ನು ಒಳಗೆ ತೆಗೆದುಕೊಳ್ಳುವುದು.

ಆ. ರೇಚಕ ಅಂದರೆ ದೀರ್ಘವಾಗಿ ಉಸಿರನ್ನು ಹೊರಗೆ ಹಾಕುವುದು.

ಇ. ಕುಂಭಕ ಅಂದರೆ ಉಸಿರನ್ನು ಹಿಡಿದಿಟ್ಟುಕೊಳ್ಳುವುದು. ಅಂತರ್ ಕುಂಭಕ ಅಂದರೆ ಉಸಿರನ್ನು ಒಳಗೆ ತೆಗೆದುಕೊಂಡ ನಂತರ ಅದನ್ನು ಒಳಗೆ ಹಿಡಿದಿಟ್ಟುಕೊಳ್ಳುವುದು. ಬಹಿರ್ ಕುಂಭಕ ಅಂದರೆ ಉಸಿರನ್ನು ಹೊರಗೆ ಹಾಕಿದ ನಂತರ ಉಸಿರನ್ನು ತಡೆಹಿಡಿಯುವುದು.

೪. ಸೂರ್ಯನಮಸ್ಕಾರದ ಲಾಭಗಳು

ಅ. ದೇಹದ ಎಲ್ಲ ಮುಖ್ಯ ಅವಯವ

ಗಳಲ್ಲಿ ರಕ್ತಸಂಚಾರವನ್ನು ಉತ್ತಮಪಡಿಸುತ್ತದೆ.

ಆ. ಹೃದಯ ಮತ್ತು ಶ್ವಾಸಕೋಶಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಇ. ತೋಳುಗಳು ಮತ್ತು ಸೊಂಟದ ಸ್ನಾಯು ಗಳನ್ನು ಬಲಪಡಿಸುತ್ತದೆ.

ಈ. ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಕರಗಿಸುತ್ತದೆ ಮತ್ತು ಆ ಮುಖಾಂತರ ದೇಹದ ತೂಕವನ್ನು ಕಡಿಮೆ ಮಾಡುತ್ತದೆ.

ಉ. ಬೆನ್ನಿನ ಮೂಳೆ ಮತ್ತು ಸೊಂಟದ ಬಿಗಿತನವು ಸಡಿಲವಾಗುತ್ತದೆ.

ಉ. ಪಚನಶಕ್ತಿಯನ್ನು ವೃದ್ಧಿಸುತ್ತದೆ.

ಊ. ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಸೂರ್ಯನಮಸ್ಕಾರ ಮಾಡುವಾಗ ಪಠಿಸಬೇಕಾದ ನಾಮಗಳು

ಓಂ ಮಿತ್ರಾಯ ನಮಃ

ಓಂ ರವಯೇ ನಮಃ

ಓಂ ಸೂರ್ಯಾಯ ನಮಃ

ಓಂ ಭಾನವೇ ನಮಃ

ಓಂ ಖಗಾಯ ನಮಃ

ಓಂ ಪೂಷ್ಣೇ ನಮಃ

ಓಂ ಹಿರಣ್ಯಗರ್ಭಾಯ ನಮಃ

ಓಂ ಮರೀಚ್ಯೇ ನಮಃ

ಓಂ ಆದಿತ್ಯಾಯ ನಮಃ

ಓಂ ಸವಿತ್ರೇ ನಮಃ

ಓಂ ಅರ್ಕಾಯ ನಮಃ

ಓಂ ಭಾಸ್ಕರಾಯ ನಮಃ

ಓಂ ಶ್ರೀ ಸವಿತೃ ಸೂರ್ಯ ನಾರಾಯಣಾಯ ನಮಃ

(ಆಧಾರ – ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣ)