ಚೀನಾದ ೧೮ ಸೈನಿಕರ ಕತ್ತು ಮುರಿದು ಹತ್ಯೆ ಮಾಡಿದ ಭಾರತೀಯ ಸೈನಿಕರು !

ಜೂನ್ ೧೫ ರಂದು ಭಾರತ-ಚೀನಾ ಸೈನಿಕರ ನಡುವಿನ ಘರ್ಷಣೆಯ ವಿವರ

ಭಾರತೀಯ ಸೈನಿಕರ ಸಾಹಸದ ಮುಂದೆ ಚೀನಾದ ಸೈನಿಕರು ಎದುರಿಸಲು ಸಾಧ್ಯವಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಭಾರತವು ಚೀನಾದ ವಿರುದ್ಧ ಕಠಿಣ ಹೆಜ್ಜೆಯನ್ನು ಇಡುವುದು ಅಗತ್ಯವಿದೆ !

ನವ ದೆಹಲಿ – ಜೂನ್ ೧೫ ರ ರಾತ್ರಿಯಂದು ಗಲವಾನ್ ಕಣಿವೆಯಲ್ಲಿ ಭಾರತೀಯ ಸೈನಿಕರು ಹಾಗೂ ಚೀನಾದ ಸೈನಿಕರ ನಡುವೆ ನಡೆದ ಕಾಳಗದಲ್ಲಿ ತೋರಿದ ಪರಾಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಯು ಈಗ ಬಹಿರಂಗವಾಗುತ್ತಿದೆ. ಆರಂಭದಲ್ಲಿ ಚೀನಾವು ಭಾರತೀಯ ಸೈನ್ಯದ ಕಮಾಂಡಿಗ್ ಆಫಿಸರ್ ಕರ್ನಲ ಬಿ. ಸಂತೋಷ ಬಾಬುರವರ ಮೇಲೆ ದಾಳಿ ಮಾಡಿದರು. ಇದರಲ್ಲಿ ಅವರು ಹುತಾತ್ಮರಾದ ನಂತರ ಬಿಹಾರ್ ರೆಜಮೆಂಟ್ ಸೈನಿಕರ ಆಕ್ರೋಶ ಭುಗಿಲೆದ್ದಿತು ಅವರು ಒಂದೊಂದಾಗಿ ಚೀನಾದ ೧೮ ಸೈನಿಕರ ಕುತ್ತಿಗೆಯನ್ನು ಮುರಿದು ಅವರನ್ನು ಹತ್ಯೆ ಮಾಡಿರುವ ಬಗ್ಗೆ ಒಂದು ಆಂಗ್ಲ ದಿನ ಪತ್ರಿಕೆಯು ಮೂಲಗಳಿಂದ ಮಾಹಿತಿ ನೀಡಿದೆ. ‘ಚೀನಾ ಈ ಸೈನಿಕರ ಕತ್ತಿನ ಮೂಳೆ ಮುರಿದ್ದಿತ್ತು ಹಾಗೂ ಅವರ ಕತ್ತು ನೇತಾಡುತ್ತಿತ್ತು. ಭಾರತೀಯ ಸೈನಿಕರು ಚೀನಾದ ಸೈನಿಕರ ಸ್ಥಿತಿಯನ್ನು ಇಷ್ಟು ಹಾಳು ಮಾಡಿದ್ದರೆಂದರೆ ಅವರನ್ನು ಗುರುತಿಸುವುದೂ ಕಷ್ಟವಾಗಿತ್ತು’, ಎಂಬ ಮಾಹಿತಿಯು ಸೈನ್ಯದ ಓರ್ವ ಅಧಿಕಾರಿ ನೀಡಿದ್ದಾರೆ.

ಚೀನಾದ ಸೈನಿಕರನ್ನು ಅಟ್ಟಡಿಸಿ ಹೊಡೆದ ಭಾರತೀಯ ಸೈನಿಕರು !

ಚೀನಾದ ಸೈನಿಕರು ವಿಶ್ವಾಸಘಾತದಿಂದ ದಾಳಿಯನ್ನು ಮಾಡಿದರು, ಆಗ ಅವರ ಸಂಖ್ಯೆ ಭಾರತೀಯ ಸೈನಿಕರ ಸಂಖ್ಯೆಗಿಂತ ಹೆಚ್ಚಿತ್ತು. ಆದ್ದರಿಂದ ಭಾರತೀಯ ಸೈನಿಕರ ಎರಡನೇ ತುಕಡಿಗೆ ಇದರ ಬಗ್ಗೆ ಮಾಹಿತಿಯನ್ನು ನೀಡಿ ಸಹಾಯವನ್ನು ಕೇಳಿತು. ಆಗ ಸೈನಿಕರ ‘ಘಾತಕ ಪಡೆ’ ಅಲ್ಲಿ ತಲುಪಿತು. ಈ ಪಡೆಯಲ್ಲಿ ಕೇವಲ ೬೦ ಸೈನಿಕರಿದ್ದರು; ಆದರೆ ಅವರು ಪರಕ್ರಮವನ್ನು ತೋರುತ್ತಾ ಕೆಲವು ಚೀನಾದ ಸೈನಿಕರನ್ನು ಹತ್ಯೆ ಮಾಡಿದರು. ಚೀನಾದ ಬಳಿ ಖಡ್ಗ ಹಾಗೂ ಕಬ್ಬಿಣದ ಸಲಾಕೆ ಇತ್ತು. ಭಾರತೀಯ ಸೈನಿಕರು ಅದನ್ನು ಕಸಿದುಕೊಂಡು ಅವರ ಮೇಲೆ ದಾಳಿ ಮಾಡಿದರು. ಬಿಹಾರ ರೆಜಿಮೆಂಟ್ ಸೈನಿಕರ ಆಕ್ರೋಶ ನೋಡಿ ನೂರಾರು ಸಂಖ್ಯೆಯಲ್ಲಿದ್ದ ಚೀನಾದ ಸೈನಿಕರು ಓಡಲು ಆರಂಭಿಸಿದರು ಹಾಗೂ ಕಣಿವೆಯಲ್ಲಿ ಅಡಗಿ ಕುಳಿತರು. ತದನಂತರ ಭಾರತೀಯ ಸೈನಿಕರು ಅವರನ್ನು ಹುಡುಕು ಹುಡುಕಿ ಅಟ್ಟಾಡಿಸಿ ಹೊಡೆದರು.

ಚೀನಾದ ಕರ್ನಲ್‌ನನ್ನು ಹಿಡಿದಿದ್ದರು !

ಸೈನಿಕರ ಮೂಲಗಳು ನೀಡಿದ ಮಾಹಿತಿಯ ಪ್ರಕಾರ, ‘ಈ ಕಾಳಗದಲ್ಲಿ ಭಾರತವು ಚೀನಾದ ಓರ್ವ ಕರ್ನಲ್‌ನನ್ನು ಹಿಡಿದ್ದರು. ಈ ಸಂಪೂರ್ಣ ಘರ್ಷಣೆಯಲ್ಲಿ ಚೀನಾದ ೫೦ ಕ್ಕೂ ಹೆಚ್ಚು ಸೈನಿಕರು ಸಾವಿಗೀಡಾಗಿರುವ ಸಾಧ್ಯತೆಗಳಿವೆ.’ ಎಂದು ಹೇಳಿದ್ದಾರೆ.